ಬೆಂಗಳೂರಲ್ಲಿ ಪರಿಸರ ಸ್ನೇಹಿ ವಾಹನ ಬುಕ್ ಮಾಡಲು ಅನುಮತಿ: ಉಬರ್ ಕಂಪನಿಯಿಂದ 'ಉಬರ್ ಗ್ರೀನ್' ಸೇವೆ
ಉಬರ್ ಕಂಪನಿ ಬೆಂಗಳೂರಲ್ಲಿ "ಉಬರ್ ಗ್ರೀನ್" ಸೇವೆಗಳನ್ನು ಪ್ರಾರಂಭಿಸಿದ್ದು, ಈ ಮೂಲಕ ಬಳಕೆದಾರರು ಎಲೆಕ್ಟ್ರಿಕ್ ವಾಹನಗಳನ್ನು ಬುಕ್ ಮಾಡಬಹುದು.
ಬೆಂಗಳೂರು (ಡಿಸೆಂಬರ್ 1, 2023): ಬೆಂಗಳೂರಲ್ಲಿ ಅನೇಕರು ಓಲಾ, ಉಬರ್, ನಮ್ಮಯಾತ್ರಿ ಆ್ಯಪ್ ಮುಂತಾದ ಅಪ್ಲಿಕೇಷನ್‌ಗಳಲ್ಲಿ ಆಟೋ, ಕ್ಯಾಬ್‌ಗಳಲ್ಲಿ ಅನೇಕರು ಪ್ರಯಾಣಿಸುತ್ತಾರೆ. ಈ ಪೈಕಿ ಉಬರ್ ಕಂಪನಿಯಲ್ಲಿಯೂ ಅನೇಕರು ಆಟೋ, ಕ್ಯಾಬ್ ಮುಂತಾದ ಸೇವೆಗಳನ್ನು ಪಡೆಯುತ್ತಾರೆ. ಈಗ ಗುರುವಾರ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಉಬರ್ ಕಂಪನಿ ಹೊಸ ಸೇವೆಯನ್ನು ಪ್ರಾರಂಭಿಸಿದೆ.
ಉಬರ್ ಕಂಪನಿ "ಉಬರ್ ಗ್ರೀನ್" ಸೇವೆಗಳನ್ನು ಪ್ರಾರಂಭಿಸಿದ್ದು ಇದರ ಮೂಲಕ ಬಳಕೆದಾರರು ಈಗ ಎಲೆಕ್ಟ್ರಿಕ್ ವಾಹನಗಳ ಮೂಲಕ ಪರಿಸರ ಸ್ನೇಹಿ, ಸುಸ್ಥಿರ ಸವಾರಿಗಳನ್ನು ಬುಕ್ ಮಾಡಬಹುದು. ಹೊಸ "ಗ್ರೀನ್" ಸೇವೆಯನ್ನು ಟೆಕ್ ಹಬ್ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ, ನಿರ್ದಿಷ್ಟವಾಗಿ ಮಧ್ಯ ಬೆಂಗಳೂರು ಭಾಗದಲ್ಲಿ ಪ್ರಾರಂಭಿಸಲಾಗಿದೆ ಮತ್ತು ಇದು ಶೀಘ್ರದಲ್ಲೇ ನಗರದ ಇತರ ಭಾಗಗಳಲ್ಲಿಯೂ ಸಂಚರಿಸಲಿದೆ ಎಂದು ಕ್ಯಾಬ್ ಅಗ್ರಿಗೇಟರ್ ಮಾಹಿತಿ ನೀಡಿದೆ.
ಇದನ್ನು ಓದಿ: ಕ್ಯಾಬ್ ರೈಡ್ ಕ್ಯಾನ್ಸಲ್ ಮಾಡುತ್ತಲೇ ಬರೋಬ್ಬರಿ 23 ಲಕ್ಷ ರೂ. ಗಳಿಸಿದ ಚಾಲಾಕಿ ಉಬರ್ ಚಾಲಕ!
ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR), ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (IT & BT) ಸಚಿವ ಪ್ರಿಯಾಂಕ್ ಖರ್ಗೆ ಉಬರ್ ಗ್ರೀನ್ ಸೇವೆಗೆ ಚಾಲನೆ ನೀಡಿದ್ದಾರೆ. ಬೆಂಗಳೂರು ಟೆಕ್ ಶೃಂಗಸಭೆ 2023 ರಲ್ಲಿ ಭಾಗವಹಿಸಿದ್ದ ವೇಳೆಯಲ್ಲಿಯೇ ಸಚಿವರು ಹಸಿರು ನಿಶಾನೆ ತೋರಿದ್ದಾರೆ.
ಉಬರ್ ಗ್ರೀನ್ ಸೇವೆಗಳು ಈಗಾಗಲೇ ಹಲವಾರು ಜಾಗತಿಕ ಸ್ಥಳಗಳಲ್ಲಿ ಜಾರಿಯಲ್ಲಿವೆ ಮತ್ತು ಬೆಂಗಳೂರಿನ ಗ್ರಾಹಕರು ಈಗ ತಮ್ಮ ಅಪ್ಲಿಕೇಶನ್‌ನಲ್ಲಿ Uber Green ಆಯ್ಕೆಯ ಮೂಲಕ ಪರಿಸರ ಸ್ನೇಹಿ ಸವಾರಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು, ಈ ಸೇವೆ ಇಂದಿನಿಂದ ಲಭ್ಯವಿರುತ್ತದೆ ಎಂದು ಕಂಪನಿಯು ಮಾಹಿತಿ ನೀಡಿದೆ. ಸೇವೆಯು ಸವಾರರಿಗೆ ಹೆಚ್ಚು ಸುಸ್ಥಿರ ಸಾರಿಗೆಯನ್ನು ಆಯ್ಕೆ ಮಾಡಲು ಪ್ರಜ್ಞಾಪೂರ್ವಕ ಆಯ್ಕೆಯನ್ನು ಮಾಡಲು ಅನುವು ಮಾಡಿಕೊಡುತ್ತದೆ ಎಂದು ಪಿಟಿಐ ಉಲ್ಲೇಖಿಸಿದಂತೆ ಕಂಪನಿಯು ಹೇಳಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಆಟೋ ಓಡಿಸ್ತಾರೆ ಈ ಕಂಪನಿಯ ಉನ್ನತ ಅಧಿಕಾರಿ, ಐಐಎಂ ಪದವೀಧರ!
ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟವನ್ನು ಸುಧಾರಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ಉಬರ್‌ನ ಈ ಸೇವೆ ಹಸಿರು ಶೃಂಗಸಭೆಗೆ ನಮ್ಮ ಬದ್ಧತೆಯನ್ನು ಅನುಮೋದಿಸುತ್ತದೆ. ನಾವು ದೀರ್ಘಾವಧಿಯಲ್ಲಿ ಪರಿಣಾಮಕಾರಿ ಹಾಗೂ ಅರ್ಥಪೂರ್ಣ ಬದಲಾವಣೆಗಳಿಗೆ ದಾರಿ ಮಾಡಿಕೊಡುವ ಮತ್ತು ಸುಸ್ಥಿರತೆಯ ಸಂಸ್ಕೃತಿಯನ್ನು ಬೆಳೆಸುವ ಸ್ಪಷ್ಟವಾದ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಈ ಮಧ್ಯೆ, ಉಬರ್ ಸುಸ್ಥಿರತೆಗೆ ಅಚಲವಾದ ಬದ್ಧತೆಯನ್ನು ಹೊಂದಿದೆ ಮತ್ತು ಉಬರ್ ಗ್ರೀನ್ ಅದರತ್ತ ಒಂದು ಹೆಜ್ಜೆಯಾಗಿದೆ. ಬೆಂಗಳೂರಿನಲ್ಲಿ ಈ ಸೇವೆ ಆರಂಬವಾಗಿದ್ದು, ಇದು ಉಬರ್ ಗ್ರೀನ್‌ಗಾಗಿ ದೇಶದಲ್ಲಿ ನಮ್ಮ ಎರಡನೇ ನಿಲ್ದಾಣವಾಗಿದೆ. ಇದು ಈಗಾಗಲೇ ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿದೆ, ಅಲ್ಲಿ ಅನೇಕ ಸವಾರರು ಇದನ್ನು ಬಳಸುತ್ತಿದ್ದಾರೆ ಎಂದು ಉಬರ್ ಇಂಡಿಯಾದ ಉನ್ನತ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.
ಟ್ರಾಫಿಕ್‌ನಲ್ಲಿ ಸಿಲುಕಿದ ಬೆಂಗಳೂರು ವ್ಯಕ್ತಿಗೆ 'ಸಹಾಯ ಬೇಕೇ...?' ಎಂದು ಉಬರ್ ನೋಟಿಫಿಕೇಷನ್: ಪೋಸ್ಟ್ ವೈರಲ್