Asianet Suvarna News Asianet Suvarna News

ಕೊರೋನಾ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ಸಭಾಪತಿ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಹೊರದೇಶ-ರಾಜ್ಯಗಳಿಂದ ನಿರಂತರ ಜನರು ಬರಲು ಅವಕಾಶ ಕೊಟ್ಟು, ಕೇವಲ 7 ದಿನಗಳ ಕ್ವಾರಂಟೈನ್‌ನಲ್ಲಿಟ್ಟು, ಕೋವಿಡ್‌ ಪರೀಕ್ಷಾ ವರದಿ ಬರುವ ಮುನ್ನವೇ ಬಿಡುಗಡೆ ಮಾಡಿದ್ದು ಸರಿಯಲ್ಲ| ಹಸಿರು ವಲಯದಲ್ಲಿದ್ದ ಉಡುಪಿ ಜಿಲ್ಲೆ ಕೆಂಪು ವಲಯವಾಗಿದೆ| ಇಷ್ಟಾದರೂ ಜಿಲ್ಲಾ ಉಸ್ತುವಾರಿ ಮಂತ್ರಿ, ಸಂಸದೆ, ಚುನಾಯಿತ ಪ್ರತಿನಿಧಿಗಳು ಈ ಬಗ್ಗೆ ಯಾವುದೇ ಆಸಕ್ತಿ ವಹಿಸದಿರುವುದು ತೀರ ಅಕ್ಷಮ್ಯ ಎಂದ ಸಭಾಪತಿ| 

U R Sabhapati says State Government Failure of Prevent Coronavirus
Author
Bengaluru, First Published Jun 8, 2020, 10:26 AM IST

ಉಡುಪಿ(ಜೂ.08): ಕರ್ನಾಟಕದಲ್ಲಿ ಕೊರೋನಾ ಮಹಾಮಾರಿಯ ನಿಯಂತ್ರಣ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಉಡುಪಿ ಮಾಜಿ ಶಾಸಕ, ಜಿಲ್ಲಾ ಕಾಂಗ್ರೆಸ್‌ ಟಾಸ್ಕ್‌ಫೋರ್ಸ್‌ ಸಮಿತಿ ಅಧ್ಯಕ್ಷ ಯು.ಆರ್‌.ಸಭಾಪತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದ.ಕ., ಉಡುಪಿ ಜಿಲ್ಲೆಗಳಿಗೆ ಹೊರದೇಶ-ರಾಜ್ಯಗಳಿಂದ ನಿರಂತರ ಜನರು ಬರಲು ಅವಕಾಶ ಕೊಟ್ಟು, ಕೇವಲ 7 ದಿನಗಳ ಕ್ವಾರಂಟೈನ್‌ನಲ್ಲಿಟ್ಟು, ಕೋವಿಡ್‌ ಪರೀಕ್ಷಾ ವರದಿ ಬರುವ ಮುನ್ನವೇ ಬಿಡುಗಡೆ ಮಾಡಿದ್ದು ಸರಿಯಲ್ಲ. ಹಸಿರು ವಲಯದಲ್ಲಿದ್ದ ಉಡುಪಿ ಜಿಲ್ಲೆ ಕೆಂಪು ವಲಯವಾಗುತ್ತಿದೆ. ಇಷ್ಟಾದರೂ ಜಿಲ್ಲಾ ಉಸ್ತುವಾರಿ ಮಂತ್ರಿ, ಸಂಸದೆ, ಚುನಾಯಿತ ಪ್ರತಿನಿಧಿಗಳು ಈ ಬಗ್ಗೆ ಯಾವುದೇ ಆಸಕ್ತಿ ವಹಿಸದಿರುವುದು ತೀರ ಅಕ್ಷಮ್ಯ ಎಂದು ಹೇಳಿದರು. 

ಕೊರೋನಾ ಕಾಟ: ಉಡುಪಿಯ ಒಟ್ಟು ಸೋಂಕಿತರು 902, ರಾಜ್ಯದಲ್ಲೇ ಗರಿಷ್ಠ..!

ನಮ್ಮಲ್ಲಿ ದಿನಕ್ಕೆ ನೂರು ಜನರ ಪರೀಕ್ಷೆ ಮಾಡುವುದಷ್ಟೇ ಸಾಧ್ಯ ಎಂದು ಜಿಲ್ಲಾಧಿಕಾರಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇರುವ ಆಸ್ಪತ್ರೆಗಳ ವೈದ್ಯರು ಸಾಕಷ್ಟು ವೈದ್ಯಕೀಯ ಕಿಟ್‌ಗಳನ್ನು ಒದಗಿಸಲು ಸರ್ಕಾರ ವಿಫಲವಾಗಿರುವುದು ವೈದ್ಯರಲ್ಲೂ ಅಸಮಾಧಾನಕ್ಕೆ ಕಾರಣವಾಗಿದೆ. ಸರ್ಕಾರ ಇನ್ನೂ ಇದೇ ರೀತಿ ನಿರ್ಲಕ್ಷ್ಯ ಮಾಡಿದಲ್ಲಿ ಕಾಂಗ್ರೆಸ್‌ ಪಕ್ಷ ಸಾರ್ವಜನಿಕರೊಂದಿಗೆ ಸೇರಿ ತೀವ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸಭಾಪತಿ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
 

Follow Us:
Download App:
  • android
  • ios