Asianet Suvarna News Asianet Suvarna News

ಹಿರೇಕೆರೂರಿನಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಯಾರಿಗೆ ಸಿಗಲಿದೆ ಟಿಕೆಟ್?

ಹಾವೇರಿ ಜಿಲ್ಲೆಯ ಹಿರೇಕೆರೂರು ಉಪಚುನಾವಣೆ| ಬಿ. ಸಿ. ಪಾಟೀಲ್ ರಾಜೀನಾಮೆ ನೀಡಿದ್ದರಿಂದ ಈ ಉಪಚುನಾವಣೆ| ಬಿಜೆಪಿಯಿಂದ ಬಿ. ಸಿ ಪಾಟೀಲ್ ಗೆ ಟಿಕೆಟ್ ನೀಡುವ ಸಾಧ್ಯತೆ| ಮಾಜಿ ಶಾಸಕ ಯು.ಬಿ.ಬಣಕಾರ್ ಗೆ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪುವ ಆತಂಕ| ಇಂದು ಭಾರಿ ಪ್ರತಿಭಟನೆ ಸಾಧ್ಯತೆ| 

U B Banakar Supporters Upset For BJP high command
Author
Bengaluru, First Published Sep 25, 2019, 12:46 PM IST

ಹಿರೇಕೆರೂರು:(ಸೆ. 25) ಹಾವೇರಿ ಜಿಲ್ಲೆಯ ಹಿರೇಕೆರೂರು ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಿಗದಿಯಾದ ಬೆನ್ನಲ್ಲೇ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹಿರೇಕೆರೂರು ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದ ಬಿ. ಸಿ. ಪಾಟೀಲ್ ರಾಜೀನಾಮೆ ನೀಡಿದ್ದರಿಂದ ಈ ಉಪಚುನಾವಣೆ ಎದುರಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 


ಬಿ. ಸಿ. ಪಾಟೀಲ್ ಅವರು ಬಿಜೆಪಿ ಜತೆ ಸೇರಿಕೊಂಡು ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಉರುಳಿಸಲು ನೆರವಾಗಿದ್ದರು ಎಂದು ಹೇಳಲಾಗಿದೆ. ಹೀಗಾಗಿ ಈ ಉಪಚುನಾವಣೆಯಲ್ಲಿ ಹಿರೇಕೆರೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ನೀಡಲಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಮಾಜಿ ಶಾಸಕ ಶಾಸಕ ಯು.ಬಿ.ಬಣಕಾರ್ ಗೆ ಆವರಿಗೆ ಬಿಜೆಪಿ ಟಿಕೆಟ್ ಕೈತಪ್ಪುವ ಆತಂಕ ಎದುರಾಗಿದೆ. 

ಭಾರೀ ಪ್ರತಿಭಟನೆ ಸಾಧ್ಯತೆ


ಬಿ. ಸಿ. ಪಾಟೀಲ್ ಅವರಿಗೆ ಅಥವಾ ಅವರ ಕುಟುಂಬಕ್ಕೆ ಯಾವುದೇ ಕಾರಣಕ್ಕೂ ಬಿಜೆಪಿ ಟಿಕೆಟ್ ನೀಡಬಾರದು ಎಂದು ಆಗ್ರಹಿಸಿ ಮಾಜಿ ಯು.ಬಿ.ಬಣಕಾರ್ ಅವರ ಬೆಂಬಲಿಗರು ಇಂದು ಪಟ್ಟಣದಲ್ಲಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಈ ಪ್ರತಿಭಟನೆಯಲ್ಲಿ ಬಣಕಾರ್ ಅವರ ಸಾವಿರಾರು ಬೆಂಬಲಿಗರು ಭಾಗವಹಿಸುವ ಸಾಧ್ಯತೆ ಇದೆ. 

ಆತಂಕದಲ್ಲಿ ಬಿಜೆಪಿ ಕಾರ್ಯಕರ್ತರು


ಬದಲಾದ ರಾಜಕೀಯ ಸನ್ನಿವೇಶದಿಂದ ಹಿರೇಕೆರೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಆತಂಕದಲ್ಲಿದ್ದಾರೆ. ಒಂದು ವೇಳೆ ಬಿ.ಸಿ.ಪಾಟೀಲ್ ಆವರಿಗೆ ಬಿಜೆಪಿ ಟಿಕೆಟ್ ನೀಡಿದರೆ ಭಿನ್ನಮತ ಸ್ಫೋಟ ಸಾಧ್ಯತೆ ಹೆಚ್ಚಾಗಿದೆ. 
ಪಾಟೀಲ್ ವಿರುದ್ಧ 555 ಮತಗಳ ಅಂತರದಲ್ಲಿ ಸೋತಿದ್ದ ಬಣಕಾರ್ ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಶಾಸಕ ಯು.ಬಿ.ಬಣಕಾರ್ ಅವರು ಬಿ.ಸಿ.ಪಾಟೀಲ್ ವಿರುದ್ಧ ಕೇವಲ 555 ಮತಗಳ ಅಂತರದಲ್ಲಿ ಪರಾಭವ ಹೊಂದಿದ್ದರು. ಹೀಗಾಗಿ ಬಣಕಾರ್ ಆವರಿಗೆ ಟಿಕೆಟ್ ತಪ್ಪಿದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕಾರ್ಯಕರ್ತರು ಹಾಗೂ ಬಿಜೆಪಿ ಕಟ್ಟಾಳುಗಳು ಒತ್ತಾಯ ಮಾಡುತ್ತಿದ್ದಾರೆ. 
 

Follow Us:
Download App:
  • android
  • ios