ಉಡುಪಿ(ಏ.28): ಕುಂದಾಪುರದ ಮುದ್ದುಗುಡ್ಡೆಯ ಆಶಾ ಕಾರ್ಯಕರ್ತೆ ಲಕ್ಷ್ಮಿ ಸಿ. ಅವರಿಗೆ ಸ್ಥಳೀಯ ನಿವಾಸಿ ಸಂದೀಪ ಮೇಸ್ತ ಯಾನೆ ವಿಕ್ಕಿ ಮೇಸ್ತ ಮತ್ತು ಮಹೇಶ್‌ ಎಂಬವರು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವ​ಮಾ​​ನಿ​ಸಿದ್ದಾರೆ.

"

ಸಂದೀಪ ಬೆಂಗಳೂರಿನಿಂದ ಊರಿಗೆ ಬಂದಿದ್ದು 28 ದಿನಗಳ ಹೋಮ್‌ ಕ್ವಾರಂಟೈನ್‌ ವಿಧಿಸಲಾಗಿತ್ತು. ಆದರೆ ಆತ ಊರಲ್ಲಿ ತಿರುಗಾಡುತ್ತಿದ್ದ. ಈ ಬಗ್ಗೆ 21ರಂದು ಮತ್ತು 24ರಂದು ಲಕ್ಷ್ಮೀ ಅವರಿಗೆ ಹೊರಗೆ ತಿರುಗದೇ ಮನೆಯಲ್ಲಿರುವಂತೆ ಹೇಳಿದ್ದರು.

ಉಡುಪಿ ಈಗ ಗ್ರೀನ್‌ ಝೋನ್‌, ಆದರೂ ಸಡಿಲವಾಗದ ಲಾಕ್‌ಡೌನ್

24ರಂದು ಸಂಜೆ 6 ಗಂಟೆಗೆ ಖಾರ್ವಿಕೇರಿಯ ಮಹೇಶ್‌ ಖಾರ್ವಿ ಮತ್ತು ಸಂದೀಪ್‌ ಬೈಕಿನಲ್ಲಿ ಬಂದು, ಲಕ್ಷ್ಮೀ ಅವರಿಗೆ ನಿನ್ನನ್ನು ಮುದ್ದುಗುಡ್ಡೆಯಲ್ಲಿ ಬದುಕಲು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿ, ಅವರ ಕೈಯಲ್ಲಿದ್ದ ಕೋವಿಡ್‌ 19 ಸ್ಟಿಕ್ಕರ್‌ ಎಳೆದಿದ್ದಾರೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾಕ್‌​ಡೌನ್‌ ನಿಯಮ ಉಲ್ಲಂಘನೆ: ಪ್ರಕ​ರಣ ದಾಖ​ಲು

ಶಂಕರನಾರಾಯಣದ  ಸಿದ್ದಾಪುರ ಗ್ರಾಮದ ಜನ್ಸಾಲೆ ಎಂಬಲ್ಲಿ ಶಿವರಾಮ ಕುಲಾಲ್‌ ಎಂಬುವವರ ಮನೆಯಲ್ಲಿ ಮಗ ಮಂಜುನಾಥ ಕುಲಾಲ್‌ ಅವರ ಮದುವೆ ಮೆಹಂದಿ ಕಾರ್ಯಕ್ರಮದಲ್ಲಿ ಲಾಕ್‌ ಡೌನ್‌ ನಿಯಮಗಳನ್ನು ಉಲ್ಲಂಘಿಸಿದ ಬಗ್ಗೆ ಪ್ರಕರಣ ದಾಖಲಾಗಿದೆ. ಭಾನುವಾರ ಈ ಕಾರ್ಯಕ್ರಮದಲ್ಲಿ 15 - 20 ಜನ ಸೇರಿದ್ದರು. ಕೊರೋನಾ ಹರಡುವ ಸಾಧ್ಯತೆಯಿಂದ ಇಂತಹ ಕಾರ್ಯಕ್ರಮಗಳಿಗೆ ನಿರ್ಬಂಧ ಇದ್ದರೂ ಅದನ್ನು ಉಲ್ಲಂಘಿಸಿದ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.