ಉಡುಪಿ(ಏ.28): ಉಡುಪಿ ಜಿಲ್ಲೆಯನ್ನು ಸಕ್ರಿಯ ಕೋರೋನಾ ಪಾಸಿಟಿವ್‌ ಪ್ರಕರಣಗಳಿಲ್ಲದ ಗ್ರೀನ್‌ ಝೋನ್‌ ಎಂದು ಆರೋಗ್ಯ ಇಲಾಖೆಯು ಅಧಿಕೃತವಾಗಿ ಘೋಷಿಸಿದೆ. ಆದರೆ ಈ ಕಾರಣಕ್ಕೆ ಜಿಲ್ಲೆಯಲ್ಲಿ ಲಾಕ್‌ಡೌನ್‌ನಲ್ಲಿ ಹೆಚ್ಚಿನ ರಿಯಾಯತಿಗಳು ಸಿಗುವ ಸಾಧ್ಯತೆಗಳಿಲ್ಲ.

ಉಡುಪಿಯಲ್ಲಿ ಪತ್ತೆಯಾದ 3 ಕೊರೋನಾ ಪ್ರಕರಣಗಳ ರೋಗಿಗಳು ಗುಣಮುಖವಾಗಿ ಮನೆಗೆ ಹಿಂತಿರುಗಿದ್ದಾರೆ. ಕಳೆದ 29 ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಯಾವುದೇ ಹೊಸ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿಲ್ಲ, ಕಳೆದ 3 ದಿನಗಳಿಂದ ಕೊರೋನಾ ಲಕ್ಷಣಗಳಿರುವ ಅಥವಾ ಕೊರೋನಾ ರೋಗಿಗಳೊಂದಿಗೆ ಸಂಪರ್ಕದಲ್ಲಿದ್ದವರು ಜಿಲ್ಲೆಯಲ್ಲಿ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಆರೇಂಜ್‌ ಝೋನ್‌ನಲ್ಲಿದ್ದ ಉಡುಪಿ ಜಿಲ್ಲೆ ಸೋಮವಾರ ಗ್ರೀನ್‌ ಝೋನ್‌ ಗೆ ಬಂದಿದೆ.

ಗಡಿ ಓಪನ್ ಮಾಡಿ ಎಂದ ಕೇರಳ ಸಿಎಂನಿಂದ ಗಡಿ ಮುಚ್ಚೋಕೆ ಸ್ಟ್ರಿಕ್ಟ್ ಆರ್ಡರ್..!

ಈ ಮಧ್ಯೆ ಸೋಮವಾರ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಜಿಪಂ ಸಿಇಓಗಳೊಂದಿಗೆ ನಡೆದ ಮುಖ್ಯಮಂತ್ರಿಗಳ ವಿಡಿಯೋ ಕಾನ್ಪರೆನ್ಸ…ನಲ್ಲಿ ಗ್ರೀನ್‌ ಝೋನ್‌ಗೆ ಬಂದಿರುವ ಉಡುಪಿ ಜಿಲ್ಲೆಗೆ ನೀಡಬಹುದಾದ ರಿಯಾಯತಿಗಳ ಬಗ್ಗೆ ಚರ್ಚೆ ನಡೆದಿದೆ.

ಹಜ್‌ ಯಾತ್ರೆಗೆ ಕೂಡಿಟ್ಟ ಹಣದಿಂದ ಬಡವರ ಹೊಟ್ಟೆ ತುಂಬಿಸಿದ ಅಬ್ದುಲ್..!

‘ರಿಯಾಯತಿಗಳನ್ನು ನೀಡುವುದಕ್ಕೆ ತೀರಾ ಅವಸರ ಬೇಡ, ಬಿಗಿ ನಿರ್ಬಂಧಗಳೊಂದಿಗೆ ಗ್ರಾಮೀಣ ಪ್ರದೇಶಗಳಿಗಷ್ಟೇ ರಿಯಾಯತಿ ನೀಡಿ’ ಎಂದು ಸಿಎಂ ಸೂಚಿಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ. ಅಲ್ಲದೇ ವಿಪತ್ತು ನಿರ್ವಹಣಾ ಇಲಾಖೆಯಿಂದ ಇನ್ನಷ್ಟೇ ಮಾರ್ಗಸೂಚಿಗಳು ಬರಬೇಕಾಗಿದೆ, ಅದರಂತೆ ರಿಯಾಯತಿಗಳನ್ನು ನೀಡಲಾಗುವುದು ಎಂದವರು ತಿಳಿಸಿದ್ದಾರೆ.

40 ವರದಿ ಬರಬೇಕಿದೆ: ಸೋಮವಾರ ಜಿಲ್ಲೆಯಿಂದ ಒಟ್ಟು 15 ಮಂದಿಯ ಗಂಟಲದ್ರವದ ಮಾದರಿಗಳನ್ನು ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರಲ್ಲಿ 8 ಪ್ರಕರಣಗಳು, 5 ಉಸಿರಾಟದ ತೊಂದರೆ ಮತ್ತು 2 ಕೋವಿಡ್‌ ಶಂಕಿತರು ಸೇರಿದ್ದಾರೆ.

ಖರ್ಜೂರ ಸಾಗಿಸುವ ಕ್ಯಾಂಟರ್‌ನಲ್ಲಿ ಬಂದಿದ್ದ ಸೋಂಕಿತ: ಪೆಟ್ರೋಲ್ ಬಂಕ್‌ನಲ್ಲಿ ಸ್ನಾನ

ಸೋಮವಾರ 16 ಮಾದರಿಗಳ ವರದಿಗಳು ಬಂದಿದ್ದು, ಎಲ್ಲವೂ ನೆಗೆಟಿವ್‌ ಬಂದಿವೆ, ಇನ್ನೂ 40 ವರದಿಗಳಿಗಾಗಿ ಕಾಯಲಾಗುತ್ತಿದೆ. 47 ಮಂದಿ ಐಸೋಲೇಶನ್‌ ವಾರ್ಡಿನಲ್ಲಿ ನಿಗಾದಲ್ಲಿದ್ದರೆ, 521 ಮಂದಿ ಹೋಮ್‌ ಕ್ವಾರಂಟೈನ್‌ ಮತ್ತು 27 ಮಂದಿ ಹಾಸ್ಟಿಟಲ್‌ ಕ್ವಾರಂಟೈನ್‌ ನಲ್ಲಿದ್ದಾರೆ

ರಾಜ್ಯದಲ್ಲಿಯೇ ಉಡುಪಿಗೆ ಉತ್ತಮ ಟೆಸ್ಟಿಂಗ್‌ ರೇಟಿಂಗ್‌

ಜಿಲ್ಲೆಯಲ್ಲಿ ಇದುವರೆಗೆ 3347 ಮಂದಿಯನ್ನು ಪರೀಕ್ಷೆಗೊಳುಡಿಸಲಾಗಿದ್ದು, ಅವರಲ್ಲಿ 2052 ಮಂದಿ 28 ದಿನಗಳ ಕ್ವಾರಂಟೈನ್‌ ಮತ್ತು 2752 14 ದಿನಗಳ ಕ್ವಾರಂಟೈನ್‌ ಪೂರೈಸಿದ್ದಾರೆ. 308 ಮಂದಿ ಐಸೋಲೇಶನ್‌ ನಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೆ ಒಟ್ಟು 1068 ಮಂದಿಯ ಗಂಟಲದ್ರವದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅವರಲ್ಲಿ 3 ಮಂದಿ ಪಾಸಿಟಿವ್‌ ಆಗಿದ್ದರೆ, 1025 ಮಂದಿ ನೆಗೆಟಿವ್‌ ಆಗಿದ್ದಾರೆ. ಈ ಪರೀಕ್ಷೆಯ ಪ್ರಮಾಣ ರಾಜ್ಯದಲ್ಲಿಯೇ ಅತ್ಯುತ್ತಮ ಎಂಬ ಹೆಗ್ಗಳಿಕೆಗೆ ಉಡುಪಿ ಜಿಲ್ಲೆ ಪಾತ್ರವಾಗಿದೆ.