Asianet Suvarna News Asianet Suvarna News

ಹಾನಗಲ್ಲ: ತೆರೆದ ನೀರಿನ ಟ್ಯಾಂಕ್‌ಲ್ಲಿ ಬಿದ್ದು 2 ವರ್ಷದ ಮಗು ಸಾವು

* ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದಲ್ಲಿ ನಡೆದ ಘಟನೆ
*  ಆಟವಾಡುತ್ತ ಹೋಗಿ ಟ್ಯಾಂಕ್‌ನಲ್ಲಿ ಬಿದ್ದು ಮೃತಪಟ್ಟ ಮಗು
*  ಶರಣ ವೀರಭದ್ರಪ್ಪ ವಿಭೂತಿ ಸಾವನಪ್ಪಿದ ಮಗು

Two Year Old Child Dies due to Fallen in to The Water Tank in Haveri grg
Author
Bengaluru, First Published Jul 31, 2021, 12:17 PM IST
  • Facebook
  • Twitter
  • Whatsapp

ಹಾನಗಲ್ಲ(ಜು.31): ತೆರೆದ ನೀರಿನ ಟ್ಯಾಂಕ್‌ನಲ್ಲಿ ಎರಡು ವರ್ಷದ ಮಗುವೊಂದು ಬಿದ್ದು ಮೃತಪಟ್ಟಿರುವ ಘಟನೆ ಪಟ್ಟಣದ ನವನಗರ ಬಡಾವಣೆಯಲ್ಲಿ ಸಂಭವಿಸಿದೆ.

ಮೃತಪಟ್ಟ ಬಾಲಕ ಪಟ್ಟಣದ ನವನಗರ ಬಡಾವಣೆಯ ಶರಣ ವೀರಭದ್ರಪ್ಪ ವಿಭೂತಿ ಎಂದು ಗುರುತಿಸಲಾಗಿದ್ದು, ಆಟವಾಡುತ್ತ ಹೋಗಿ ಟ್ಯಾಂಕ್‌ನಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. 

ಶ್ವಾಸನಾಳದಲ್ಲಿ ಜೀರುಂಡೆ ಸಿಲುಕಿ ಮಗು ಸಾವು

ಪೋಷಕರು ವ್ಯಾಪಾರ ಮುಗಿಸಿಕೊಂಡು ಬಂದು ಸಂಜೆಯಾದರೂ ಮನೆಗೆ ಮಗು ಬರಲಿಲ್ಲ ಎಂದು ಹುಡುಕಾಡುವಾಗ, ಆತನ ಹೆಜ್ಜೆಗುರುತಿನ ಜಾಲ ಹಿಡಿದು ಹೋದಾಗ ಆತ ಟ್ಯಾಂಕ್‌ನಲ್ಲಿ ಬಿದ್ದಿರುವುದು ಕಂಡುಬಂದಿದೆ ಎಂದು ಪೋಷಕರು ತಿಳಿಸಿದ್ದಾರೆ. 
 

Follow Us:
Download App:
  • android
  • ios