ಆಟವಾಡುತ್ತ ರಸ್ತೆ ಬದಿಯಲ್ಲಿ ಮಗು ಬಂದಿದ್ದ ವೇಳೆ ಇನ್ನೋವಾ ಕಾರು ಹರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮಗುವಿನ ಮೇಲೆ ಕಾರು ಹರಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೀದರ್(ಡಿ.27): ಇನ್ನೋವಾ ಕಾರು ಹರಿದ ಪರಿಣಾಮ 2 ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಹಾರೋಗೆರಿ ಬಳಿ ನಡೆದಿದೆ. ಗುರುಪಾದಪ್ಪಾ ನಾಗಮಾರಪಳ್ಳಿ ಆಸ್ಪತ್ರೆ ಎದುರು ಘಟನೆ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
2 ವರ್ಷದ ಬಸವಚೇತನ ಮೃತಪಟ್ಟ ದುರ್ದೈವಿ ಮಗು. ಹಾರೊಗೇರಿ ನಿವಾಸಿ ಸತೀಶ ಪಾಟೀಲ ಹಾಗೂ ಸಂಗೀತಾ ದಂಪತಿ ಪುತ್ರ ಬಸವಚೇತನ.
ಬೈಕ್ ಡಿಕ್ಕಿಯಾಗಿ ಪಾದಾಚಾರಿ ಸಾವು, ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರು ಕಾರು ಅಪಘಾತದಲ್ಲಿ ನಿಧನ!
ಆಟವಾಡುತ್ತ ರಸ್ತೆ ಬದಿಯಲ್ಲಿ ಮಗು ಬಂದಿದ್ದ ವೇಳೆ ಇನ್ನೋವಾ ಕಾರು ಹರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮಗುವಿನ ಮೇಲೆ ಕಾರು ಹರಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಗಾಂಧಿಗಂಜ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.
