ಶಾಲೆಯಲ್ಲೇ ಬೀಡಿ ಸೇದಿದ ಶಿಕ್ಷಕರ ಅಮಾನತು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 4, Aug 2018, 9:58 PM IST
Two Teachers suspended for allegedly smoked in school
Highlights

ಶಾಲೆಯಲ್ಲೇ ಬೀಡಿ ಸೇದಿದ ಶಿಕ್ಷಕರ ಅಮಾನತು

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು

ಮುಖ್ಯೋಪಾಧ್ಯಯರ ಕೊಠಡಿಯಲ್ಲಿ ಬೀಡಿ

ಸಿಂದಗಿ(ಆ.4): ಶಾಲಾ ಅವಧಿಯಲ್ಲಿಯೇ ಮುಖ್ಯೋಪಾಧ್ಯಯರ ಕೊಠಡಿಯಲ್ಲಿ ಬೀಡಿ ಸೇದುತ್ತಿದ್ದರು ಎಂಬ ಆರೋಪದ ಮೇಲೆ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಚಟ್ಟರಕಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾದ ಜೆ.ಎಂ.ಮೋಮಿನ್ ಹಾಗೂ ಆರ್.ಎನ್.ಇನಾಮದಾರ ಶಾಲಾ ಅವಧಿಯಲ್ಲೇ ಬೀಡಿ ಸೇದಿದ್ದರು ಎನ್ನಲಾಗಿದೆ.

ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಅವರ ವರದಿ ಆಧರಿಸಿ ಇಬ್ಬರು ಶಿಕ್ಷಕರನ್ನು ಡಿಡಿಪಿಐ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ ಘಟನೆ ನಡೆದಿದೆ.

ಶುಕ್ರವಾರ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿರಾದಾರ ಭೇಟಿ ನೀಡಿದಾಗ ಮುಖ್ಯೋಪಾಧ್ಯಾಯರು ಮಸೀದಿಗೆ ಪ್ರಾರ್ಥನೆ ಮಾಡಲು ತೆರಳಿದ್ದರು. ಆ ಸಮಯದಲ್ಲಿ ಈ ಇಬ್ಬರು ಶಿಕ್ಷಕರು ಶಾಲಾ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಬೀಡಿ ಸೇದುತ್ತಿರುವುದನ್ನು ಕಂಡು ಬಿಇಒ ತಮ್ಮ ಮೇಲಾಧಿಕಾರಿಗೆ ಈ ಕುರಿತು ವರದಿ ನೀಡಿದ್ದರು.

loader