ಪಿಯು ಅನುತ್ತೀರ್ಣರಿಗೆ ಎರಡು ಪೂರಕ ಪರೀಕ್ಷೆ ಪರಿಹಾರವಲ್ಲ
ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ಎರಡು ಪೂರಕ ಪರೀಕ್ಷೆ ನಡೆಸುವ ಚಿಂತನೆ ಒಂದು ಮೆಚ್ಚುಗೆ ಕ್ರಮವಾಗಿದ್ದರೂ ಕೂಡ ಇದು ವ್ಯರ್ಥವೇ ಹೊರತು ಪೂರಕವಾದುದು ಅಲ್ಲ. ಇದರಿಂದ ಫಲಿತಾಂಶ ಇಮ್ಮಡಿಗೊಳಿಸಲಾದು ಎಂದು ಕರ್ನಾಟಕ ಪಿಯು ಉಪನ್ಯಾಸಕರ ಹಿತರಕ್ಷಣಾ ಸಂಘ ಮತ್ತು ಪಿಯು ಒಕ್ಕೂಟದ ರಾಜ್ಯಾಧ್ಯಕ್ಷ ಕಾಡ್ನೂರು ಶಿವೇಗೌಡ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರು : ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ಎರಡು ಪೂರಕ ಪರೀಕ್ಷೆ ನಡೆಸುವ ಚಿಂತನೆ ಒಂದು ಮೆಚ್ಚುಗೆ ಕ್ರಮವಾಗಿದ್ದರೂ ಕೂಡ ಇದು ವ್ಯರ್ಥವೇ ಹೊರತು ಪೂರಕವಾದುದು ಅಲ್ಲ. ಇದರಿಂದ ಫಲಿತಾಂಶ ಇಮ್ಮಡಿಗೊಳಿಸಲಾದು ಎಂದು ಕರ್ನಾಟಕ ಪಿಯು ಉಪನ್ಯಾಸಕರ ಹಿತರಕ್ಷಣಾ ಸಂಘ ಮತ್ತು ಪಿಯು ಒಕ್ಕೂಟದ ರಾಜ್ಯಾಧ್ಯಕ್ಷ ಕಾಡ್ನೂರು ಶಿವೇಗೌಡ ಅಭಿಪ್ರಾಯಪಟ್ಟಿದ್ದಾರೆ.
ಇಂತಹ ಯೋಚನೆಗಳು ಮೇಲ್ನೋಟಕ್ಕೆ ಧನಾತ್ಮಕವಾಗಿ ಕಂಡರೂ ಕೂಡ, ಅದು ವಿದ್ಯಾರ್ಥಿಗಳಲ್ಲಿ ನಕಾರಾತ್ಮಕ ಭಾವನೆ ಮೂಡಿಸುವ ನಿಟ್ಟಿಗೆ ಒತ್ತು ನೀಡುವ ಮೂಲಕ ಅಧಿಕಗೊಳ್ಳುತ್ತದೆ ಎಂದಿದ್ದಾರೆ.
ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ, ವರ್ಷದಲ್ಲಿ ಎರಡು ಪೂರಕ ಪರೀಕ್ಷೆ ನಡೆಸಲು ಚಿಂತನೆ ನಡೆಸಿರುವುದು ಸರಿಯಾದ ಯೋಚನೆ. ಆದರೆ ಅದೊಂದು ವಿದ್ಯಾರ್ಥಿಗಳ ಮನಸ್ಥಿತಿ ಅಳೆಯುವ ಮಾಪನಾಂಕ ನಿರ್ಣಯ ಆಗಲಾರದು. ಕಾರಣ ಅವರ ಬಗ್ಗೆ ಪಾಠವನ್ನು ನಿರ್ವಹಿಸುವ ಉಪನ್ಯಾಸಕರಿಗೆ ಇವರ ಬಗ್ಗೆ ಬಹುವಾರ್ಷಿಕವಾಗಿಯೇ ಪಾಠದ ಬಗ್ಗೆ, ಹಾಜರಾತಿ ಬಗ್ಗೆ ಓದುವ ಪರಿಪಾಠ, ಚಟುವಟಿಕೆಗಳ ಬಗ್ಗೆ ಮಾಹಿತಿಯ ಅರಿವಿರುತ್ತದೆ. ಅಲ್ಲದೆ ಕಾಲೇಜುಗಳಲ್ಲಿ ವಾರಕ್ಕೆ, ಹಾಗೂ ಮಾಸಿಕ, ಕಿರು, ಎರಡನೇ ಕಿರು, ಮಧ್ಯ ವಾರ್ಷಿಕ ಹಾಗೂ ಪೂರಕ, ವಾರ್ಷಿಕ ಪರೀಕ್ಷೆಗಳ ಜೊತೆಗೆ ಅನುತ್ತೀರ್ಣರಾದವರಿಗೆ ಪುನಃ ಪೂರಕ ಪರೀಕ್ಷೆ ನಡೆಸುವ ಜವಾಬ್ದಾರಿ ಕಾಲೇಜುಗಳ ಮೇಲಿರುತ್ತದೆ.
ವರ್ಷ ಪೂರ್ತಿ ಪರೀಕ್ಷೆ ನಡೆಸುವುದಾದರೆ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ಹಾಗೂ ಕೌಶಲ್ಯಾಧರಿಸಿದ ನೈತಿಕತೆಯ ಮೌಲ್ಯ ಬೆಳೆಸಲು ಹಾಗೂ ಅವರಿಗೆ ಕಲಿಕೆ ನೀಡಲು ಸಾಧ್ಯವಿಲ್ಲ. ಅವರನ್ನು ಪ್ರಜ್ಞಾವಂತ ನಾಗರಿಕರಾಗಿ ತಯಾರು ಮಾಡಲು ಸಾಧ್ಯವಿಲ್ಲದಂತೆ ಆಗುತ್ತದೆ. ಉಪನ್ಯಾಸಕರು, ಪಾಠವನ್ನು ಮಾಡುವುದು ಬಿಟ್ಟು ಈಗಾಗಲೇ, ಹಲವಾರು ಜಿಲ್ಲಾ, ತಾಲೂಕಿನ ಕಾಲೇಜು ಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಕೂಡ ಬೋಧಕರೆ ಇದನ್ನು ನಡೆಸುತ್ತಿದ್ದಾರೆ ಎಂದಿದ್ದಾರೆ.
ಅದರ ಜೊತೆಗೆ ಇಲಾಖೆ ಹಾಗೂ ಕೆಪಿಎಸ್‌ಇ, ಯುಪಿಎಸ್‌ಸಿ ಪರೀಕ್ಷೆಗನ್ನು ನೆಡೆಸುತ್ತಾ, ಇದರೊಂದಿಗೆ ಮರು ಮೌಲ್ಯಮಾಪನ, ಸಿಇಟಿ ಹೀಗೆ ಅನೇಕಾನೇಕ ಪರೀಕ್ಷೆಯಲ್ಲಿ ತೊಡಗಿ ಮತ್ತು ಕಾಲೇಜುಗಳಲ್ಲಿ, ಬೋಧಕೇತರರು ಕೊರತೆಯಿಂದ ಕಂಪ್ಯೂಟರ್ ಕೆಲಸ, ಹಲವಾರು ಇಲಾಖೆಗಳು ಕೇಳುವಂತಹ ವಿದ್ಯಾರ್ಥಿಗಳ ಮಾಹಿತಿ ಒದಗಿಸುವುದರ ಕಡೆಯೇ ಅತಿಯಾದ ಒತ್ತಾಯ, ಒತ್ತಡ ಸಾಕಾಗಿದೆ. ಇಂತಹ ಮಾನಸಿಕವಾಗಿ ಈಗಾಗಲೇ ಹೆಣಗಾಡು ಸ್ಥಿತಿ ಇದ್ದು ಅಂತಹ ಚಟುವಟಿಕೆ ಗಳಲ್ಲಿ ಮುಳಗಬೇಕಾಗುತ್ತದೆ. ಇದರಿಂದ ಮಕ್ಕಳಿಗೆ ಸರಿಯಾದ ನ್ಯಾಯ ನೀಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಉಪನ್ಯಾಸಕರ ಸಂಘಟನೆಯ ಅಭಿಪ್ರಾಯ ಪಡೆದು ಗಮನಹರಿಸಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕರು ಹಾಗೂ ಅಧ್ಯಕ್ಷರಿಗೆ ಒಕ್ಕೂಟ ಆಗ್ರಹಿಸಿದೆ.