ಯಾದಗಿರಿ ಜಿಲ್ಲೆಯ ಗುರುಮಠಕಲ್‌ ಸಮೀಪದ ಬೋರಬಂಡಾ ಬಳಿ ನಡೆದ ಘಟನೆ| ಗುರುಮಠಕಲ್‌ ಸಂತೆಗೆ ಹೋಗಲು ಬಸ್‌ ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಹರಿದ ಲಾರಿ| ಗಂಭೀರವಾಗಿ ಗಾಯಗೊಂಡವರು ಆಸ್ಪತ್ರೆಗೆ ದಾಖಲು| 

ಗುರುಮಠಕಲ್‌(ಏ.13): ಬಸ್‌ಗಾಗಿ ಕಾಯುತ್ತಿದ್ದವರ ಮೇಲೆ ಲಾರಿ ಹರಿದ ಪರಿಣಾಮ 3 ವರ್ಷದ ಮಗು ಹಾಗೂ ತಾಯಿ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಯಾದಗಿರಿ ಜಿಲ್ಲೆಯ ಗುರುಮಠಕಲ್‌ ಸಮೀಪದ ಬೋರಬಂಡಾ ಬಳಿ ನಡೆದಿದೆ. 

ಬೋರಬಂಡಾ ಗ್ರಾಮದ ಪ್ರಯಾಣಿಕರು ಗುರುಮಠಕಲ್‌ ಸಂತೆಗೆ ಹೋಗಲು ಬಸ್‌ ನಿಲ್ದಾಣದಲ್ಲಿ ಕಾಯುತ್ತಿದ್ದಾಗ, ಬೆಳಗಾವಿಯಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಹುಣಸೆಹಣ್ಣು ತುಂಬಿಕೊಂಡಿದ್ದ ಲಾರಿಯೊಂದು ಅವರ ಮೇಲೆ ಹಾಯ್ದು ಹೋಗಿದೆ. 

ರಸ್ತೆ ಪಕ್ಕ ನಿಂತವರ ಮೇಲೆ ಹಾಯ್ದ ವಿನಯ್ ಕುಲಕರ್ಣಿ ಸಹೋದರ ವಿಜಯ್ ಕಾರು, ಇಬ್ಬರ ಸಾವು

ಸ್ಥಳದಲ್ಲೇ ಮೂರು ವರ್ಷದ ಮಗು ಮೋನಿಕಾ ಸಾವನ್ನಪ್ಪಿದರೆ, ಮಗುವಿನ ತಾಯಿ ಸರೋಜ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡವರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.