ಧಾರವಾಡ(ಏ. 12)  ರಸ್ತೆ ಪಕ್ಕ ನಿಂತವರ ಮೇಲೆ ಕಾರು ಹರಿದು ಆರು ಜನರಿಗೆ ಗಾಯವಾಗಿದ್ದು  ಇಬ್ಬರು ಮೃತಪಟ್ಟಿದ್ದಾರೆ. ರಸ್ತೆ ಪಕ್ಕ ನಿಲ್ಲಿಸಿದ್ದ  ಬೈಕ್‌ಗಳು ಜಖಂ ಆಗಿವೆ.  ಕಾಂಗ್ರೆಸ್ ಮುಖಂಡ ವಿಜಯ ಕುಲಕರ್ಣಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಗುರಿಯಾಗಿದೆ.

ವಿಜಯ, ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರ. ಧಾರವಾಡದ ಕೆವಿಜಿ ಬ್ಯಾಂಕ್ ಎದುರು ನಡೆದ ಘಟನೆ ನಡೆದಿದೆ.  ಬೆಳಗಾವಿ ರಸ್ತೆಯಲ್ಲಿ ನಡೆದ ಘಟನೆ ನಡೆದಿದ್ದು  ಅಪಘಾತಪಡಿಸಿದ ಕಾರಿಗೆ ಸ್ಥಳೀಯರು ಘೇರಾವ್ ಹಾಕಿದ್ದಾರೆ.

ವಿನಯ್ ಕುಲಕರ್ಣಿಗೆ ಇನ್ನೂ ಬೇಲ್ ಸಿಕ್ಕಿಲ್ಲ

ಅಪಘಾತದಲ್ಲಿ  ಶೇಖರ ಹುದ್ದಾರ್ (37), ಚರಣ್ ನಾಯಕ್ (17) ಸಾವಿಗೀಡಾಗಿದ್ದಾರೆ.  ವಿಜಯ ಕುಲಕರ್ಣಿ ಅವರೇ ಕಾರು ಚಾಲನೆ ಮಾಡುತ್ತಿದ್ದರ ಎನ್ನಲಾಗಿದ್ದು ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ವಿಜಯ ಅವರನ್ನು ವಶಕ್ಕೆ ಪಡೆದು ವಿಚಾರಣೆ  ನಡೆಸಲಾಗುತ್ತಿದೆ.