ಬೆಂಗಳೂರು(ಅ.13): ಇತ್ತೀಚಿಗೆ ಯಲಹಂಕ ಅನಿಲ ಆಧಾರಿತ ವಿದ್ಯುತ್‌ ಸ್ಥಾವರದಲ್ಲಿ ನಡೆದಿದ್ದ ಸ್ಫೋಟ ಘಟನೆಯಲ್ಲಿ ಗಾಯಗೊಂಡಿದ್ದ ಇಬ್ಬರು ಎಂಜಿನಿಯರ್‌ಗಳು ಚಿಕಿತ್ಸೆ ಫಲಿಸದೆ ಸೋಮವಾರ ಮೃತಪಟ್ಟಿದ್ದಾರೆ. 

ಕರ್ನಾಟಕ ವಿದ್ಯುತ್‌ ನಿಗಮದ ನೌಕರರಾದ ಕೃಷ್ಣ ಭಟ್‌ ಹಾಗೂ ಮಂಜಪ್ಪ ಮೃತ ದುರ್ದೈವಿಗಳು. ಯಲಹಂಕದ ವಿದ್ಯುತ್‌ ಸ್ಥಾವರದಲ್ಲಿ 370 ಮೆಗಾ ವಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ 1ನೇ ಘಟಕವನ್ನು ಕಾರ್ಯಾಚರಣೆಗೆ ಸಿದ್ಧಗೊಳಿಸುವಾಗ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿತ್ತು. 

ಬೆಂಗಳೂರು ಗಲಭೆ: ಶಾಸಕ ಅಖಂಡ ಮನೆ ಬೆಂಕಿಗೆ ಕಾಂಗ್ರೆಸ್ಸಿಗರ ದ್ವೇಷವೇ ಕಾರಣ

ಈ ಘಟನೆಯಲ್ಲಿ 15 ಮಂದಿ ಎಂಜಿನಿಯರ್‌ಗಳು ತೀವ್ರವಾಗಿ ಗಾಯಗೊಂಡಿದ್ದರು. ಈ ಪೈಕಿ ಇದುವರೆಗೆ ಚಿಕಿತ್ಸೆ ಫಲಿಸದೆ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.