ಜಮಖಂಡಿ: ಹಿಂಬದಿಯಿಂದ ಬಸ್‌ ಡಿಕ್ಕಿ, ಬೈಕ್‌ ಸವಾರರಿಬ್ಬರ ದುರ್ಮರಣ

ಹಿಂದಿನಿಂದ ಬಂದ ಬಸ್‌ ಡಿಕ್ಕಿ, ಇಬ್ಬರ ಸಾವು| ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ನಡೆದ ಘಟನೆ| ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು| ಬಸ್‌ ಚಾಲಕನ ಬಂಧನ| 

Two Persons Dies for Accident in Jamakhandi in Bagalkot Districtgrg

ಜಮಖಂಡಿ(ಅ.07): ಸಾರಿಗೆ ಸಂಸ್ಥೆ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣ ಸಮೀಪದ ಹೊರವಲಯದಲ್ಲಿ ಮಂಗಳವಾರ ನಡೆದಿದೆ.

ಜಮಖಂಡಿ ತಾಲೂಕಿನ ಕಡಪಟ್ಟಿ ಗ್ರಾಮದ ಬಸಪ್ಪ ಶಿವಸಂಗಪ್ಪ ಧಾರಣಿ (42), ಬೀಳಗಿ ತಾಲೂಕಿನ ಯತನಟ್ಟಿ ಗ್ರಾಮದ ಮಹಿಳೆ ಮಂಜವ್ವ ಯಲ್ಲಪ್ಪ ಮದರ (33) ಮೃತ ದುರ್ದೈವಿಗಳು. 

ಮುಧೋಳದಲ್ಲಿ ಪ್ರೇಮಿಗಳು ನೇಣಿಗೆ ಶರಣು: ಕಾರಣ..?

ಮೃತರು ಜಮಖಂಡಿ ತಾಲೂಕಿನ ಕೊಣ್ಣೂರು ಗ್ರಾಮಕ್ಕೆ ಬೈಕ್‌ನಲ್ಲಿ ಸಾಗುತ್ತಿದ್ದ ವೇಳೆ ಇಲ್ಲಿನ ಹೊರವಲಯದ ಮುಧೋಳ ರಸ್ತೆಯ ಅಡಿಗಲ್‌ ಪೀರ್‌ ದರ್ಗಾ ಬಳಿ ಹಿಂದಿನಿಂದ ಬಂದ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಜಮಖಂಡಿ ಗ್ರಾಮೀಣ ಪೋಲೀಸ್‌ ಠಾಣೆ ಎಸೈ ಬಸವರಾಜ ಅವಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಬಸ್‌ ಚಾಲಕನನ್ನು ಬಂಧಿಸಲಾಗಿದೆ.
 

Latest Videos
Follow Us:
Download App:
  • android
  • ios