ಚನ್ನಮ್ಮನ ಕಿತ್ತೂರು(ಫೆ.13): ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಎರಡು ಲಾರಿಗಳ ನಡುವೆ ಅಪಘಾತ ಸಂಭವಿಸಿ ಇಬ್ಬರು ಮೃತ​ಪ​ಟ್ಟು, ಓರ್ವನಿಗೆ ಗಂಭಿರ ಗಾಯವಾದ ಘಟನೆ ತಾಲೂಕಿನ ಇಟಗಿ ಕ್ರಾಸ್‌ನಲ್ಲಿ ಶುಕ್ರವಾರ ಸಂಭವಿಸಿದೆ.

ಗದಗ ಜಿಲ್ಲೆಯ ಗಜೇಂದ್ರಗಡ ನಿವಾಸಿ ಕುಡ್ಲೆಪ್ಪ ನೆಲ್ಲೂರ (42), ಗದಗ ಜಿಲ್ಲೆಯ ವಿರಾಪೂರ ಗ್ರಾಮದ ನಿವಾಸಿ ಯಲ್ಲಪ್ಪ ಸಣ್ಣಯಲ್ಲಪ್ಪ ಗೋರ್ಪಡೆ (52) ಮೃತಪಟ್ಟವರು. ಬೆಳಗಾವಿಯಿಂದ ಧಾರವಾಡ ಕಡೆಗೆ ಹೊರಟಿರುವ ಲಾರಿ ಇಟಗಿ ಕ್ರಾಸ್‌ ರಾಷ್ಟ್ರೀಯ ಹೆದ್ದಾರಿ ಮೇಲೆ ಕೆಟ್ಟು ನಿಂತಿದ್ದರಿಂದ ಲಾರಿ ಚಾಲಕರಿಬ್ಬರು ಸೇರಿ ಲಾರಿ ಹಿಂಬದಿಯಲ್ಲಿ ನಿಂತು ಅದನ್ನು ಸರಿಪಡಿಸುವ ವೇಳೆ ಮತ್ತೊಂದು ಲಾರಿ ಬಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಓರ್ವ ಚಾಲಕ ಮೃತ​ಪ​ಟ್ಟಿದ್ದು, ಇನ್ನೋರ್ವ ಚಾಲಕ ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಮೃತ​ಪ​ಟ್ಟಿ​ದ್ದಾನೆ.

ರಸ್ತೆ ದಾಟುತ್ತಿದ್ದ ಭಿಕ್ಷುಕನನ್ನ ಬಲಿ ಪಡೆದ ಯಮಸ್ವರೂಪಿ ಬಿಎಂಟಿಸಿ ಬಸ್‌

ಹಿಂಬದಿಯಿಂದ ಲಾರಿಗೆ ಡಿಕ್ಕಿ ಹೊಡೆದ ಚಾಲಕ ರಾಕೇಶ (37) ಗಂಭಿರ ಗಾಯಗೊಂಡಿದ್ದು, ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನಾ ಸ್ಥಳಕ್ಕೆ ಕಿತ್ತೂರು ಸಿಪಿಐ ಮಂಜುನಾಥ ಕುಸಗಲ್‌, ಪಿಎಸ್‌ಐ ದೇವರಾಜ ಉಳ್ಳಾಗಡ್ಡಿ ಭೇಟಿ ನೀಡಿದ್ದಾರೆ. ಈ ಕುರಿತು ಕಿತ್ತೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.