ಹೊಸಪೇಟೆ(ಫೆ.07): ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ -50ರ ಬಳಿ ಬಿಇಒ ಸುನಂದಮ್ಮ ಪ್ರಯಾಣಿಸುತ್ತಿದ್ದ ಕಾರು ಶನಿವಾರ ಅಪಘಾತಕ್ಕೀಡಾಗಿದ್ದು, ಗಾಯಾಳುಗಳನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತರೀಕೆರೆಯಿಂದ ನಗರಕ್ಕೆ ಆಗಮಿಸುತ್ತಿದ್ದಾಗ ಬಿಇಒ ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿಯೊಂದು ಬಲಭಾಗದಿಂದ ಡಿಕ್ಕಿ ಹೊಡೆದಿದೆ. ಲಾರಿ ಹೊಡೆತಕ್ಕೆ ಕಾರು ಪಲ್ಟಿಯಾಗಿದೆ. ಕಾರಿನಲ್ಲಿದ್ದ ಬಿಇಒ, ಶಿಕ್ಷಕ ಹಾಲೇಶ್‌ ನಾಯ್ಕ, ಚಾಲಕ ಹಾಗೂ ಮತ್ತೊಬ್ಬರು ಗಾಯಗೊಂಡಿದ್ದಾರೆ. 

ಬಳ್ಳಾರಿ; ಸೀಟಿಂದ ಸೀಟಿಗೆ ಜಂಪ್ ಮಾಡುತ್ತ ಟಿಕೆಟ್ ಕೊಟ್ಟ ಕಂಡಕ್ಟರ್; ವಿಡಿಯೋ

ಗಾಯಾಳುಗಳನ್ನು ನಗರದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮರಿಯಮ್ಮನಹಳ್ಳಿ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.