ಅಕ್ರಮ ಗೊಮಾಂಸ ಮಾರಾಟ ಮಾಡಲು ಯತ್ನ| ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಇಬ್ಬರ ಬಂಧನ| ಖಚಿತ ಮಾಹಿತಿ ಮೇರೆಗೆ ಪೊಲೀಸರ ದಾಳಿ| ಈ ಸಂಬಂಧ ಹೊಸ ಮಾರುಕಟ್ಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| 

ಶಿರಸಿ(ಅ.17): ಅಕ್ರಮವಾಗಿ ಗೋಮಾಂಸವನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ವೇಳೆ ಅಕ್ಕಿ ಆಲೂರು ಮೂಲದ ಮಹ್ಮದ್‌ ಸಲಿಂ ತಂದೆ ಮಾಬುಸಾಬ ಬೇಪಾರಿ ಹಾಗೂ ಭಾಷಾಸಾಬ ತಂದೆ ಅಬ್ದುಲ್‌ ಖಾದರಸಾಬ ಬಹದ್ದೂರ ಎಂಬಿಬ್ಬರನ್ನು ಶಿರಸಿ ಹೊಸ ಮಾರುಕಟ್ಟೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಇವರು ಅಕ್ರಮವಾಗಿ ಗೊಮಾಂಸವನ್ನು ಮಾರಾಟ ಮಾಡಲು ಶಿರಸಿ ನಗರದ ಕರಿಗುಂಡಿ ರಸ್ತೆಯಲ್ಲಿ ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಹೊಸ ಮಾರುಕಟ್ಟೆ ಠಾಣೆಯ ಪಿ.ಎಸ್‌.ಐ ನಾಗಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ಹಳ್ಳಕ್ಕೆ ಬಿದ್ದ ಕಾರು: ಜಲಪಾತ ವೀಕ್ಷಣೆಗೆ ಬಂದಿದ್ದ ಹುಬ್ಬಳ್ಳಿ ಮೂಲದ ಮೂವರ ದುರ್ಮರಣ

ಬಂಧಿತರಿಂದ 4950 ಮೌಲ್ಯದ ಗೋಮಾಂಸ ಹಾಗೂ ನಗದು ಹಣ ವಶಪಡಿಸಿಕೊಳ್ಳಲಾಗಿದೆ. ಹೊಸ ಮಾರುಕಟ್ಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.