ರಿಫಿಲಿಂಗ್‌ ಮಾಡೋ ವೇಳೆ ಸಿಲಿಂಡರ್‌ ಸ್ಫೋಟ: ಪುರಸಭೆ ಸದಸ್ಯೆ ಸೇರಿ ಇಬ್ಬರಿಗೆ ಗಾಯ

ರಿಫಿಲಿಂಗ್‌ ಮಾಡುವ ವೇಳೆ ಸಿಲಿಂಡರ್‌ ಸ್ಫೋಟ| ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ಘಟನೆ|  ಪರಿಣಾಮ ಪುರಸಭೆ ಸದಸ್ಯೆ ಸಭೀಯಾ ಬೇಗಾಂ ಮತ್ತು ಆಟೋ ಚಾಲಕ ಶ್ರೀಕಾಂತ್‌ ಅವರಿಗೆ ಗಾಯ| ಸ್ಫೋಟಗೊಂಡ ಪಕ್ಕದ ಮನೆಯಲ್ಲಿ ಬಾಣಂತಿ ಹಾಗೂ ಮಗುವಿದ್ದು ಅದೃಷ್ಟವ​ಶಾ​ತ್‌ ಯಾವುದೇ ಆಪಾಯವಾಗಿಲ್ಲ|

Two people Injured for Cylinder Blast in Hagaribommanahalli in Ballari District

ಹಗರಿಬೊಮ್ಮನಹಳ್ಳಿ(ಮೇ.03): ಪಟ್ಟಣದ 22ನೇ ವಾರ್ಡ್‌ನಲ್ಲಿ ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ ಪುರಸಭೆ ಸದಸ್ಯೆ ಸಭೀಯಾ ಬೇಗಾಂ ಮತ್ತು ಆಟೋ ಚಾಲಕ ಶ್ರೀಕಾಂತ್‌ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಸದಸ್ಯೆ ಸಭೀಯಾ ಬೇಗಾಂ ಮನೆಯಲ್ಲಿ ಸಿಲಿಂಡರ್‌ ರಿಫಿಲಿಂಗ್‌ ಮಾಡುವಾಗ ಈ ಘಟನೆ ನಡೆದಿದ್ದು, ಆಟೋ ಚಾಲಕ ಶ್ರೀಕಾಂತ್‌ ಸಿಲಿಂಡರ್‌ ತುಂಬಿಸಿಕೊಳ್ಳಲು ಬಂದಿದ್ದರು ಎನ್ನಲಾಗಿದೆ. ಸಿಲಿಂಡರ್‌ ತುಂಬುವ ವೇಳೆ ಅದರ ಪೈಪ್‌ ಕಿತ್ತು ಗಾಳಿಯಲ್ಲಿ ಹರಡಿದ್ದು, ಆಕಸ್ಮಿಕ ಬೆಂಕಿ ತಗುಲಿ ಸ್ಫೋಟಗೊಂಡು ಗುಡಿಸಲು ಹಾಗೂ ಪಕ್ಕದಲ್ಲಿಯೇ ಇದ್ದ ಶ್ರೀಕಾಂತನ ಆಟೋ ಜಖಂಗೊಂಡಿವೆ. ಸದಸ್ಯೆ ಸಭೀಯಾ ಬೇಗಾಂ ಹಾಗೂ ಶ್ರೀಕಾಂತ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಗೆ ಶ್ರೀಕಾಂತನನ್ನು ಕಳಿಸಿಕೊಡಲಾಗಿದೆ ಎಂದು ಹೇಳಲಾಗುತ್ತಿದೆ.

ಮಹಾಮಾರಿ ಕೊರೋನಾ ಭಯಕ್ಕೆ ತರಕಾರಿ ಚರಂಡಿಗೆ ಚೆಲ್ಲಿದ ಜನ!

ಸ್ಫೋಟಗೊಂಡ ಪಕ್ಕದ ಮನೆಯಲ್ಲಿ ಬಾಣಂತಿ ಹಾಗೂ ಮಗುವಿದ್ದು ಅದೃಷ್ಟವ​ಶಾ​ತ್‌ ಯಾವುದೇ ಆಪಾಯವಾಗಲಿಲ್ಲ. ಈ ವಿಚಾರದಲ್ಲಿ ದೇವರು ದೊಡ್ಡವನು ಎಂದು ಜನರು ಹೇಳುತ್ತಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ​ಭೇಟಿ ನೀಡಿದರು. ಅಗ್ನಿಶಾಮಕ ದಳ ಮುಂದೆ ಆಗುವಂತ ಅನಾಹುತವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.
 

Latest Videos
Follow Us:
Download App:
  • android
  • ios