Asianet Suvarna News Asianet Suvarna News

ಮಹಾಮಾರಿ ಕೊರೋನಾ ಭಯಕ್ಕೆ ತರಕಾರಿ ಚರಂಡಿಗೆ ಚೆಲ್ಲಿದ ಜನ!

ಹಿರೇಹಡಗಲಿ ಗ್ರಾಮದಲ್ಲಿ ಇಬ್ಬರಿಗೆ ಕೊರೋನಾ ಬಂದಿದೆ ಎಂಬ ವದಂತಿ| ಇದನ್ನ ನಂಬಿದ ತರಕಾರಿಯನ್ನು ಚರಂಡಿಗೆ ಹಾಕಿದ ಜನ| ಹಿರೇಹಡಗಲಿಯ ಈ ಇಬ್ಬರು ವ್ಯಕ್ತಿಗಳು ದಾವಣಗೆರೆಯ 556 ಕೊರೋನಾ ಸೋಂಕಿತ ವ್ಯಕ್ತಿಯ ಸಂಪರ್ಕ ಹೊಂದಿದ್ದಾರೆ| ಅವರನ್ನು ಹೂವಿನಹಡಗಲಿ ಐಸೋಲೇಷನ್‌ ವಾರ್ಡ್‌ನಲ್ಲಿ ಇಡಲಾಗಿದೆ ಎಂಬ ಸುಳ್ಳು ಸುದ್ದಿ| 

People in Anxiety for Coronavirus in Huvinahadagali in Ballari District
Author
Bengaluru, First Published May 3, 2020, 9:23 AM IST

ಹೂವಿನಹಡಗಲಿ(ಮೇ.03):  ಪಕ್ಕದೂರಿನಲ್ಲಿ ಕೊರೋನಾ ಬಂದಿದೆ ಎಂದು ಭಯ ಬಿದ್ದು, ಖರೀದಿಸಿದ್ದ ತರಕಾರಿಯನ್ನು ಮಹಿಳೆಯರು ಚರಂಡಿಗೆ ಚೆಲ್ಲಿರುವ ಘಟನೆ ತಾಲೂ​ಕಿ​ನ ಮಾಗಳ ಗ್ರಾಮದಲ್ಲಿ ಜರುಗಿದೆ.

ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಹಿರೇಹಡಗಲಿಯ ತರಕಾರಿ ವ್ಯಾಪಾರಿಯೊಬ್ಬರಿಂದ ಜನ ತರಕಾರಿ ಖರೀದಿಸಿದ್ದಾರೆ. ಸಂಜೆ ವೇಳೆಗೆ ಹಿರೇಹಡಗಲಿ ಗ್ರಾಮದಲ್ಲಿ ಇಬ್ಬರಿಗೆ ಕೊರೋನಾ ಬಂದಿದೆ ಎಂಬ ವದಂತಿ ನಂಬಿ ಜನ ತರಕಾರಿಯನ್ನು ಚರಂಡಿಗೆ ಹಾಕಿದ್ದಾರೆ. 

ಕೊರೋನಾ ಸೋಂಕಿತ ಬಾಲಕನನ್ನ ಹಿಡಿದಿಟ್ಟುಕೊಳ್ಳುವುದೇ ವೈದ್ಯರಿಗೆ ಸವಾಲಿನ ಕೆಲಸ..!

ಹಿರೇಹಡಗಲಿಯ ಈ ಇಬ್ಬರು ವ್ಯಕ್ತಿಗಳು ದಾವಣಗೆರೆಯ 556 ಕೊರೋನಾ ಸೋಂಕಿತ ವ್ಯಕ್ತಿಯ ಸಂಪರ್ಕ ಹೊಂದಿದ್ದಾರೆ, ಅವರನ್ನು ಹೂವಿನಹಡಗಲಿ ಐಸೋಲೇಷನ್‌ ವಾರ್ಡ್‌ನಲ್ಲಿ ಇಡಲಾಗಿದೆ ಎಂಬ ಸುದ್ದಿ ಹರಡುತ್ತಿದಂತೆಯೇ ಜನ ಭಯಭೀತರಾಗಿದ್ದಾರೆ. ತರಕಾರಿಯಲ್ಲಿಯೂ ಕೊರೋನಾ ಇದೆ ಎಂದು ಭಯದಿಂದ ಖರೀದಿಸಿದ್ದ ತರಕಾರಿ ಎಲ್ಲ ಚರಂಡಿ ಪಾಲಾಗಿದೆ.
 

Follow Us:
Download App:
  • android
  • ios