ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್‌ ಘಟ್ಟದಲ್ಲಿ ನಡೆದ ಘಟನೆ| ಎರಡೂ ವಾಹನಗಳ ನಡುವೆ ಸಿಲುಕಿ ಸಂಪೂರ್ಣ ನುಜ್ಜು ಗುಜ್ಜಾದ ಬೊಲೆರೋ| ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು| 

ಯಲ್ಲಾಪುರ(ಮಾ.24): ಟಿಪ್ಪರ್‌ ಹಾಗೂ ಲಾರಿಯ ನಡುವೆ ಸಿಲುಕಿದ ಬೊಲೆರೋ ಅಪಘಾತಕ್ಕೀಡಾಗಿ ಜಖಂಗೊಂಡಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸಾವಿಗೀಡಾಗಿ, ಆರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ತಾಲೂಕಿನ ಅರಬೈಲ್‌ ಘಟ್ಟದಲ್ಲಿ ನಡೆದಿದೆ.

ಮೃತರನ್ನು ರಾಜೇಶ್ವರಿ ಪರಡ್ಡಿ (35), ಚಿಕ್ಜಮ್ಮ ಪಾಟೀಲ್‌ (30) ಎಂದು ಗುರುತಿಸಲಾಗಿದೆ. ಇವರಲ್ಲಿ ಒಬ್ಬರು ಸ್ಥಳದಲ್ಲೇ ಸಾವಿಗೀಡಾದರೆ, ಇನ್ನೊಬ್ಬರು ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಬೊಲೆರೋದಲ್ಲಿದ್ದ ಲಕ್ಷ್ಮಿ, ಶ್ರುತಿ, ಹನುಮಂತ, ಆಕಾಶ್‌, ಅಪೇಕ್ಷಾ, ತಿಮ್ಮನ ಗೌಡ ಗಂಭೀರವಾಗಿ ಗಾಯಗೊಂಡಿದ್ದಾರೆ.

ಭಟ್ಕಳ: ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರು ವಶ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ಬಳಿಯ ಬರ್ಗಿಯ ಇವರು ಹೊಡ ಬುಲೇರೋವನ್ನು ಖರೀದಿಸಿದ್ದರು. ಹೊಸ ಬುಲೇರೋದಲ್ಲಿ ಧರ್ಮಸ್ಥಳ ಯಾತ್ರೆಗೆ ತೆರಳುತ್ತಿದ್ದರು. ಅರಬೈಲ್‌ ಘಟ್ಟದಲ್ಲಿ ಅರಬೈಲ್‌ ಸಮೀಪಸುತ್ತಿರುವಾಗ ಹಿಂದಿನಿಂದ ಟಾಟಾ ಲಾರಿ ಚಾಲಕ ಬೊಲೆರೋಕ್ಕೆ ಡಿಕ್ಕಿ ಹೊಡೆದಿದ್ದು, ಬೊಲೆರೋ ಎದುರಿನಿಂದ ಮಣ್ಣು ತುಂಬಿಕೊಂಡು ಬರುತ್ತಿದ್ದ ಟಿಪ್ಪರ್‌ಗೆ ಡಿಕ್ಕಿ ಹೊಡೆದಿದೆ. ಎರಡೂ ವಾಹನದ ನಡುವೆ ಸಿಲುಕಿದ ಬೊಲೆರೋ ಸಂಪೂರ್ಣ ನುಜ್ಜು ಗುಜ್ಜಾಗಿದೆ.

ಸ್ಥಳಕ್ಕೆ ಪಿಐ ಸುರೇಶ್‌ ಯಳ್ಳೂರ್‌ ಹಾಗೂ ಪಿಎಸ್‌ಐ ಮಂಜುನಾಥ ಗೌಡರ ತೆರಳಿ ಪರಿಶೀಲನೆ ನಡೆಸಿದ್ದಾರೆ.