ಸಿಂದಗಿ: ಸಾರಿಗೆ ಬಸ್‌, ಬೈಕ್‌ ಮುಖಾಮುಖಿ ಡಿಕ್ಕಿ, ಸ್ಥಳದಲ್ಲೇ ಇಬ್ಬರ ದುರ್ಮರಣ

ಸಾರಿಗೆ ಬಸ್‌ ಹಾಗೂ ಬೈಕ್‌ ಡಿಕ್ಕಿ| ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಯಂಕಂಚಿ ಬಳಿ ಘಟನೆ| ಓರ್ವನಿಗೆ ವಿಜಯಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ| ಈ ಸಂಬಂಧ ಸಿಂದಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| 

Two People Dies due Accident in Sindagi in Vijayapura District

ಸಿಂದಗಿ(ಸೆ.13): ಸಾರಿಗೆ ಸಂಸ್ಥೆಯ ಬಸ್‌ ಹಾಗೂ ಪಲ್ಸರ್‌ ಬೈಕ್‌ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟು ಓರ್ವನಿಗೆ ಗಂಭೀರ ಗಾಯವಾದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಯಂಕಂಚಿ ಬಳಿ ಶನಿವಾರ ಸಂಜೆ ಸಂಭವಿಸಿದೆ.

ಸಿಂದಗಿ ತಾಲೂಕಿನ ಕೊಕಟನೂರ ಗ್ರಾಮದ ತಿಪ್ಪಣ್ಣ ಮಲ್ಲಪ್ಪ ಬ್ಯಾಕೋಡ (28), ತಾಲೂಕಿನ ಯಂಕಂಚಿ ಗ್ರಾಮದ ರಮೇಶ ಗೌಡಪ್ಪ ಮುಳಸಾವಳಗಿ (35) ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳು. ಯಂಕಂಚಿ ಗಾಮದ ಶಿವಾನಂದ ನಿಂಗಪ್ಪ ಕುರನಳ್ಳಿ (30) ಗಂಭೀರ ಗಾಯಗೊಂಡಿದ್ದು ವಿಜಯಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. 

'ಪ್ರಧಾನಿ ಮೋದಿಯಿಂದ ದೇಶಕ್ಕೆ ಅಪಾರ ಹಾನಿ'

ಈ ಮೂವರು ಬೈಕ್‌ ಮೇಲೆ ಯಂಕಂಚಿ ಗ್ರಾಮದಿಂದ ಸಿಂದಗಿ ಕಡೆಗೆ ಹೊರಟಿದ್ದರು ಎನ್ನಲಾಗಿದೆ. ಸಿಂದಗಿಯಿಂದ ಶಹಾಪೂರ ಕಡೆಗೆ ಹೊರಟ ಸಾರಿಗೆ ಸಂಸ್ಥೆಯ ಬಸ್‌ ಹೊರಟಿತ್ತು. ಈ ಸಂದರ್ಭದಲ್ಲಿ ಬೈಕ್‌ ಮತ್ತ ಬಸ್‌ ಮಧ್ಯೆ ಡಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ. ಈ ಕುರಿತು ಸಿಂದಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Latest Videos
Follow Us:
Download App:
  • android
  • ios