ಹಗರಿಬೊಮ್ಮನಹಳ್ಳಿ(ಜೂ.08): ಸ್ನೇಹಿತನ ಜೊತೆ ತನ್ನ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ತೆರಳುತ್ತಿದ್ದಾಗ ತೆಪ್ಪ ಮಗುಚಿ ಇಬ್ಬರೂ ನೀರುಪಾಲಾದ ಘಟನೆ ಭಾನುವಾರ ಬಳ್ಳಾರಿಯ ಹಗರಿಬೊಮ್ಮನಹಳ್ಳಿ ತಾಲೂಕಿನ ತುಂಗಭದ್ರಾ ಹಿನ್ನೀರಿನಲ್ಲಿ ನಡೆದಿದೆ. 

ಮೃತರನ್ನ ಫಕ್ರುದ್ಧೀನ್‌(28) ಹಾಗೂ ಹೊನ್ನೂರ್‌ಸಾಬ್‌(18) ಎಂದು ಗುರುತಿಸಲಾಗಿದೆ. 

ಕಂಪ್ಲಿ: ಹೆಂಡ್ತಿ ಕೊಲೆಗೈದ ಆರೋಪ, ನೇಣಿಗೆ ಶರಣಾದ ಗಂಡ

ತಾಲೂಕಿನ ಸೀಗೇನಹಳ್ಳಿ 1ನೇ ಕಾಲೋನಿಯ ಯುವಕ ಫಕ್ರುದ್ಧೀನ್‌(28) ವಿವಾಹ ಜೂ.14ರಂದು ನಿಗ​ದಿ​ಯಾ​ಗಿ​ತ್ತು. ಈ ಹಿನ್ನೆಲೆಯಲ್ಲಿ ಆಹ್ವಾನ ಪತ್ರಿಕೆಗಳನ್ನು ಸಂಬಂಧಿಗಳಿಗೆ ಕೊಡಲು ಸ್ನೇಹಿತ ಹೊನ್ನೂರ್‌ಸಾಬ್‌(18)ನ ಜತೆಗೆ ಕರೆದುಕೊಂಡು ತೆಪ್ಪದಲ್ಲಿ ಬೈಕ್‌ ಹಾಕಿಕೊಂಡು ನದಿ ದಾಟುತ್ತಿದ್ದಾಗ ಆಯತಪ್ಪಿ ತೆಪ್ಪ ಮಗುಚಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.