ಬೀದರ್(ಮಾ.19): ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ವೈರಸ್ ಬಗ್ಗೆ ಸುಳ್ಳು ಸುದ್ದಿ ಪೋಸ್ಟ್ ಮಾಡಿದ್ದ ಇಬ್ಬರನ್ನ ಪೊಲೀಸರು ಬಂಧಿಸಿದ ಘಟನೆ ನಗರದಲ್ಲಿ ಇಂದು(ಗುರುವಾರ) ನಡೆದಿದೆ. ಮಹಮ್ಮದ್ ಅರ್ಷದ್ ಖಾನ್, ಮುಜಿಬೊದ್ದಿನ್ ಬಂಧಿತ ಆರೋಪಿಗಳಾಗಿದ್ದಾರೆ. 

ಕೊರೋನಾ ಆತಂಕ: DCM ಕಾರಜೋಳಗೆ ಕಲಬುರಗಿ ಮಂದಿಯಿಂದ ಶೃದ್ಧಾಂಜಲಿ!

ನಗರದ ಬ್ರಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ವೈರಸ್ ಸೋಂಕಿತನೊಬ್ಬ ಪರಾರಿಯಾಗಿದ್ದಾ‌ನೆ. ಲ್ಯಾಬ್ ರಿಪೋರ್ಟ್ ಪಾಸಿಟಿವ್ ಬರುತ್ತಿದ್ದಂತೆ ವ್ಯಕ್ತಿ ಪರಾರಿಯಾಗಿದ್ದಾ‌ನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು‌ ಸುದ್ದಿ ಹರಿದು ಬಿಟ್ಟಿದ್ದರು. ಬೀದರ್‌ನ ಶಿವನಗರ ಕಡೆಗೆ ಓಡಿ ಹೋಗಿದ್ದಾನೆ ಎಚ್ಚರ ಎಚ್ಚರ ಎಂದು ಬಂಧಿತರು ಪೋಸ್ಟ್ ಮಾಡಿದ್ದರು. 

ಕೊರೋನಾ ಭೀತಿ: 165 ವರ್ಷದಲ್ಲಿ ಇದೇ ಮೊದಲ ಬಾರಿ 155 ರೈಲು ರದ್ದು

ಹೀಗೆ ಸುಳ್ಳು ಹರಿಬಿಟ್ಟ ಆರೋಪಿಗಳನ್ನ ಬೀದರ್ ನಗರದ ಗಾಂಧಿ ಗಂಜ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರು ವೃತ್ತಿಯಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದಾರೆಂದು ತಿಳಿದು ಬಂದಿದೆ. ಇವರ ವಿರುದ್ಧ ಐಪಿಸಿ ಸೆಕ್ಷನ್ 505ರ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡುಸ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.