ಒಂದೇ ಮನೆಗೆ ಇಬ್ಬರು ಮಾಲೀಕರ ಕಿತ್ತಾಟ , ಕೆಲಸಕ್ಕೆ ಬಂದ ಮಹಿಳೆಯರು ಮನೆಯೊಳಗೆ ಲಾಕ್‌! ಇನ್ಸ್‌ಪೆಕ್ಟರ್ ಶಾಮೀಲಾದ್ರಾ?

ಒಂದೇ ಮನೆಗೆ ಇಬ್ಬರು ಮಾಲೀಕರು ಗಲಾಟೆ ಮಾಡಿಕೊಂಡಿರುವ ಘಟನೆ  ಬೆಂಗಳೂರಿನಲ್ಲಿ ನಡೆದಿದೆ. ಇಬ್ಬರ ಜಗಳದಲ್ಲಿ ಮನೆ ಕೆಲಸಕ್ಕೆ ಬಂದ ಐವರು ಮಹಿಳೆಯರು ಮನೆಯೊಳಗೆ ಲಾಕ್‌ ಆಗಿರುವ ಘಟನೆ ನಡೆದಿದೆ.  

Two owners are Fighting same house at Vidyaranyapura  in Bengaluru gow

ಬೆಂಗಳೂರು (ಮಾ.8): ಒಂದೇ ಮನೆಗೆ ಇಬ್ಬರು ಮಾಲೀಕರು ಗಲಾಟೆ ಮಾಡಿಕೊಂಡಿರುವ ಘಟನೆ  ಬೆಂಗಳೂರಿನಲ್ಲಿ ನಡೆದಿದೆ. ಇಬ್ಬರ ಜಗಳದಲ್ಲಿ ಮನೆ ಕೆಲಸಕ್ಕೆ ಬಂದ ಐವರು ಮಹಿಳೆಯರು ಮನೆಯೊಳಗೆ ಲಾಕ್‌ ಆಗಿರುವ ಘಟನೆ ನಡೆದಿದೆ.  ತಮಿಳುನಾಡಿನ ಅಪ್ಪರ್ ಎಂಬ ವ್ಯಕ್ತಿ  2023ರ ನವೆಂಬರ್ ನಲ್ಲಿ ಮನೆ ಖರೀದಿ ಮಾಡಿದ್ದ ಆದ್ರೆ ಸಿನಿಮಾ ಶೂಟಿಂಗ್ ಗೆ ಅದೇ ಮನೆಯನ್ನು ಮತ್ತೊಬ್ಬ ಮಾಲೀಕ ಶಶಿಕುಮಾರ್ ಎಂಬ ವ್ಯಕ್ತಿ ಲೀಜ್ ಗೆ ಕೊಟ್ಟಿದ್ದ.

ತನ್ನ ಮಗಳಿಗೆ ಗಿಫ್ಟ್ ಕೊಡುವ ಉದ್ದೇಶದಿಂದ ಅಪ್ಪರ್ ಮನೆ ಖರೀದಿ ಮಾಡಿ, ಫೆಬ್ರವರಿಯಲ್ಲಿ ನವೀಕರಣ ಮಾಡಿ ಕೊಡಲು ಮುಂದಾಗಿದ್ದರು ಆದರೆ ಇನ್ನೂ ಸ್ವಲ್ಪ ದಿನ ಹೋಗಲಿ ಎಂದು ಅಪ್ಪರ್ ಸುಮ್ಮನಾಗಿದ್ದರು. ಸದ್ಯ ಈ ಘಟನೆ ಬಳಿಕ ನನ್ನ ಬಳಿ ಎಲ್ಲಾ ದಾಖಲೆಗಳಿವೆ. ಇದು ನನ್ನ ಮನೆ ಅದು  ಹೇಗೆ ಮನೆ ಶೂಟಿಂಗ್‌ ಗೆ ಕೊಟ್ಟಿದ್ದಾರೆ. ನಾನು ಕೊಟ್ಟಿಲ್ಲ ಎಂದು  ಅಪ್ಪರ್‌ ಹೇಳುತ್ತಿದ್ದಾರೆ.

Rameshwaram Cafe Blast ಬಾಂಬರ್ ಪುಣೆಗೆ ಪರಾರಿ! ಸ್ಫೋಟದ ಹಿಂದೆ ಐಸಿಸ್ ಬಳ್ಳಾರಿ ಮಾಡ್ಯೂಲ್? ಶಂಕಿತರು ವಶಕ್ಕೆ

ಫಿಲಂ, ಜಾಹೀರಾತು ಶೂಟಿಂಗ್ ಹಿನ್ನೆಲೆ ವರ್ಷಕ್ಕೆ 50 ಲಕ್ಷ ಲೀಸ್‌ ಗೆ ಈ ಮನೆಯನ್ನು ಶಶಿಕುಮಾರ್  ಕೊಟ್ಟಿದ್ದಾರೆ, ಈ ಹಿನ್ನೆಲೆಯಲ್ಲಿ‌ ಮನೆ ಸ್ವಚ್ಚತೆ ಮಾಡಲು ಮಹಿಳೆಯರನ್ನು ಇಂದು   ಶಶಿಕುಮಾರ್ ಕರೆಸಿದ್ದಾರೆ. ಐದು ಜನ ಮಹಿಳೆಯರು ಮನೆ ಸ್ವಚ್ಚಗೊಳಿಸಲು ಬಂದಿದ್ದರು. ಓರ್ವ ಪುರುಷ ಕೂಡ ಜೊತೆಯಲ್ಲಿದ್ದ. ಮಹಿಳೆಯರು ಮನೆ ಒಳಗೆ ಹೋಗ್ತಿದ್ದಂತೆ ಇನ್ನೊಬ್ಬ ಮಾಲೀಕ ಅಪ್ಪರ್ ಮನೆ ಲಾಕ್ ಮಾಡಿದ್ದಾರೆ.  ಹೀಗಾಗಿ  ಐವರು ಮಹಿಳೆಯರು  ಮನೆ ಒಳಗೆ ಲಾಕ್ ಆಗಿದ್ದಾರೆ. ನಮ್ಮ ತಪ್ಪೇನಿಲ್ಲ ಮನೆಯಿಂದ ಹೊರಗೆ ಬಿಟ್ಬಿಡಿ ಎಂದು  ಮಹಿಳೆಯರು ಗೋಳಿಟ್ಟಿದ್ದಾರೆ.

ವಿದ್ಯಾರಣ್ಯಪುರ ಬಳಿಯ ವಾರ್ಡ್ ನಂ 3ರಲ್ಲಿ ಈ ಮನೆ ಇದೆ. ಘಟನೆ ಬಳಿಕ ಮನೆ ಮುಂದೆ ವಿದ್ಯಾರಣ್ಯಪುರ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಘಟನೆ ಸಂಬಂಧ ಶಶಿಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

International Women's Day: ಸುವರ್ಣ ನ್ಯೂಸ್ ವರದಿಗಾರ್ತಿಯರಿಗೆ ಸೇವಾರತ್ನ ಪ್ರಶಸ್ತಿ ಪ್ರದಾನ

ಏಷ್ಯಾನೆಟ್ ಸುವರ್ಣನ್ಯೂಸ್ ವರದಿ ಬೆನ್ನಲ್ಲೆ ಇನ್ಸ್ ಪೆಕ್ಟರ್ ಮನೆಗೆ ಆಗಮಿಸಿದ್ದು, ಮನೆಯೊಳಗೆ ಇರುವ ಮಹಿಳೆಯರ ಬಳಿ ಪೊಲೀಸರು ಮಾತನಾಡುತ್ತಿದ್ದಾರೆ. ಲಾಕ್ ಓಪನ್ ಮಾಡಿದ್ರೂ  ಮಹಿಳೆಯರು ಹೊರಬರುತ್ತಿಲ್ಲ. ಒಳಗಿಂದ ಲಾಕ್ ಮಾಡಿರುವ ಮಹಿಳೆಯರನ್ನು ಪೊಲೀಸರು ಮನವೊಲಿಸ್ತಿದ್ದಾರೆ.

ವಿದ್ಯಾರಣ್ಯಪುರ ಠಾಣೆ ಇನ್ಸ್ ಪೆಕ್ಟರ್ ವಿರುದ್ಧ ಆರೋಪ!?: ಮನೆ ಗಲಾಟೆ ವಿಚಾರದಲ್ಲಿ ವಿದ್ಯಾರಣ್ಯಪುರ ಠಾಣೆ ಇನ್ಸ್ ಪೆಕ್ಟರ್ ಶಾಮೀಲು ಆದ್ರಾ ಎಂಬ ಬಗ್ಗೆ ಈಗ ಪ್ರಶ್ನೆ ಎದ್ದಿದೆ. ಮನೆ‌ ಮಾಲೀಕ ಅಪ್ಪರ್ ಪರ ನಿಂತು ಮನೆಗೆ ಲಾಕ್ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಶಶಿಕುಮಾರ್ ಎಂಬಾತನಿಂದ 4ಕೋಟಿಗೆ ಅಪ್ಪರ್ ಮನೆ ಪರ್ಚೆಸ್ ಮಾಡಿದ್ದಾರೆ. ಆದ್ರೆ ಶಶಿಕುಮಾರ್ ಗೆ 1 ಕೋಟಿ 75 ಲಕ್ಷ ಮಾತ್ರ ಅಪ್ಪರ್ ಹಣ ನೀಡಿದ್ದಾರೆ. ಉಳಿದ ಹಣ ಬಾಕಿ ಉಳಿಸಿಕೊಂಡಿದ್ದಾರೆ. ಹೀಗಾಗಿ ಮನೆಯನ್ನು ಶಶಿಕುಮಾರ್  50 ಲಕ್ಷ ರೂಪಾಯಿ ಗೆ ಲೀಜ್ ಗೆ ನೀಡಿದ್ದಾರೆ. ಮುತ್ತು ಎಂಬ ವ್ಯಕ್ತಿಗೆ ಲೀಜ್ ನೀಡಿರುವ ಶಶಿಕುಮಾರ್. 50ಲಕ್ಷ ಹಣ ಮುತ್ತುಗೆ ಹಾಗೂ ಮನೆ ಪರ್ಚೆಸಲ್ಲಿ ಉಳಿದಿರೋ ಹಣವನ್ನು ವಾಪಾಸ್ ಕೊಡುವಂತೆ ಶಶಿಕುಮಾರ್  ಹೇಳಿದ್ದಾರೆ. ಆದ್ರೆ ಬಾಕಿ ಹಣ ಕೊಡಲಾಗದೆ ಇನ್ಸ್ ಪೆಕ್ಟರ್ ಜೊತೆ ಶಾಮಿಲಾಗಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದ್ದು, ಇನ್ಸ್ ಪೆಕ್ಟರ್  ಅಪ್ಪರ್ ಜೊತೆ ಶಾಮಿಲಾಗಿ ಮನೆಗೆ ಲಾಕ್ ಮಾಡ್ಸಿದ್ದಾರೆ ಅನ್ನೋ ಆರೋಪ ಇದೆ.

Latest Videos
Follow Us:
Download App:
  • android
  • ios