Asianet Suvarna News Asianet Suvarna News

ದಕ್ಷಿಣ ಕನ್ನಡದಲ್ಲಿ ಎರಡು ದಿನ ಬಳಿಕ ಇಬ್ಬರಿಗೆ ಕೊರೋನಾ ಸೋಂಕು ಪತ್ತೆ

ದ.ಕ. ಜಿಲ್ಲೆಯಲ್ಲಿ ಎರಡು ದಿನಗಳ ಬಳಿಕ ಮಂಗಳವಾರ ಮತ್ತೆ ಕೊರೋನಾ ಸೋಂಕು ಪತ್ತೆಯಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳದ 52 ವರ್ಷದ ತಾಯಿ ಮತ್ತು 26ರ ಪುತ್ರನಲ್ಲಿ ಸೋಂಕು ದೃಢಪಟ್ಟಿದೆ. ಇವರಿಬ್ಬರು ಪಡೀಲಿನ ಫಸ್ಟ್‌ ನ್ಯೂರೋ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು

Two more corona positive cases in mangalore
Author
Bangalore, First Published May 13, 2020, 10:37 AM IST

ಮಂಗಳೂರು(ಮೇ 13): ದ.ಕ. ಜಿಲ್ಲೆಯಲ್ಲಿ ಎರಡು ದಿನಗಳ ಬಳಿಕ ಮಂಗಳವಾರ ಮತ್ತೆ ಕೊರೋನಾ ಸೋಂಕು ಪತ್ತೆಯಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳದ 52 ವರ್ಷದ ತಾಯಿ ಮತ್ತು 26ರ ಪುತ್ರನಲ್ಲಿ ಸೋಂಕು ದೃಢಪಟ್ಟಿದೆ. ಇವರಿಬ್ಬರು ಪಡೀಲಿನ ಫಸ್ಟ್‌ ನ್ಯೂರೋ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು.

ಅಲ್ಲಿ ಶಕ್ತಿನಗರದ 80ರ ಸೋಂಕಿತ ವೃದ್ಧೆಯ ಸಂಪರ್ಕದಿಂದ ಇವರಿಗೂ ಸೋಂಕು ಕಾಣಿಸಿತ್ತು. ಬಳಿಕ ಇತರರಿಗೆ ಅಲ್ಲಿ ಸೋಂಕು ಪತ್ತೆಯಾದಾಗ ಆಸ್ಪತ್ರೆಯನ್ನು ಸೀಲ್‌ಡೌನ್‌ ಮಾಡಲಾಗಿತ್ತು.

ಐಟಿ ನೌಕರರಿಗೆ ಯಾವಾಗಿಂದ ವರ್ಕ್ ಫ್ರಂ ಆಫೀಸ್ ಆರಂಭ?

ಹಾಗಾಗಿ ಇವರಿಬ್ಬರು ಅಲ್ಲಿಯೇ ಕ್ವಾರಂಟೈನ್‌ನಲ್ಲಿದ್ದರು. ಇದೀಗ ಅವರಲ್ಲಿ ಸೋಂಕು ಕಾಣಿಸಿದೆ. ಇವರಿಬ್ಬರು ಉಡುಪಿಯ ಕಾರ್ಕಳ ಸಾಣೂರು ನಿವಾಸಿಗಳು. ಆದರೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಸೇರಿ 39 ಮಂದಿಗೆ ನಡೆಸಿದ ಎರಡನೇ ಸ್ವಾಬ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿದೆ.

ಇದುವರೆಗೆ ದ.ಕ. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. 14 ಮಂದಿ ಗುಣಮುಖರಾಗಿದ್ದು, 16 ಮಂದಿ ವೆನ್ಲಾಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 3 ಮಂದಿ ಸಾವಿಗೀಡಾಗಿದ್ದಾರೆ.

ಹೊರರಾಜ್ಯಗಳಿಂದ ದ.ಕ. ಜಿಲ್ಲೆಗೆ ಆಗಮಿಸಲು 6,092 ಅರ್ಜಿ ಸಲ್ಲಿಕೆ

ಇದೇ ವೇಳೆ ಉತ್ತರ ಭಾರತದ ವಿವಿಧ ಕಡೆಗಳಿಗೆ ವಲಸೆ ಕಾರ್ಮಿಕರನ್ನು ಪುತ್ತೂರು ಹಾಗೂ ಮಂಗಳೂರಿನಿಂದ ಮೂರನೇ ದಿನ ಮಂಗಳವಾರವೂ ರೈಲು ಮೂಲಕ ಕಳುಹಿಸಿಕೊಡುವ ಪ್ರಕ್ರಿಯೆ ನಡೆದಿದೆ. ಒಂದು ರೈಲಿನಲ್ಲಿ ತಲಾ 1,200 ಮಂದಿ ಕಾರ್ಮಿಕರ ಪ್ರಯಾಣಕ್ಕೆ ಅವಕಾಶ ಇದೆ.

Follow Us:
Download App:
  • android
  • ios