ಮನ್ಮುಲ್ ಸಭೆಯ ಅಧ್ಯಕ್ಷತೆಗಾಗಿ ವೇದಿಕೆಯಲ್ಲೇ JDS, ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರ ಜಗಳ

ಕುರ್ಚಿಗಾಗಿ ನಡೆಯುತ್ತಿರೋ ಕಿತ್ತಾಟವನ್ನು ರಾಜ್ಯದ ಜನರೆಲ್ಲರೂ ನೋಡಿದ್ದಾರೆ. ಮಂಡ್ಯದಲ್ಲಿ ನಡೆಸ ಸಾಮಾನ್ಯ ಸಭೆಯಲ್ಲಿಯೂ ಅಧ್ಯಕ್ಷತೆಗಾಗಿ ಕಾಂಗ್ರೆಸ್, ಜೆಡಿಎಸ್ ಎಬೆಂಬಲಿತ ನಿರ್ದೇಶಕರು ಜಗಳ ಮಾಡ್ಕೊಂಡಿದ್ದಾರೆ. ಸಭೆ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷರ ವಿಚಾರವನ್ನು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮಹೇಶ್‌ ಪ್ರಸ್ತಾಪಿಸಿದರು. ನಂತರದಲ್ಲಿ ಎರಡೂ ಪಕ್ಷಗಳ ಬೆಂಬಲಿತ ನಿರ್ದೇಶಕರ ನಡುವೆ ಗಲಾಟೆಯಾಗಿದೆ.

two members belongs to jds congress fights in stage at mandya

ಮಂಡ್ಯ(ಸೆ.16): ಜಿಲ್ಲಾ ಹಾಲು ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸುವ ವಿಚಾರದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರ ನಡುವೆ ಮಾತಿನ ಚಕಮಕಿ ನಡೆದ ಪ್ರಸಂಗ ಜರುಗಿತು.

ಮದ್ದೂರು ತಾಲೂಕಿನ ಗೆಜ್ಜಲಗೆರೆ ಹಾಲು ಒಕ್ಕೂಟದ ಆವರಣದಲ್ಲಿ ಮಂಗಳವಾರ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಆಡಳಿತ ಮಂಡಳಿಗೆ ನಡೆದ ಚುಣಾವಣೆಯಲ್ಲಿ ಜಯಗಳಿಸಿದ 12 ಮಂದಿ ನಿರ್ದೇಶಕರು ಪಾಲ್ಗೊಂಡಿದ್ದರು. ಸಭೆ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷರ ವಿಚಾರವನ್ನು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮಹೇಶ್‌ ಪ್ರಸ್ತಾಪಿಸಿದರು. ಈ ವೇಳೆ ಸಭೆಗೆ ಆಗಮಿಸಿದ್ದ ಜಿಲ್ಲೆಯ ಹಾಲು ಉತ್ಪಾದಕರ ಸಂಘಗಳ ಆಧ್ಯಕ್ಷರುಗಳು ನಿರ್ದೇಶಕ ಬೋರೆಗೌಡ ಹಿರಿಯ ನಿರ್ದೇಶಕರಾಗಿರುವುದರಿಂದ ಅವರಿಗೆ ಆಡಳಿತಾತ್ಮಕ ಅನುಭವವಿದೆ. ಸಭೆಯ ಆಧ್ಯಕ್ಷತೆ ವಹಿಸಲು ಅವಕಾಶ ನೀಡುವಂತೆ ಸಲಹೆ ನೀಡಿದರು.

'ನನ್ನ ಟೀಕಿಸೋರಿಗೆ ಯೋಗ್ಯತೆ ಇದ್ಯಾ'..? ಸಿದ್ದುಗೆ ಎಚ್‌ಡಿಕೆ ಟಾಂಗ್..!

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನೂತನ ನಿರ್ದೇಶಕ ನೆಲ್ಲಿಗೆರೆ ಬಾಲು, ಕಳೆದ ಸಾಲಿನಲ್ಲಿ ಬೋರೆಗೌಡರು ನಿರ್ದೇಶಕರಾಗಿದ್ದ ಆವಧಿಯಲ್ಲಿ ಒಕ್ಕೂಟದಲ್ಲಿ ನಡೆದ ಹಗರಣದಲ್ಲಿ ವಜಾಗೊಂಡಿದ್ದ ಆಡಳಿತ ಮಂಡಳಿಯಲ್ಲಿ ಬೋರೆಗೌಡರು ಇದ್ದಾರೆ. ಹೀಗಾಗಿ ಬೇರೆಯವರಿಗೆ ಸಭಾಧ್ಯಕ್ಷರಾಗಲು ಅನುವು ಮಾಡಿಕೊಡುವಂತೆ ಮನವಿ ಮಾಡಿದರು.

ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕ ಯು.ಸಿ.ಶಿವಕುಮಾರ್‌ ಅವರು ನೆಲ್ಲಿಗೆರೆ ಬಾಲುರವರನ್ನು ತರಾಟೆಗೆ ತೆಗೆದುಕೊಂಡು ಮಾತಿನ ಚಕಮಕಿ ನಡೆಸಿದ ಪರಿಣಾಮ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಅನಂತರ ಮಧ್ಯ ಪ್ರವೇಶ ಮಾಡಿದ ಬಿಜೆಪಿ ಮತ್ತು ಕಾಂಗ್ರೆಸ್‌ ಬೆಂಬಲಿತ ಸದಸ್ಯರಾದ ಎಸ್‌.ಪಿ.ಸ್ವಾಮಿ ಹಾಗೂ ಕೆ.ರವಿ ಉಭಯತ್ರರನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಕೆ.ಆರ್‌.ಪೇಟೆಯಿಂದ ಬಿಎಸ್‌ವೈ ಪುತ್ರ ಸ್ಪರ್ಧಿಸಲ್ಲ: ಡಿಸಿಎಂ ಅಶ್ವತ್ಥ್

ಬಳಿಕ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮಹೇಶ್‌ ಅಧ್ಯಕ್ಷರ ಆಯ್ಕೆಯಾಗದ ಹಿನ್ನೆಲೆಯಲ್ಲಿ ಚುನಾಯಿತ ಆಡಳಿತ ಮಂಡಳಿ ನಿರ್ದೇಶಕರೊಬ್ಬರನ್ನು ಸಭಾಧ್ಯಕ್ಷರಾಗಿ ಮಾಡಲು ಸಹಕಾರ ಸಂಘಗಳ ಕಾಯ್ದೆ ಮತ್ತು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಸಭೆಯ ಗಮನಕ್ಕೆ ಮನವರಿಕೆ ಮಾಡಿಕೊಟ್ಟನಂತರ ಅಂತಿಮವಾಗಿ ಹಿರಿಯ ನಿರ್ದೇಶಕ ಬೋರೆಗೌಡರ ಆಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯನ್ನು ಪ್ರಾರಂಭಿಸಲಾಯಿತು.

FB ಲವರ್ ಜೊತೆ ಓಡಿ ಹೋದ ಮಗಳು, ಮೊಮ್ಮಗನ ಕೊಂದು, ವೃದ್ಧೆ ಆತ್ಮಹತ್ಯೆಗೆ ಯತ್ನ

Latest Videos
Follow Us:
Download App:
  • android
  • ios