ಬೆಂಗಳೂರು(ಏ.24): ಚಿಕ್ಕಜಾಲ ಮತ್ತು ವೈಟ್‌ಫೀಲ್ಡ್‌ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಮಹಿಳೆ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಬಾಗಲೂರು ರಸ್ತೆ ಬಳಿ ಬೈಕ್‌ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಡಿಕ್ಕಿ ಹೊಡೆದ ಪರಿಣಾಮ ಚಿಕ್ಕಜಾಲ ನಿವಾಸಿ ಮಂಜುಳಾ (43) ಎಂಬುವರು ಮೃತಪಟ್ಟಿದ್ದಾರೆ. ಮಂಜುಳಾ ಕಾರ್ಯಕ್ರಮ ನಿಮಿತ್ತ ಗುರುವಾರ ಕಾಡಸಣ್ಣಪ್ಪನಹಳ್ಳಿಗೆ ಬಂದಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಸಂಬಂಧಿಕ ಪವನ್‌ ಕುಮಾರ್‌ ಜತೆ ಮಧ್ಯಾಹ್ನ ಮನೆಗೆ ವಾಪಾಸ್‌ ಆಗುತ್ತಿದ್ದರು. ಕಣ್ಣೂರು-ಬಾಗಲೂರು ರಸ್ತೆ ಬಳಿ ಬರುತ್ತಿದ್ದಂತೆ ಬೈಕ್‌ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.

ಧಾರ​ವಾಡ: ಕೃಷಿ ವಿವಿ ಮಹಿಳಾ ನೌಕ​ರರ ಅಪ​ಘಾತ ಪ್ರಕ​ರ​ಣಕ್ಕೆ ಟ್ವಿಸ್ಟ್‌..!

ಆಟೋ ಪಲ್ಟಿ:

ಮತ್ತೊಂದು ಪ್ರಕರಣದಲ್ಲಿ ಆಟೋ ಪಲ್ಟಿಯಾಗಿ ಚಾಲಕ ಮೃತಪಟ್ಟಿರುವ ಘಟನೆ ವೈಟ್‌ಫೀಲ್ಡ್‌ನ ಚನ್ನಸಂದ್ರ ಮುಖ್ಯರಸ್ತೆಯಲ್ಲಿ ನಡೆದಿದೆ. ತಬರೇಜ್‌ ಪಾಷಾ (21) ಮೃತ ವ್ಯಕ್ತಿ. ತಬರೇಜ್‌ ವೈಟ್‌ಫೀಲ್ಡ್‌ನ ಚನ್ನಸಂದ್ರ ಮುಖ್ಯರಸ್ತೆಯಲ್ಲಿ ಗುರುವಾರ ರಾತ್ರಿ ಆಟೋ ಚಲಾಯಿಸಿಕೊಂಡು ಹೋಗುತ್ತಿದ್ದರು. ಎಂ.ವಿ.ಜೆ ಕಾಲೇಜು ಎದುರು ನಿಯಂತ್ರಣ ಕಳೆದುಕೊಂಡು ಫುಟ್‌ಪಾತ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಉರುಳಿ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಶುಕ್ರವಾರ ಮೃತಪಟ್ಟಿದ್ದಾರೆ. ಈ ಸಂಬಂಧ ವೈಟ್‌ಫೀಲ್ಡ್‌ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.