ಬಸ್ ಬೈಕ್ ಗೆ ಡಿಕ್ಕಿ ಹೊಡೆದ ತಕ್ಷಣ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಬಸ್ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳೀಯರು ಚಾಲಕನ ವಿರುದ್ಧ ಆಕ್ರೋಶವನ್ನು ಹೊರಹಾಕಿದರು.
ಚಿಕ್ಕಮಗಳೂರು(ಮಾ.22): ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿನ ಘಟನೆ ಚಿಕ್ಕಮಗಳೂರಿನ ಎಪಿಎಂಸಿ ಬಳಿ ನಡೆದಿದೆ. ಇಂದು(ಬುಧವಾರ) ಸಂಜೆ 4ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಚಿಕ್ಕಮಗಳೂರಿನಿಂದ ಕಡೂರು ಕಡೆ ತೆರಳುತ್ತಿದ್ದ ಬಸ್ ನಗರದ ಎಪಿಎಂಸಿ ಬಳಿ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಸಾವನ್ನಪ್ಪಿದವರನ್ನು ಜಾವಗಲ್ ಮೂಲದ ಶ್ರೀಧರ್ (24) ಚಿಕ್ಕಮಗಳೂರಿನ ದಂಟರಮಕ್ಕಿ ಸಮೀಪದ ದಯಾನಂದ್ (30) ಎಂದು ಗುರುತಿಸಲಾಗಿದೆ.
ನೈಟ್ ಶಿಫ್ಟ್ ಮಾಡುತ್ತಿದ್ದ ಪೊಲೀಸ್‌ಗೆ ಗುದ್ದಿದ ಅಪರಿಚಿತ ವಾಹನ: ಸ್ಥಳದಲ್ಲಿಯೇ ಪೇದೆ ಸಾವು
ಬಸ್ ಬೈಕ್ ಗೆ ಡಿಕ್ಕಿ ಹೊಡೆದ ತಕ್ಷಣ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಬಸ್ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳೀಯರು ಚಾಲಕನ ವಿರುದ್ಧ ಆಕ್ರೋಶವನ್ನು ಹೊರಹಾಕಿದರು. ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
