ಮಂಗಳೂರು (ಜು.14): ಕುವೈಟ್‌ನಲ್ಲಿ ಉದ್ಯೋಗ ವಂಚನೆಗೆ ಒಳಗಾಗಿ ಅತಂತ್ರ ಸ್ಥಿತಿಯಲ್ಲಿದ್ದ 34 ಮಂದಿ ಕರಾವಳಿಯ ಭಾರತೀಯ ಸಂತ್ರಸ್ತ ನೌಕರರ ಪೈಕಿ ಇಬ್ಬರು ಶನಿವಾರ ತಾಯ್ನಾಡಿಗೆ ಹೊರಟಿದ್ದಾರೆ.

ಮಂಜೇಶ್ವರ ಬಡಾಜೆ ನಿವಾಸಿ ಅಭಿಷೇಕ್‌ ಮತ್ತು ಉತ್ತರಪ್ರದೇಶದ ಪಂಕಜ್‌ ಎಂಬಿಬ್ಬರು ಶನಿವಾರ ರಾತ್ರಿ ಕುವೈಟ್‌ನಿಂದ ಮುಂಬಯಿಗೆ ಪ್ರತ್ಯೇಕ ವಿಮಾನಗಳಲ್ಲಿ ಹೊರಟಿದ್ದಾರೆ. ಅಭಿಷೇಕ್‌ ಅವರು ಕುವೈಟ್‌ನಿಂದ ರಾತ್ರಿ 8.30ರ ವಿಮಾನಕ್ಕೆ ಹೊರಟರೆ, ಪಂಕಜ್‌ ಮಧ್ಯರಾತ್ರಿ 12.30ರ ವಿಮಾನದಲ್ಲಿ ಹೊರಡಲಿದ್ದಾರೆ. ಈ ಸಂದರ್ಭ ಅನಿವಾಸಿ ಉದ್ಯಮಿಗಳಾದ ಮೋಹನದಾಸ ಕಾಮತ್‌, ರಾಜ್‌ ಭಂಡಾರಿ, ಅಲ್ವಿನ್‌ ಡಿಸೋಜಾ, ಅಮಿತಾಶ್‌ ಪ್ರಭು ಬೀಳ್ಕೊಟ್ಟರು.

ರಜೆಯ ಮೇಲೆ ಸ್ವದೇಶಕ್ಕೆ ವಾಪಸ್:

ಕುವೈಟ್‌ನಿಂದ ಕೇವಲ ಇವರಿಬ್ಬರಿಗೆ ಮಾತ್ರ ಸ್ವದೇಶಕ್ಕೆ ಮರಳಲು ಪಾಸ್‌ಪೋರ್ಟ್‌ ಲಭಿಸಿದೆ. ಆದರೆ ಇವರ ವೀಸಾ ರದ್ದುಗೊಂಡಿಲ್ಲ. ರಜೆ ಮೇಲೆ ಸ್ವದೇಶಕ್ಕೆ ಮರಳುತ್ತಿದ್ದಾರೆ. 6 ತಿಂಗಳ ಕಾಲ ಕುವೈಟ್‌ಗೆ ಮರಳದಿದ್ದರೆ, ವೀಸಾ ಸ್ವಯಂ ಆಗಿ ರದ್ದುಗೊಳ್ಳಲಿದೆ. ಆದರೆ ಉಳಿದ ಮಂದಿ ಯಾವಾಗ ಭಾರತಕ್ಕೆ ಮರಳುತ್ತಾರೆ ಎಂಬುದು ಖಚಿತವಾಗಿಲ್ಲ.

5 ಮುಸ್ಲಿಮ್ ದೇಶಗಳ ಪ್ರಜೆಗಳ ಪ್ರವೇಶಕ್ಕೆ ನಿಷೇಧ ಹೇರಿದ ಕುವೈಟ್

ರಾಯಭಾರಿ ಕಚೇರಿ ಅ​ಧಿಕಾರಿಗಳು ಗುರುವಾರ ಸಂಜೆ ಅನಿವಾಸಿ ಉದ್ಯಮಿ, ಕರಾವಳಿ ಮೂಲದ ಮೋಹನ್‌ದಾಸ್‌ ಕಾಮತ್‌ ಅವರು ಕಂಪನಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ಫಲವಾಗಿ ಇಬ್ಬರಿಗೆ ಮಾತ್ರ ಪಾಸ್‌ಪೋರ್ಟ್‌ ಲಭಿಸಿದೆ. ಆದರೆ ಇವರ ವೀಸಾ ರದ್ದುಗೊಂಡಿಲ್ಲ.

Close