ಗುಳೇದಗುಡ್ಡ ಸಮೀಪದ ನಾಗರಾಳ ಎಸ್ಪಿ ಗ್ರಾಮದ ದ್ಯಾವಪ್ಪ ಮಾಗಿ, ಬೀಳಗಿ ತಾಲೂಕಿನ ಗಿರಿಸಾಗರದ ಹನುಮಂತ ಗಾಯಗೊಂಡವರು. ಪೆಟ್ರೋಲ್‌ ಸುರಿದು ಬೆಂಕಿಹಚ್ಚುವಾಗ ಇವರ ಬಟ್ಟೆಗೆ ಬೆಂಕಿ ತಗುಲಿದ್ದು, ತಕ್ಷಣ ಸ್ಥಳದಲ್ಲಿದ್ದ ಪೊಲೀಸರು, ಇತರೆ ಕಾರ್ಯಕರ್ತರು ಬೆಂಕಿ ನಂದಿಸಿದರು. ಬಳಿಕ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

ಬಾಗಲಕೋಟೆ(ಆ.20): ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ಜಿಲ್ಲಾಡಳಿತ ಭವನ ಎದುರು ರಾಜ್ಯಪಾಲರ ಪ್ರತಿಕೃತಿ ದಹಿಸುತ್ತಿದ್ದಾಗ ಇಬ್ಬರು ಕಾರ್ಯಕರ್ತರಿಗೆ ಬೆಂಕಿ ತಗುಲಿದ ಘಟನೆ ಸೋಮವಾರ ನಡೆದಿದೆ.

ಗುಳೇದಗುಡ್ಡ ಸಮೀಪದ ನಾಗರಾಳ ಎಸ್ಪಿ ಗ್ರಾಮದ ದ್ಯಾವಪ್ಪ ಮಾಗಿ, ಬೀಳಗಿ ತಾಲೂಕಿನ ಗಿರಿಸಾಗರದ ಹನುಮಂತ ಗಾಯಗೊಂಡವರು. ಪೆಟ್ರೋಲ್‌ ಸುರಿದು ಬೆಂಕಿಹಚ್ಚುವಾಗ ಇವರ ಬಟ್ಟೆಗೆ ಬೆಂಕಿ ತಗುಲಿದ್ದು, ತಕ್ಷಣ ಸ್ಥಳದಲ್ಲಿದ್ದ ಪೊಲೀಸರು, ಇತರೆ ಕಾರ್ಯಕರ್ತರು ಬೆಂಕಿ ನಂದಿಸಿದರು. ಬಳಿಕ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

ಮುಡಾದಲ್ಲಿ ಏನು ತಪ್ಪಾಗಿದೆ ಕೋರ್ಟ್‌ಗೆ ಬಾಂಡ್‌ನಲ್ಲಿ ನೀಡಲಿ: ಸಚಿವ ಆರ್‌.ಬಿ.ತಿಮ್ಮಾಪೂರ

ಸದ್ಯ ಅವರ ಆರೋಗ್ಯ ಚೇತರಿಸಿಕೊಂಡಿದ್ದು, ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪುರ, ಶಾಸಕ ಎಚ್‌.ವೈ.ಮೇಟಿ ಸೇರಿ ಪಕ್ಷದ ಮುಖಂಡರು, ನಾಯಕರು ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.