*   ಹುಣಸೂರು-ಮೈಸೂರು ಹೆದ್ದಾರಿಯ ರಂಗಯ್ಯನಕೊಪ್ಪಲು ಗೇಟ್‌ ಬಳಿ ನಡೆದ ಘಟನೆ*  ಹುಣಸೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಹಾಲಿನ ವಾಹನ *  ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜು  

ಹುಣಸೂರು(ಜೂ.20): ಕಾರು- ಹಾಲಿನ ಟ್ಯಾಂಕರ್‌ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಯುವತಿಯರು ಮೃತಪಟ್ಟಿರುವ ಘಟನೆ ಹುಣಸೂರು-ಮೈಸೂರು ಹೆದ್ದಾರಿಯ ರಂಗಯ್ಯನಕೊಪ್ಪಲು ಗೇಟ್‌ ಬಳಿ ಶನಿವಾರ ಸಂಜೆ ನಡೆದಿದೆ. 

ಮೈಸೂರಿನ ಆಲನಹಳ್ಳಿಯ ನಿವಾಸಿ ಚಂದ್ರಶೇಖರಮೂರ್ತಿ ಅವರ ಪುತ್ರಿ ಜೀವಿತಾ (25) ಹಾಗೂ ಮೈಸೂರಿನ ಅಗ್ರಹಾರದ ಪ್ರಸನ್ನಕುಮಾರ್‌ ಅವರ ಪುತ್ರಿ ಪ್ರತ್ಯೂಷಾ(26) ಮೃತರು. 

ಅಪ್ಪಂದಿರ ದಿನದಂದೇ ದುರಂತ ಅಂತ್ಯಕಂಡ ತಂದೆ-ಮಗ

ಹಾಲಿನ ವಾಹನ ಹುಣಸೂರಿನಿಂದ ಮೈಸೂರಿಗೆ ತೆರಳುತ್ತಿತ್ತು. ಇದೇ ವೇಳೆ ವೇಗವಾಗಿ ಬರುತ್ತಿದ್ದ ಕಾರು ಬಲಭಾಗಕ್ಕೆ ತಿರುಗಿ ಎದುರಿನಿಂದ ಬರುತ್ತಿದ್ದ ಹಾಲಿನ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಸ್ಥಳದಲ್ಲೇ ಜೀವಿತಾ ಕೊನೆಯುಸಿರು ಎಳೆದಿದ್ದಾರೆ. ಪ್ರತ್ಯೂಷಾ ಮೈಸೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಕೊನೆಯುಸಿರೆಳೆದಿದ್ದಾರೆ.