ಕನಕಗಿರಿ: ಸ್ನಾನ ಮಾಡಲು ಹೋಗಿ ನೀರಿನ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕಿಯರ ಸಾವು
* ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ನಡೆದ ಘಟನೆ
* ನೀರಿನ ಹೊಂಡದಲ್ಲಿ ಸ್ನಾನ ಮಾಡಲು ಹೋಗಿ ನೀರು ಪಾಲಾದ ಕವಿತಾ, ಸಿಂಚನಾ
* ಈ ಸಂಬಂಧ ಕನಕಗಿರಿ ಠಾಣೆಯಲ್ಲಿ ಪ್ರಕರಣ ದಾಖಲು
ಕನಕಗಿರಿ(ಜು.03): ಜಮೀನಿನಲ್ಲಿರುವ ವಕ್ರಾಣಿ (ನೀರಿನ ಹೊಂಡ)ಯಲ್ಲಿ ಸ್ನಾನ ಮಾಡಲು ಹೋಗಿದ್ದ ಇಬ್ಬರು ಬಾಲಕಿಯರು ನೀರುಪಾಲಾದ ಘಟನೆ ತಾಲೂಕಿನ ಹುಲಿಹೈದರ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ನಡೆದಿದೆ.
ಕವಿತಾ ದೇವಪ್ಪ (10) ಸಿಂಚನಾ ಯಮನೂರಪ್ಪ (13) ಮೃತ ಬಾಲಕಿಯರು.
ಹುಲಿಹೈದರ ಗ್ರಾಮದ ಹೊರವಲಯದಲ್ಲಿರುವ ಖಾಸಗಿ ಜಮೀನಿನ ವಕ್ರಾಣಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಕವಿತಾ, ಸಿಂಚನಾ ಕಾಲು ಜಾರಿ ಬಿದ್ದಿದ್ದಾರೆ. ಅಕ್ಕಪಕ್ಕದಲ್ಲಿ ಯಾರೂ ಇಲ್ಲದ ಕಾರಣ ಬಾಲಕಿಯರು ಬಿದ್ದಿದ್ದು ಯಾರಿಗೂ ಗೊತ್ತಾಗಲಿಲ್ಲ. ಮಕ್ಕಳು ಬಹಳ ಹೊತ್ತು ಕಾಣದಿದ್ದಾಗ ಪಾಲಕರು ಹುಡುಕಾಡಿದ್ದಾರೆ. ಸಂಶಯಗೊಂಡು ವಕ್ರಾಣಿಯಲ್ಲಿ ಹುಡುಕಿದಾಗ ಬಾಲಕಿಯರ ಶವ ಪತ್ತೆಯಾಗಿವೆ. ಕವಿತಾ ಹುಲಿಹೈದರ ಗ್ರಾಮದವರಾಗಿದ್ದರೆ ಸಿಂಚನಾ ಆಗೋಲಿ ಗ್ರಾಮದವಳು.
ವಿಜಯಪುರ: ಕಾಣೆಯಾದ ಬಾಲಕಿಯರಿಬ್ಬರು ಶವವಾಗಿ ಪತ್ತೆ
ಸ್ಥಳಕ್ಕೆ ಸಿಪಿಐ ಉದಯರವಿ ಹಾಗೂ ಪಿಸಿಐ ತಾರಾಬಾಯಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಕನಕಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.