ಸೋಶಿಯಲ್ ಮೀಡಿಯಾದಲ್ಲಿಯೂ ಹರಿದಾಡುತ್ತಿದೆ ಮಂಗಳೂರಿನ ಘಟನೆ/ ಒಂದೇ ಪ್ರಕರಣಕ್ಕೆ ಎರಡು ಮುಖ/ ಹಿರಿಯ ನಾಗರಿಕರು ಪೊಲೀಸರ ಕೆಲಸಕ್ಕೆ ಅಡ್ಡಿ ಮಾಡಿದರೆ? ಮರೆವಿನ ಕಾಯಿಲೆ ಇರುವ ವೃದ್ಧರ ಪರಿಸ್ಥಿತಿಗೆ ಹೊಣೆ ಯಾರು?

ಮಂಗಳೂರು(ಏ. 17) ಒಂದೇ ಘಟನೆಗೆ ಎರಡು ಮುಖವಿರುತ್ತದೆ ಎಂಬುದಕ್ಕೆ ಮಂಗಳೂರಿನ ಈ ಪ್ರಕರಣವೇ ಸಾಕ್ಷಿ. ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಲಾಕ್ ಡೌನ್ ಅವಧಿಯಲ್ಲಿ ಬೀದಿಗೆ ಬಂದು ರಂಪ ಮಾಡಿದ ವೃದ್ಧ ಎಂದು ಕರೆಯಬಹುದು. ಇನ್ನೊಂದು ರೀತಿಯಲ್ಲಿ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯರ ಮೇಲೆ ಕೇಸ್ ಬುಕ್ ಎಂದು ಬರೆಯಬಹುದು. ಎರಡೂ ಸರಿ.. ಎರಡರಲ್ಲೂ ತಪ್ಪಿಲ್ಲ.. 

ಅವರು ಹಿರಿಯರು. ಡಮೆನ್ಷಿಯಾದಿಂದ ತೊಂದರೆ ಪಡುತ್ತಿದ್ದವರು. ಡೆಮನ್ಷಿಯಾ ಎಂದರೆ ಮರೆವಿನ ಕಾಯಿಲೆ. ಈ ಲಾಕ್ ಡೌನ್ ವಿಚಾರ ಮರೆತುಹೋಗಿ ರಸ್ತೆಗ ಕಾರು ತೆಗೆದುಕೊಂಡು ಬಂದುಬಿಟ್ಟಿದ್ದಾರೆ. ಪೊಲೀಸರು ಅವರ ಬಳಿ ದಾಖಲೆ, ಪಾಸ್ ಕೇಳಿದ್ದಾರೆ. ಯಾಕೆ ಎಂಬುದು ಹಿರಿಯರ ಪ್ರಶ್ನೆ. ಕೊನೆಗ ಪೊಲೀಸರು ಅವರ ಮೇಲೆ ಕರ್ತವ್ಯಕ್ಕೆ ಅಡ್ಡಿ ದೂರನ್ನು ದಾಖಲಿಸಿದ್ದಾರೆ. ಇದು ಒಂದು ಮುಖ.

ಅರವತ್ತರ ಅರಳುಮರಳಲ್ಲ, ಇದು ಅಲ್ಜೈಮರ್‌!

ಜನತೆಗೆ ರಕ್ಷಣೆ ನೀಡುವ ಪೊಲೀಸರಿಗೆಯೇ ರಕ್ಷಣೆ ಇಲ್ಲ, ವಿದ್ಯಾವಂತರೇ ಹೀಗೆ ಮಾಡಿದರೆ ಹೇಗೆ? ಬರೀ ಇಂಗ್ಲಿಷ್ ಮಾತನಾಡುವ ಈ ಹಿರಿಯ ನಾಗರಿಕರಿಗೆ ಲಾಕ್‌ಡೌನ್ ಎಂದರೆ ಏನೆಂದು ಗೊತ್ತಿಲ್ಲ. ಲಾಕ್‌ಡೌನ್ ಜಾರಿಯಾಗಿರುವುದು ಗೊತ್ತಿಲ್ಲ. ಎಲ್ಲ ಬಿಡಿ, ಕಾರಿನ ದಾಖಲೆ ಪತ್ರಗಳನ್ನು ಕೇಳಿದರೆ ಕೊಡುವುದಿಲ್ಲ ಎಂಬ ರೋಷದ ಉತ್ತರ.

ಹಿರಿಯ ನಾಗರಿಕರ ವರ್ತನೆ ನೋಡಿದರೆ ಬಿಪಿ, ಶುಗರ್ ಇರುವ ಹಾಗೆ ಕಾಣುತ್ತದೆ. ಅದೇನೆ ಇದ್ದರೂ ಅ ಹಿರಿಯ ನಾಗರಿಕರು ಎಲ್ಲಿಯಾದರೂ ಈ ಪೊಲೀಸರ ಜೊತೆ ಸ್ವಲ್ಪ ಸಮಾಧಾನದಿಂದ ನಡೆದುಕೊಳ್ಳುತ್ತಿದ್ದರೆ... ಈ ರೀತಿಯ ಸನ್ನಿವೇಶ ಸೃಷ್ಠಿಯಾಗುತ್ತಿರಲಿಲ್ಲವೋ ಎಂದು ನನಗೆ ಅನಿಸುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರಹಗಳು ಕಂಡುಬಂದಿವೆ. ಮಂಗಳೂರಿನ ಲಾಲ್ ಬಾಗ್ ಸಮೀಪದ ಪಬ್ಬಸ್ ಮುಂಭಾಗ ನಡೆದ ಪ್ರಕರಣದ ಎರಡು ಮುಖವನ್ನು ನಿಮ್ಮ ಮುಂದೆ ಇಟ್ಟಿದ್ದೇವೆ.

"