ಬಾಗಲಕೋಟೆ(ಏ.27): ಬಸವ ಜಯಂತಿಯಂದೇ ಜಿಲ್ಲೆಯ ಬಾದಾಮಿ ತಾಲೂಕಿನ ಬೆಳವಲಕೊಪ್ಪ ಗ್ರಾಮದಲ್ಲಿ ಅಪರೂಪದ ಕರು ಜನನವಾಗುವ ಮೂಲಕ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.

ಬೆಳವಲಕೊಪ್ಪ ಗ್ರಾಮದ ಶರಣಪ್ಪ ಲಿಂಗರಡ್ಡಿ ಎನ್ನುವವರಿಗೆ ಸೇರಿದ ಹಸು ವಿಚಿತ್ರ ಕರುವಿಗೆ ಜನ್ಮ ನೀಡಿದ್ದು ಒಂದೆ ದೇಹ, ಎರಡು ಮುಖ, ಮೂರು ಕಿವಿ, ನಾಲ್ಕು ಕಣ್ಣುಗಳನ್ನು ಹೊಂದಿದೆ. ಈ ಅಪರೂಪದ ಕರು ಹುಟ್ಟಿದ ಅರ್ಧ ಗಂಟೆಯಲ್ಲೇ ಸಾವನ್ನಪ್ಪಿದೆ.

ಕೊರೋನಾ ಸೋಂಕಿ​ತರ ಪತ್ತೆಗೆ ಬದಲಿ ​ಮಾರ್ಗ: ಇಲ್ಲಿದೆ ಮಾಸ್ಟರ್‌ ಪ್ಲಾನ್‌..!

ಬಸವ ಜಯಂತಿಯಂದೆ ಹುಟ್ಟು, ಸಾವು ಕಂಡ ಅಪರೂಪದ ಕರುವನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಿ ಅಂತ್ಯಕ್ರಿಯೆ ಮಾಡಬೇಕು ಅಂದುಕೊಂಡಿದ್ದ ರೈತ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸರಳವಾಗಿ ತೋಟದಲ್ಲಿ ಅಂತ್ಯಕ್ರಿಯೆ ನಡೆಸಿದ್ದಾನೆ.