ಬೇಲೂರು [ಸೆ.10]: ತಾಲೂಕು ಅರೇಹಳ್ಳಿ ಪಟ್ಟಣದಲ್ಲಿನ ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮವನ್ನು ಸೆ.11 ರಂದು ಹಮ್ಮಿಕೊಳ್ಳಲಾಗಿದೆ. 

ಈ ದಿನದಂದು ಗಣಪತಿ ವಿಸರ್ಜನೆ ಕಾರ್ಯಕ್ರಮವು ಸುಗಮವಾಗಿ ನಡೆಸಲು ಮುನ್ನಚ್ಚರಿಕೆ ಕ್ರಮವಾಗಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಅರೇಹಳ್ಳಿ ಪಟ್ಟಣ ವ್ಯಾಪ್ತಿಯಲ್ಲಿ ಸೆ.10 ರಂದು ಬೆಳಗ್ಗೆ 6ರಿಂದ ಸೆ.11 ರ ರಾತ್ರಿ 10 ಗಂಟೆವರೆಗೆ ಪಾನ ನಿರೋಧ(ಒಣ) ದಿನವನ್ನಾಗಿ ಘೋಷಿಸಿ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಆದೇಶಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎಲ್ಲಾ ಬಗೆಯ ಮದ್ಯ ಮಾರಾಟ ಮತ್ತು ಎಲ್ಲಾ ಬಗೆಯ ಬಾರುಗಳನ್ನು ಮುಚ್ಚುವುದು ಸೇರಿದಂತೆ ಎಲ್ಲಾ ಬಗೆಯ ಅಮಲು ಪಾನೀಯ ಹಾಗೂ ಮದ್ಯ ಶೇಖರಣೆ, ಮದ್ಯ ಮಾರಾಟ ಹಾಗೂ ಸರಬರಾಜು ಮಾಡುವಂತಹ ಎಲ್ಲಾ ಬಗೆಯ ಸ್ಟಾರ್‌ ಹೋಟೆಲ್‌ಗಳು, ಡಾಬಾಗಳು, ರೆಸ್ಟೋರೆಂಟ್‌ಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ಹಾಗೂ ಮದ್ಯ ಸಾಗಾಟ ಮತ್ತು ಸರಬರಾಜು ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆರ್‌. ಗಿರೀಶ್‌ ಆದೇಶಿಸಿರುತ್ತಾರೆ.