Asianet Suvarna News Asianet Suvarna News

ವಿಜಯಪುರ: ಮಾಜಿ ಶಾಸಕ ಸೇರಿ ಇಬ್ಬರಿಗೆ ಕೊರೋನಾ ಪಾಸಿಟಿವ್‌

ವಿಜಯಪುರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 333ಕ್ಕೆ ಏರಿಕೆ| ಮಾಜಿ ಶಾಸಕ ಸೇರಿ ಇಬ್ಬರಿಗೂ ನೆಗಡಿ, ಕೆಮ್ಮು, ಜ್ವರದಿಂದ ಕೊರೋನಾ ಪಾಸಿಟಿವ್‌ ಬಂದಿದೆ| 26,988 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ರವಾನೆ| ಈ ಪೈಕಿ 26,599 ಮಂದಿ ವರದಿ ನೆಗೆಟಿವ್‌, 333 ಮಂದಿ ವರದಿ ಪಾಸಿಟಿವ್‌, ಇನ್ನೂ 56 ಮಂದಿ ವರದಿ ಬರಬೇಕಿದೆ|

Two Coronavirus Postive Cases in Vijayapura Including Former MLA
Author
Bengaluru, First Published Jun 27, 2020, 1:25 PM IST

ವಿಜಯಪುರ(ಜೂ.27):  ಜಿಲ್ಲೆಯಲ್ಲಿ ಶುಕ್ರವಾರ ಮಾಜಿ ಶಾಸಕ ಸೇರಿ ಮತ್ತೆ ಇಬ್ಬರಿಗೆ ಕೊರೋನಾ ಪಾಟಿಸಿವ್‌ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಇದುವರೆಗೆ ಸೋಂಕಿತರ ಸಂಖ್ಯೆ 333ಕ್ಕೇರಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ತಿಳಿಸಿದ್ದಾರೆ.

ಕೊರೋನಾ ಕುರಿತು ಮಾಹಿತಿ ನೀಡಿದ ಅವರು, 28 ವರ್ಷದ ಮಹಿಳೆ ರೋಗಿ ಸಂಖ್ಯೆ 10653 ಹಾಗೂ 72 ವರ್ಷದ ಮಾಜಿ ಶಾಸಕ ರೋಗಿ ಸಂಖ್ಯೆ 10654 ಅವರಿಗೆ ಕೊರೋನಾ ಪರೀಕ್ಷೆ ವರದಿಯಲ್ಲಿ ಪಾಸಿಟಿವ್‌ ಇರುವುದು ಪತ್ತೆಯಾಗಿದೆ. ಈ ಇಬ್ಬರಿಗೂ ನೆಗಡಿ, ಕೆಮ್ಮು, ಜ್ವರದಿಂದ ಕೊರೋನಾ ಪಾಸಿಟಿವ್‌ ಬಂದಿದೆ.

ಕೊರೋನಾ ಕಂಟಕ: 'ಮಹಾರಾಷ್ಟ್ರದಿಂದ ಬಂದವರನ್ನು ಪರೀಕ್ಷೆ ಮಾಡಿ'

ಶುಕ್ರವಾರ ಆಸ್ಪತ್ರೆಯಿಂದ ಯಾವುದೇ ರೋಗಿಗಳ ಬಿಡುಗಡೆಯಾಗಿಲ್ಲ. ಒಟ್ಟು ಇದುವರೆಗೆ ಗುಣಮುಖರಾದ 232 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ಸದ್ಯಕ್ಕೆ 94 ಸಕ್ರಿಯ ರೋಗಿಗಳು ಇದ್ದಾರೆ ಎಂದರು. 34,275 ಮಂದಿಯನ್ನು ನಿಗಾದಲ್ಲಿ ಇಡಲಾಗಿದೆ. 26,324 ಜನರು 28 ದಿನಗಳ ಐಸೋಲೇಶನ್‌ ಅವಧಿ ಪೂರ್ಣಗೊಳಿಸಿದ್ದಾರೆ. 7,712 ಜನರು 1ರಿಂದ 28 ದಿನಗಳ ರಿಪೋರ್ಟಿಂಗ್‌ ಅವಧಿಯಲ್ಲಿ ಇದ್ದಾರೆ ಎಂದರು.

26,988 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 26,599 ಮಂದಿ ವರದಿ ನೆಗೆಟಿವ್‌ ಬಂದಿದೆ. 333 ಮಂದಿ ವರದಿ ಪಾಸಿಟಿವ್‌ ಬಂದಿದೆ. ಇನ್ನೂ 56 ಮಂದಿ ವರದಿ ಬರಬೇಕಿದೆ ಎಂದು ವಿವರಿಸಿದರು.

Follow Us:
Download App:
  • android
  • ios