ಹುಬ್ಬಳ್ಳಿ (ಅ.21): ಮಾಜಿ ಸಚಿವರಾದ ವಿನಯ ಕುಲಕರ್ಣಿ, ಎಂ.ಬಿ. ಪಾಟೀಲ್‌ ಅವರು ಬಿಜೆಪಿ ಸೇರುವ ಬಗ್ಗೆ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ. 

ಬಿಜೆಪಿಗೆ ಯಾವುದೇ ರಾಜಕೀಯ ಅಸ್ಪೃಶ್ಯತೆ ಇಲ್ಲ, ಪಕ್ಷಕ್ಕೆ ಹೊರೆಯಾಗದಿದ್ದರೆ ಹಾಗೂ ಸಿದ್ಧಾಂತ ಒಪ್ಪಿದರೆ ಯಾರನ್ನಾದರೂ ಸೇರಿಸಿಕೊಳ್ಳುತ್ತೇವೆ ಎಂದರು.

3 ವರ್ಷ ಬಿಎಸ್‌ವೈ ರಾಜ್ಯದ ಸಿಎಂ, ಬದಲಾವಣೆ ಮಾತೇ ಇಲ್ಲ: ಗುಡುಗಿದ ಬಿಜೆಪಿ ಸಾರಥಿ! ...

 ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷ ಯಾವಾಗಲೂ ರಾಜಕೀಯ ಅಸ್ಪೃಶ್ಯತೆ ಬಗ್ಗೆ ನಂಬಿಕೆ ಇಟ್ಟಿಲ್ಲ. ಸಾಮಾಜಿಕ ಅಸ್ಪೃಶ್ಯತೆ ಸಹಿಸುವುದಿಲ್ಲ. ಹಿಂದೆ ಹಲವರು ತತ್ವ, ಸಿದ್ಧಾಂತದ ಬಗ್ಗೆ ನಂಬಿಕೆ ಇಟ್ಟು ಬಿಜೆಪಿಗೆ ಬಂದಾಗ ಸೇರ್ಪಡೆ ಮಾಡಿಕೊಂಡಿದ್ದೇವೆ. ಒಂದು ವೇಳೆ ಪಕ್ಷಕ್ಕೆ ಹೊರೆ ಆಗುತ್ತಾರೆ ಎಂದರೆ ಅಂಥವರನ್ನು ನಾವೇಕೆ ಸೇರಿಸಿಕೊಳ್ಳಬೇಕು? ಪಕ್ಷ ಸೇರ್ಪಡೆ ವಿಚಾರದಲ್ಲಿ ಸ್ಥಳೀಯ ಘಟಕಗಳ ನಿರ್ಧಾರವೇ ಅಂತಿಮ ಎಂದಿದ್ದಾರೆ.

ಅವರ ಅಭಿಪ್ರಾಯ ಕೇಳಿಯೇ ಮುಂದುವರಿಯಲಾಗುವುದು. ಅಷ್ಟಕ್ಕೂ ಕುಲಕರ್ಣಿ, ಎಂ.ಬಿ. ಪಾಟೀಲ ಸೇರ್ಪಡೆ ಕುರಿತು ಪ್ರಾಥಮಿಕ ಹಂತದ ಪ್ರಸ್ತಾಪವೂ ನನ್ನವರೆಗೆ ಬಂದಿಲ್ಲ ಎಂದು ಪ್ರತಿಕ್ರಿಯಿಸಿದರು.