Kalaburagi: ಚಿಕನ್‌ ಪಾಕ್ಸ್‌ ರೋಗಕ್ಕೆ ಇಬ್ಬರು ಮಕ್ಕಳು ಬಲಿ?

*  ಇಮ್ರಾನ್‌ ಪಟೇಲ್‌ ಹಾಗೂ ರೆಹಮಾನ್‌ ಪಟೇಲ್‌ ಸಾವಿಗೀಡಾದ ಬಾಲಕರು
*  ನಾಲ್ವರು ಮಕ್ಕಳಲ್ಲಿ ಕಾಣಿಸಿಕೊಂಡ ಚಿಕನ್‌ ಪಾಕ್ಸ್‌ ಸಾಂಕ್ರಾಮಿಕ ರೋಗ
*  ಚಿಕಿತ್ಸೆ ಫಲಿಸದೆ ಇಬ್ಬರು ಮಕ್ಕಳು ಸಾವು

Two Children Dies Due to Chickenpox in Kalaburagi grg

ಕಲಬುರಗಿ(ಫೆ.02):  ಜಿಲ್ಲೆಯ ನಾಲ್ವರು ಮಕ್ಕಳಲ್ಲಿ ಚಿಕನ್‌ ಪಾಕ್ಸ್‌(Chickenpox) ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದೆ. ಈ ಪೈಕಿ ಇಬ್ಬರು ಮಕ್ಕಳು(Children) ಸಾವನ್ನಪ್ಪಿದ್ದಾರೆಂದು(Death) ತಿಳಿದು ಬಂದಿದೆ. ಜಿಲ್ಲೆಯ ಚಿತ್ತಾಪುರ(Chittapur) ತಾಲೂಕಿನ ನಾಲವಾರ್‌ ಗ್ರಾಮದಲ್ಲಿ ಸ್ಟೇಷನ್‌ ಬಡಾವಣೆಯ ನಿವಾಸಿಗಳಾದ ಇಮ್ರಾನ್‌ ಪಟೇಲ್‌(16) ಹಾಗೂ ರೆಹಮಾನ್‌ ಪಟೇಲ್‌(14) ಸಾವಿಗೀಡಾದ ಬಾಲಕರು.

ಹಾಪೀಸಾ ಬೇಗಂ ಎಂಬುವರ ನಾಲ್ವರು ಮಕ್ಕಳಲ್ಲಿ ಚಿಕನ್‌ ಪಾಕ್ಸ್‌ ಸಾಂಕ್ರಾಮಿಕ ರೋಗ(Infectious Disease) ಕಾಣಿಸಿಕೊಂಡಿದೆ. ಇದರಿಂದ ಆತಂಕಗೊಂಡ ಬೇಗಂ ತನ್ನ ಇಬ್ಬರು ಮಕ್ಕಳನ್ನು ಸೊಲ್ಲಾಪುರದ(Solapur) ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಚಿಕಿತ್ಸೆ(Treatment) ಫಲಿಸದೆ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆಂದು ಗೊತ್ತಾಗಿದೆ.

Baburao Chinchansur: ತಳವಾರ, ಪರಿವಾರಗೆ ಎಸ್‌ಟಿ ಪತ್ರ: ಸಿಎಂಗೆ ಚಿಂಚನಸೂರು ಕೃತಜ್ಞತೆ

ಸದ್ಯ ಹಾಪೀಸಾ ಸೇರಿ ಇನ್ನಿಬ್ಬರು ಮಕ್ಕಳು ಸಹ ಚಿಕನ್‌ ಪಾಕ್ಸ್‌ ರೋಗದಿಂದ ಬಳಲುತ್ತಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೂವರ ರಕ್ತದ ಮಾದರಿಯನ್ನು ಪಡೆದ ಆರೋಗ್ಯ ಇಲಾಖೆ(Department of Health) ಸಿಬ್ಬಂದಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.ಇದೇ ಬಡಾವಣೆಯ ಮತ್ತಿಬ್ಬರಲ್ಲಿಯೂ ಸಹ ಚಿಕನ್‌ ಪಾಕ್ಸ್‌ ರೋಗದ ಲಕ್ಷಣಗಳು ಕಂಡುಬಂದಿರುವುದಾಗಿ ಚಿತ್ತಾಪುರ ಟಿಎಚ್‌ಒ ಅಮರದೀಪ ತಿಳಿಸಿದ್ದಾರೆ.

ವೈದ್ಯರ ಯಡವಟ್ಟಿಗೆ ಮಹಿಳೆ ಬಲಿ: ಹೊಟ್ಟೆ ನೋವೆಂದು ಬಂದು ಹೆಣವಾದಳು

ಕಲಬುರಗಿ: ಹೊಟ್ಟೆ ನೋವೆಂದು ವೈದ್ಯರ(Doctors) ಬಳಿ ಬಂದು ಆಪರೇಶನ್‌ಗೆ(Surgery) ಒಳಗಾಗಿ ಏಕಾಏಕಿ ದೇಹಸ್ಥಿತಿ ವಿಷಮಿಸಿ ಸಾವನ್ನಪ್ಪಿರುವ ಇಟಗಿಯ ನಾಗಮ್ಮ ಬಾಗೋಡಿ (45) ಸಾವು ಆಕೆಯ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿದ್ದ ಘಟನೆ ಕಳೆದ ವರ್ಷದ ಡಿ.26 ರಂದು ನಡೆದಿತ್ತು. 

ವೈದ್ಯರ ಆಪರೇಷನ್‌ ಯಶಸ್ವಿಯಾಗಿಲ್ಲ, ಚಿಕಿತ್ಸೆಯಲ್ಲಿನ(Treatment) ಯಡವಟ್ಟುಗಳಿಂದಲೇ ನಾಗಮ್ಮ ಸಾವನ್ನಪ್ಪಿದ್ದಳು(Death), ವೈದ್ಯರ ಆಪರೇಷನ್‌ ನಾಗಮ್ಮಳ ಸಂಸಾರವನ್ನೇ ಪರೇಶಾನ್‌ ಮಾಡಿದೆ ಎಂದು ಸಹೋದರರು, ಬಂಧುಗಳು ಹಲಬುತ್ತಿದ್ದಾರೆ. ಐವರು ಮಕ್ಕಳ ದೊಡ್ಡ ಸಂಸಾರ, ಪತಿರಾಯ ವ್ಯಸನಿ. ಸಂಸಾರದ ಭಾರ ನಾಗಮ್ಮಳೇ ಹೊತ್ತಿದ್ದಳು. ಆದರೆ ನಾಗಮ್ಮಳ ಸಾವಿನ ಪ್ರಸಂಗ ಆಕೆಯ ಸಂಸಾರದ ಮೇಲೆ ಬರ ಸಿಡಿಲ ರೂಪದಲ್ಲಿ ಬಂದೆರಗಿದೆ.
ವೈದ್ಯರ ಅಲಕ್ಷತನದಿಂದ ತನ್ನ ತಂಗಿಯ ಸಾವಾಯ್ತು ಎಂದು ಸಹೋದರ ಮಹಾಂತೇಶ ಅಳುತ್ತಿದ್ದರೆ, ಗರ್ಭಾಶಯದ ತೊಂದರೆ ಇದ್ದಾಗ ದೊಡ್ಡವರಿಗೆ ವಿಷಯ ತಿಳಿಸದೆ ವೈದ್ಯರು ಆಪರೇಷನ್‌ಗೆ ಮುಂದಾಗಿದ್ದರು.

Raichur Republic Day : ಜಡ್ಜ್ ವಿರುದ್ಧ ಪ್ರತಿಭಟನೆ ಜೋರು, ಸತ್ಯ ಮರೆಮಾಚಿ ಅಪಪ್ರಚಾರ ಎಂದ ನ್ಯಾಯಾಧೀಶ

ಹೊಟ್ಟೆ ನೋವೆಂದು ಬಂದು ಹೆಣವಾದಳು:

ಇಟಗಿಯ ನಾಗಮ್ಮ ಡಿ.23ರಂದು ಹೊಟ್ಟೆ ನೋವೆಂದು ತನ್ನ ಪುತ್ರನೊಂದಿಗೆ ಸಂಜನಾ ಸರ್ಜಿಕಲ್‌ ಕ್ಲಿನಿಕ್‌ಗೆ ಆಗಮಿಸಿದಾಗ ಆಕೆಯ ಆರೋಗ್ಯ ತಪಾಸಣೆ ಮಾಡಿ ತಕ್ಷಣ ಶಸ್ತ್ರಕ್ರಿಯೆಗೊಳಗಾಗುವ ಸಲಹೆ ನೀಡಿದ್ದರು. ಡಾ.ಜಂಪಾ. ಆಸ್ಪತ್ರೆಗೆ ಬಂದ ದಿನವೇ ಶಸ್ತ್ರ ಚಿಕಿತ್ಸೆಯೂ ನಡೆದಿದೆ. ಆದರೆ ಶಸ್ತ್ರ ಚಿಕಿತ್ಸೆ ನಡೆದ ದಿನ ರಾತ್ರಿಯೇ ನಾಗಮ್ಮಳ ದೇಹಸ್ಥಿತಿ ವಿಷಮಿಸಿದೆ. ಮೂತ್ರ ವಿಸರ್ಜನೆ ಬಂದ್‌ ಆಗಿ, ಹಿಮೋಗ್ಲೋಬಿನ್‌(Hemoglobin) ಅಂಶ ಕುಸಿದಿತ್ತು.

ಪರಿಸ್ಥಿತಿ ಮುಚ್ಚಿಟ್ಟ ವೈದ್ಯ:

ಬೆಳಗ್ಗೆ ಮತ್ತೊಮ್ಮೆ ಆಪರೇಷನ್‌ ಥೇಟರ್‌ಗೆ ಒಯ್ದು ಚಿಕಿತ್ಸೆ ನೀಡಿದ್ದಾರಾದರೂ ಯಾವುದೇ ಪ್ರಗತಿ ಕಂಡಿಲ್ಲ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದ್ದು, ಎಲ್ಲ ಸರಿಹೋಗುತ್ತದೆಂದು ಡಾ.ಜಂಪಾ ನಾಗಮ್ಮಳನ್ನು ಹೆಚ್ಚಿನ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು. ನಾವು ಖಾಸಗಿ ಆಸ್ಪತ್ರೆ ವೈದ್ಯರಿಗೆ ಕೇಳಿದರೆ ತಂಗಿಯ ದೇಹಸ್ಥಿತಿ ಬಿಗಡಾಯಿಸಿರುವ ಸಂಗತಿ ಗೊತ್ತಾಯು. ಡಾ.ಜಂಪಾ ತಮ್ಮಿಂದ ಅನೇಕ ಸಂಗತಿಗಳನ್ನು ಬಚ್ಚಿಟ್ಟು ಇಡೀ ಪ್ರಕರಣದಲ್ಲಿ ತಮ್ಮ ತಪ್ಪು ಯಾರಿಗೂ ಗೊತ್ತಾಗದಂತೆ ಬಚ್ಚಿಡುವ ಯತ್ನ ಮಾಡಿದ್ದರು. ದೇವರಲ್ಲಿ ಮೊರೆ ಇಟ್ಟು ಕುಳಿತವರಿಗೆ ಮಧ್ಯರಾತ್ರಿ ನಾಗಮ್ಮ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದೆರಗಿತು ಎಂದು ಮಹಾಂತೇಶ ಪಾಟೀಲ್‌ ಕಣ್ಣೀರಿಟ್ಟಿದ್ದರು. 
 

Latest Videos
Follow Us:
Download App:
  • android
  • ios