ಮಂಡ್ಯ (ಜ.17): ಪಕ್ಷದ ರಾಜ್ಯಾಧ್ಯಕ್ಷರ ಕಾರ್ಯಕ್ರಮದಲ್ಲಿ ಅಶಿಸ್ತು ಹಾಗೂ ಅಸಂಬದ್ಧವಾಗಿ ವರ್ತಿಸಿದ್ದರ ಹಿನ್ನೆಲೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷರ ಶಿಫಾರಸಿನ ಮೇಲೆ ಇಬ್ಬರನ್ನು ಉಚ್ಛಾಟಿಸಲಾಗಿದೆ.

ಮಂಡ್ಯದ ನಾಗಮಂಗಲ ತಾಲೂಕಿನ ಇಬ್ಬರು ಕಾರ್ಯಕರ್ತರನ್ನು ಉಚ್ಛಾಟನೆ ಮಾಡಲಾಗಿದೆ. ಈ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ವಿಜಯಕುಮಾರ್ ಮಾಹಿತಿ ನೀಡಿದ್ದಾರೆ. 

ಈ ಸಂಬಂಧ ಹೇಳಿಕೆ ನೀಡಿರುವ ವಿಜಯಕುಮಾರ್  ನಾಗಮಂಗಲ ತಾಲೂಕಿನ ಉಪ್ಪಾರಹಳ್ಳಿ ಗ್ರಾಮದ ಸುರೇಶ್ ಟಿ. ಬೆಳ್ಳೂರಿನ ಗೋವಿಂದ ಘಟ್ಟ ಗ್ರಾಮದ ಅವಿನಾಶ್ ಅವರನ್ನು ಪಕ್ಷದ ಶಿಸ್ತಿನ ಉಲ್ಲಂಘನೆ ಆರೋಪದ ಮೇರೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ ಎಂದು ಹೇಳಿದ್ದಾರೆ.

ಇಂದು ಬೆಳಗಾವಿಗೆ ಅಮಿತ್ ಶಾ, ಲೋಕಸಭಾ ಟಿಕೆಟ್ ಫೈಟ್‌ಗೆ ಸಿಗುತ್ತಾ ಟ್ವಿಸ್ಟ್..? ..

ರಾಜ್ಯದಲ್ಲಿ ಬಿಜೆಪಿ ಬಲರ್ಧನೆ ಸಾಕಷ್ಟು ರೀತಿಯ ತಂತ್ರಗಾರಿಕೆಗಳು ಮುಂದುವರಿಯುತ್ತಲೇ ಇದೆ. ಮುಖಂಡರು ಮತ್ತೊಮ್ಮೆ ಬಿಜೆಪಿಯ ಗೆಲುವಿಗಾಗಿ ಈಗಾಗಲೇ ಹಲವು ಮಾಸ್ಟರ್ ಪ್ಲಾನ್‌ಗಳನ್ನು ಮಾಡುತ್ತಿದ್ದಾರೆ.  ಇದರ ಬೆನ್ನಲ್ಲೇ ಅಶಿಸ್ತಿನ ನಡೆ ಹಿನ್ನೆಲೆಯಲ್ಲಿ ಇಬ್ಬರು ಮುಖಂಡರನ್ನು ಉಚ್ಛಾಟನೆ ಮಾಡಲಾಗಿದೆ.