Asianet Suvarna News Asianet Suvarna News

Belagavi: ಸಚಿವೆ ಜೊಲ್ಲೆ ತವರು ಜಿಲ್ಲೆಯಲ್ಲಿ ಭ್ರಷ್ಟಾಚಾರ ಬಟಾಬಯಲು: ಇಬ್ಬರ ಬಂಧನ

*  ಬೆಳಗಾವಿಯಲ್ಲಿ ತಡರಾತ್ರಿ ಎಸಿಬಿ ದಾಳಿ 
*  ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಳಗಾವಿ ಮುಜರಾಯಿ ಇಲಾಖೆ ತಹಶಿಲ್ದಾರ್ ಸೇರಿ ಇಬ್ಬರ ಬಂಧನ
*  ಎಸಿಬಿ ಎಸ್‌ಪಿ ನೇಮಗೌಡ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ 
 

Two Arrested For Corruption Case in Belagavi grg
Author
Bengaluru, First Published Jan 22, 2022, 11:55 AM IST

ಬೆಳಗಾವಿ(ಜ.22):  ಸಚಿವೆ ಶಶಿಕಲಾ ಜೊಲ್ಲೆ(Shashikala Jolle) ತವರು ಜಿಲ್ಲೆಯಲ್ಲೇ ಮುಜರಾಯಿ ಇಲಾಖೆಯ ಭ್ರಷ್ಟಾಚಾರ(Corruption) ಬಟಾಬಯಲಾಗಿದೆ. ಬೆಳಗಾವಿ ಎಸಿಬಿ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ಲಂಚಕ್ಕೆ ಬೇಡಿಕೆಯಿಟ್ಟ ಇಬ್ಬರನ್ನ ಬಂಧಿಸಲಾಗಿದೆ. 

ಮುಜರಾಯಿ ತಹಶೀಲ್ದಾರ್ ದಶರಥ್ ಜಾಧವ್, ತಹಶೀಲ್ದಾರ್ ಸಂಬಂಧಿ ಸಂತೋಷ ಕಡೋಲ್ಕರ್ ಬಂಧಿತ ಅರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳು ದೇವಸ್ಥಾನದ(Temple) ಜೀರ್ಣೋದ್ಧಾರಕ್ಕಾಗಿ ಮಂಜೂರಾಗಿದ್ದ ಅನುದಾನ ಬಿಡುಗಡೆಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ತಿಳಿದು ಬಂದಿದೆ. 

BDA Corruption : ಕಾರ್ನರ್‌ ಸೈಟ್‌ಗಾಗಿ ಎಂತೆಂಥಾ ಗೋಲ್‌ ಮಾಲ್‌.. ನಿಪುಣರೇ ಬೆಚ್ಚಬೇಕು!

ಜಿಲ್ಲೆಯ ರಾಮದುರ್ಗದ(Ramdurg) ಯಕಲಮ್ಮ ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನ ಬಿಡುಗಡೆಯಾಗಿತ್ತು. ಆರಾಧನಾ ಯೋಜನೆಯಡಿ 4 ಲಕ್ಷ ರೂ‌‌. ಅನುದಾನ(Grants) ಮಂಜೂರಾಗಿತ್ತು. ಮಂಜೂರಾದ ಅನುದಾನದ ಶೇ. 5ರಷ್ಟು ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. 

ಮುಜರಾಯಿ ತಹಶೀಲ್ದಾರ್ ದಶರಥ್ ಜಾಧವ್ 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ತ‌ನ್ನ ಅಳಿಯ ಸಂತೋಷಗೆ ಹಣ ನೀಡುವಂತೆ ದಶರಥ್ ಜಾಧವ್ ತಿಳಿಸಿದ್ದರು. ಮುಜರಾಯಿ ತಹಶೀಲ್ದಾರ್ ದಶರಥ ಅಳಿಯ ಸಂತೋಷ ಹಾಲಿನ ಡೈರಿಗೆ ತೆರಳಿ ಲಂಚ ನೀಡುವಂತೆ ತಿಳಿಸಿದ್ದರು. 

ಈ ಕುರಿತು ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಸುಭಾಷ್ ಗೋಡಕೆ ಅವರು ಎಸಿಬಿಗೆ ದೂರು ನೀಡಿದ್ದರು. ನಿನ್ನೆ(ಶುಕ್ರವಾರ) ರಾತ್ರಿ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಇಬ್ಬರೂ ಬಲೆಗೆ ಬಿದ್ದಿದ್ದಾರೆ. ಎಸಿಬಿ ಎಸ್‌ಪಿ ಬಿ.ಎಸ್‌.ನೇಮಗೌಡ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದ್ದು, ಎಸಿಬಿ ಡಿವೈಎಸ್‌ಪಿ ಕರುಣಾಕಾರ್ ಶೆಟ್ಟಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಕೊಟ್ಟೂರು ಸಿಪಿಐ ಕಚೇರಿ ಮೇಲೆ ಎಸಿಬಿ ದಾಳಿ: ಎಸ್‌ಐ, ಎಎಸ್‌ಐ ಬಂಧನ

ಕೊಟ್ಟೂರು: ಅಕ್ರಮ ಮರಳು ಸಾಗಣೆ(Illegal Sand Transport) ಪ್ರಕರಣವೊಂದನ್ನು ಖುಲಾಸೆಗೊಳಿಸಲು  10 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದ ಕೊಟ್ಟೂರು(Kotturu) ಪೊಲೀಸ್‌ ಠಾಣೆಯ ಪಿಎಸ್‌ಐ ಹಾಗೂ ಎಎಸ್‌ಐ ಅವರನ್ನು ಬಳ್ಳಾರಿಯ ಭ್ರಷ್ಟಾಚಾರ ನಿಗ್ರಹದಳದ (ACB) ಅಧಿಕಾರಿಗಳು ಕಳೆದ ಡಿ.11 ರಂದು ದಾಳಿ ನಡೆಸಿ, ಬಂಧಿಸಿದ್ದರು. ಸಬ್‌ ಇನಸ್ಪೆಕ್ಟರ್‌ ಹೆಚ್‌. ನಾಗಪ್ಪ ಹಾಗೂ ಸಹಾಯಕ ಸಬ್‌ ಇನಸ್ಪೆಕ್ಟರ್‌ ಸೈಫುಲ್ಲಾ ಬಂಧಿತರು(Arrest). ಪ್ರಕರಣದ ಇತರೆ ಆರೋಪಿಗಳಾದ ಸಿಪಿಐ ಟಿ.ಎಸ್‌. ಮುರುಗೇಶ್‌, ಪೊಲೀಸ್‌ ಪೇದೆಗಳಾದ ತಿಪ್ಪೇಸ್ವಾಮಿ, ನಾಗರಾಜ, ಕೊಂಡಿ ಬಸವರಾಜ್‌ ಪರಾರಿಯಾಗಿದ್ದರು.

ಲಂಚದ(Bribe) ಹಣವನ್ನು ಸ್ವೀಕರಿಸುವ ವೇಳೆ ಬಳ್ಳಾರಿಯ ಎಸಿಬಿ ಡಿವೈಎಸ್‌ಪಿ ಸೂರ್ಯನಾರಾಯಣ ರಾವ್‌ ನೇತೃತ್ವದ ತಂಡ ಇಲ್ಲಿನ ಸಿಪಿಐ ಕಚೇರಿ ಮೇಲೆ ಶನಿವಾರ ಮಧ್ಯಾಹ್ನ ದಾಳಿ(Raid) ನಡೆಸಿ, ಪಿಎಸ್‌ಐ, ಎಎಸ್‌ಐ ಅವರನ್ನು ಬಂಧಿಸಿತ್ತು. 

ಪ್ರಕರಣದ ವಿವರ

ಅಕ್ರಮ ಮರಳು ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡ್ಲಿಗಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ವೆಂಕಟೇಶ ನಾಯ್ಕ ವಿರುದ್ಧ ನ. 28ರಂದು ಪ್ರಕರಣ(Case) ದಾಖಲಾಗಿತ್ತು. ಈ ಪ್ರಕರಣದಲ್ಲಿ ವೆಂಕಟೇಶ್‌ ನಾಯ್ಕರನ್ನು ಕೈಬಿಡುವ ಸಂಬಂಧವಾಗಿ ಕೊಟ್ಟೂರು ಪೊಲೀಸ್‌ ಠಾಣೆಯ ಎಎಸ್‌ಐ ಸೈಪುಲ್ಲಾ ಅವರು ವೆಂಕಟೇಶನಾಯ್ಕರಿಗೆ 10 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.

Corruption in BDA: ಬಹುಕೋಟಿ ಭೂ ಹಗರಣ ಕೇಸ್‌: ಭ್ರಷ್ಟರಿಗೆ ಎಸಿಬಿ ತನಿಖೆ ಬಿಸಿ!

ಶನಿವಾರ ವೆಂಕಟೇಶ ನಾಯ್ಕ ಕೊಟ್ಟೂರು ಸಿಪಿಐ ವೃತ್ತ ಕಚೇರಿಯಲ್ಲಿ ಹಣ ನೀಡುವ ವೇಳೆ ಬಳ್ಳಾರಿ ಎಸಿಬಿ ಅಧಿಕಾರಿಗಳು ದಿಢೀರನೆ ದಾಳಿ ನಡೆಸಿ, ಹಣ ಸಮೇತ ಎಎಸ್‌ಐ ಸೈಪುಲ್ಲಾ ಅವರನ್ನು ವಶಕ್ಕೆ ಪಡೆದರು. ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಅಲ್ಲಿಂದ ಓಡಿ ಹೋಗಲು ಯತ್ನಿಸಿದ ಸಬ್‌ಇನ್ಸ್‌ಸ್ಪೆಕ್ಟರ್‌ ಹೆಚ್‌.ನಾಗಪ್ಪ ಅವರನ್ನು ಎಸಿಬಿ ಅಧಿಕಾರಿಗಳು ವಾಹನದಲ್ಲಿ ತೆರಳಿ ಹಿಡಿದು ತಂದಿದ್ದಾರೆ.

ದಾಳಿ ನಡೆಸಲು ಬಳ್ಳಾರಿ ಎಸಿಬಿ ಅಧಿಕಾರಿಗಳು ರಾಯಚೂರು ಎಸಿಬಿ ತಂಡದ ಸಹಕಾರ ಪಡೆದಿದ್ದರು. ರಾಯಚೂರು ಎಸಿಬಿ ಡಿವೈಎಸ್‌ಪಿ ವಿಜಯಕುಮಾರ್‌ ಸಹ ದಾಳಿಯಲ್ಲಿದ್ದರು. ಕೊಟ್ಟೂರು ಸಿಪಿಐ ಕಚೇರಿ ಮೇಲೆ ಎ.ಸಿ.ಬಿ. ದಾಳಿ ನಡೆದ ವಿಷಯ ಗೊತ್ತಾಗುತ್ತಿದ್ದಂತೆ ಕೂಡ್ಲಿಗಿ ಪೊಲೀಸ್‌ ಉಪವಿಭಾಗದ ಡಿವೈಎಸ್‌ಪಿ ಹರೀಶ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದರು.
 

Follow Us:
Download App:
  • android
  • ios