ಸಚಿನ್ ಆತ್ಮಹತ್ಯೆ ಕೇಸ್: ಸಚಿವ ಖರ್ಗೆ, ಆಂದೋಲಾ ಶ್ರೀ ಟ್ವೀಟ್ ಸಮರ!
ಡಾ.ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ,ರಾಹುಲ್ ಗಾಂಧಿ ತಲ್ವಾರ್ ಹಿಡಿದಿರೋ ಫೋಟೊ ಪೋಸ್ಟ್ ಮಾಡಿದ ಸಿದ್ದಲಿಂಗ ಸ್ವಾಮೀಜಿ ಈ ಫೋಟೋಗಳನ್ನ ನೋಡಿ ಇದಕ್ಕೇನು ಹೇಳ್ತಿರ ಜೂನಿಯರ್ ಕೆಆರ್‌ಜಿ? ಇವೆಲ್ಲಾ ಭಯ ಹುಟ್ಟಿಸುವ ಲಕ್ಷಣಗಳಾ? ಎಂದು ಪ್ರಶ್ನಿಸಿದ್ದಾರೆ.
ಕಲಬುರಗಿ(ಜ.01): ಬೀದರ್‌ನ ಸಚಿನ್ ಪಂಚಾಳ ಆತ್ಮಹತ್ಯೆ ಪ್ರಕರಣ ಮುಂದಿಟ್ಟುಕೊಂಡು ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಟ್ವಿಟ್ ಹೇಳಿಕೆಗಳ ಸಮರ ಮುಂದುವರಿದಿದೆ. ಏತನ್ಮಧ್ಯೆ ತಲ್ವಾರ್ ಪ್ರದರ್ಶನದ ತಮ್ಮ ಫೋಟೋಗಳಿದ್ದರೂ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಲೂರ್ ಅವರ ಸಹೋದರನ ತಲ್ವಾರ್ ಹಿಡಿದಂತಹ ಫೋಟೋ ಪೋಸ್ಟ್ ಮಾಡಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪೇಚಿಗೆ ಸಿಲುಕಿದ್ದಾರೆ.
ಹುಟ್ಟು ಹಬ್ಬದ ಸಂದರ್ಭ ತಲ್ವಾರ್ ಪ್ರದರ್ಶನ ಗೂಂಡಾ ಸಂಸ್ಕೃತಿ ಅಂತೀರಿ, ಇದು ಯಾರ ರಿಪಬ್ಲಿಕ್ ? ಎಂದಿದ್ದ ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿರುವ ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಟ್ವಿಟ್‌ನಲ್ಲೇ ಖಡಕ್ ಉತ್ತರ ನೀಡಿದ್ದಾರೆ. ಯುವ ಕಾಂಗ್ರೆಸ್ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅಜಯ್ ಸಿಂಗ್ ಜೊತೆ ಸ್ವತಃ ಪ್ರಿಯಾಂಕ್ ಖರ್ಗೆ ತಲ್ವಾರ್ ಪ್ರದರ್ಶಿಸಿದ ಫೋಟೋ ಲಗತ್ತಿಸಿ 'ಹೇಳುವುದು ಆಚಾರ ತಿನ್ನುವುದು ಬದನೆಕಾಯಿ' ಎಂದು ತಿವಿದಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವ ಅಗತ್ಯವಿಲ್ಲ: ಡಿ.ಕೆ.ಶಿವಕುಮಾರ್
ಇನ್ನೊಂದು ಟ್ವಿಟ್‌ನಲ್ಲಿ ಬಿಜೆಪಿ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಸಹೋದರ ತಲ್ವಾರ್ ಪ್ರದರ್ಶಿಸಿದ ಫೋಟೋದೊಂದಿಗೆ ಪ್ರಿಯಾಂಕ್ ಖರ್ಗೆ ಮಾಡಿದ್ದ ಟ್ವಿಟ್‌ಗೂ ಆಂದೋಲಾ ಶ್ರೀಗಳು ಡಾ. ಖರ್ಗೆ ತಲವಾರ್ ಹಿಡಿದಿದ್ದ ಫೋಟೋ ಲಗತ್ತಿಸಿ ಮಾರುತ್ತರ ನೀಡಿದ್ದಾರೆ. ಇವರು ಏನು ಮಾಡಿದ್ರೂ ನಡೆಯುತ್ತೆ ಬೇರೆಯವರು ಮಾಡಿದ್ರೆ ಮಾತ್ರ ಸಂವಿಧಾನ, ಕಾನೂನು ಅಂತ ಬೊಗಳೆ ಬಿಡೋದು ಎನ್ನುವ ಪೋಸ್ಟ್ ಮೂಲಕ ಆಂದೋಲಾ ಸ್ವಾಮೀಜಿ, ಮಲ್ಲಿಕಾರ್ಜುನ ಖರ್ಗೆ ತಲ್ವಾರ್ ಪ್ರದರ್ಶಿಸು ತ್ತಿರುವ ಫೋಟೋ ಪೋಸ್ಟ್ ಮಾಡಿ, ಇದು ಯಾರರಿಪಬ್ಲಿಕ್‌ಮಿಸ್ಟರ್‌ಜ್ಯೂನಿಯರ್‌ಖರ್ಗೆ ಅಂತ ತಿರುಗೇಟು ಕೊಟ್ಟಿದ್ದಾರೆ.
ಡಾ.ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ,ರಾಹುಲ್ ಗಾಂಧಿ ತಲ್ವಾರ್ ಹಿಡಿದಿರೋ ಫೋಟೊ ಪೋಸ್ಟ್ ಮಾಡಿದ ಸಿದ್ದಲಿಂಗ ಸ್ವಾಮೀಜಿ ಈ ಫೋಟೋಗಳನ್ನ ನೋಡಿ ಇದಕ್ಕೇನು ಹೇಳ್ತಿರ ಜೂನಿಯರ್ ಕೆಆರ್‌ಜಿ? ಇವೆಲ್ಲಾ ಭಯ ಹುಟ್ಟಿಸುವ ಲಕ್ಷಣಗಳಾ? ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಇದ್ದ ವೇದಿಕೆಯಲ್ಲಿ ವ್ಯಕ್ತಿಯೊಬ್ಬರ ಕಾಲ ಬಳಿ ಅಂಬೇಡ್ಕರ್ ಫೋಟೋ ಇರುವ ಫೋಟೋ ಪೋಸ್ಟ್ ಮಾಡಿ ನಿಮ್ಮ ರಾಹುಲ್ ಗಾಂಧಿ ಫೋಟೋ ಶೂಟ್‌ಲ್ಲಿ ಬಾಬಾ ಸಾಹೇಬರ ಫೋಟೊ ಎಲ್ಲಿಟ್ಟಿದ್ದಾರೆ ನೋಡಿ ಖರ್ಗೆ? ಎಂದೂ ಆಂದೋಲಾ ಶ್ರೀಗಳು ಗುಡುಗಿದ್ದಾರೆ.
ಪ್ರಿಯಾಂಕ್ ಖರ್ಗೆ ಕೈಯಲ್ಲಿ ತಲ್ವಾರ್, ರಾಹು ಲ್ ಗಾಂಧಿ ಜೊತೆ ವೇದಿಕೆಯಲ್ಲಿ ಅಂಬೇಡ್ಕರ್ ಫೋಟೋ ವ್ಯಕ್ತಿಯೊಬ್ಬರ ಕಾಲ ಬಳಿ ಇಟ್ಟಿರುವ ನೋಟ. ಇದನ್ನೂ ಆಂದೋಲಾ ಶ್ರೀಗಳು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಡಾ. ಮಲ್ಲಿಕಾರ್ಜುನ ಖರ್ಗೆ ಸಮಾರಂಭ ಒಂದರಲ್ಲಿ ತಲ್ವಾರ್ ಹಿಡಿದಿರುವ ಫೋಟೋ ವನ್ನು ಆಂದೋಲಾ ಶ್ರೀ ಪೋಸ್ಟ್ ಮಾಡಿದ್ದಾರೆ.
ಆಂದೋಲಾ ಶ್ರೀಗೆ ರಕ್ಷಣೆ ಒದಗಿಸಲು ಆಗ್ರಹ
ಕಲಬುರಗಿ: ಬೀದರ್ ಗುತ್ತಿಗೆದಾರ ಸಚಿನ್ ಪಾಂಚಾಳ ಡೆತ್ ನೋಟ್‌ನಲ್ಲಿ ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಆಂದೋಲಾ ಸ್ವಾಮಿ ಸೇರಿ ಹಲವರ ಹತ್ಯೆಗೆ ಸಂಚು ರೂಪಿಸಿರುವ ಬಗ್ಗೆ ಉಲ್ಲೇಖವಾಗಿರುವ ಹಿನ್ನೆಲೆಯಲ್ಲಿ ಸ್ವಾಮೀಜಿಗಳಿಗೆ ಭದ್ರತೆ ನೀಡಬೇಕುಎಂದು ವಿವಿಧ ಹಿಂದೂಪರ ಸಂಘಟನೆಗಳಿಂದ ಕಲಬುರಗಿಯಲ್ಲಿ ಪ್ರತಿಭಟನೆ ನಡೆಯಿತು.
ಕಲಬುರಗಿಗೆ ಬರೋವಾಗ ಹೋಮ್‌ವರ್ಕ್ ಮಾಡ್ಕೊಂಡು ಬನ್ನಿ: ಸಚಿವ ಪ್ರಿಯಾಂಕ್ ಖರ್ಗೆ
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಯುವಕರು ಆಂದೋ ಲಾ ಸ್ವಾಮೀಜಿಗೆ ಸರ್ಕಾರ ಅಂಗ ರಕ್ಷಕರ ನೇಮಿಸುವಮೂಲಕರಕ್ಷಣೆ ಒದಗಿಸಬೇಕು, ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಗೃಹಮಂತ್ರಿಗಳಿಗೆ ಜಿಲ್ಲಾಧಿಕಾರಿ ಮೂಲಕ ಮನವಿಸಲ್ಲಿಸುತ್ತಾ, ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿಗೆ ಭದ್ರತೆ ಹಾಗೂ ಕೊಲೆ ಸಂಚು ರೂಪಿಸಿದ ವ್ಯಕ್ತಿ ಬಂಧನಕ್ಕೆ ಆಗ್ರಹಿಸಿ ಹಾಗೂ ಷಡ್ಯಂತ್ರ ರೂವಾರಿ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲೇ ಬೇಕೆಂಬುದೇತಮ್ಮ ಆಗ್ರಹವಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಜೇವರ್ಗಿ ತಾಲೂಕಿನ ಸುಕ್ಷೇತ್ರ ಆಂದೋಲಾ ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ಕೊಲೆ ಮಾಡುವ ಬಗ್ಗೆ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಕಂಟ್ರಾಕ್ಟರ್ ಸಚಿನ್ ಪಾಂಚಾಳ ಮರಣ ಪತ್ರದಲ್ಲಿ ಉಲ್ಲೇಖವಾಗಿದೆ. ಕಲಬುರಗಿ ಜಿಲ್ಲಾ ಮಂತ್ರಿ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕವನೂರ ಅನ್ನುವ ವ್ಯಕ್ತಿ ಈ ಹೇಯ ಕೊಲೆ ಬಗ್ಗೆ ಯೋಜನೆ ನಿರೂಪಿಸಿದ್ದರ ಬಗ್ಗೆಯೂ ಅದರಲ್ಲಿ ಉಲ್ಲೇಖವಾಗಿದೆ. ಈ ಹಿನ್ನೆಲೆ ಸ್ವಾಮೀಜಿಗೆ ತಕ್ಷಣವೇ ರಕ್ಷಣೆ ನೀಡಬೇಕು. ಕೊಲೆ ಸಂಚು ರೂಪಿಸಿದ ವ್ಯಕ್ತಿ ಬಂಧನವಾಗಬೇಕು, ಇಲ್ಲದಿದ್ದಲ್ಲಿಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯ ವೆಂದು ಗೃಹ ಸಚಿವರಿಗೆ ಸಲ್ಲಿಸಿರುವ ಮನವಿಯಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.