ತುಂಗಭದ್ರಾ ಮುಖ್ಯ ಕಾಲುವೆ ಗೇಟ್ ಕಟ್: 50 ಅಡಿ ನೀರಿನಾಳಕ್ಕೆ ಇಳಿದ ಮುಳುಗು ತಜ್ಞ

ಮುಂದುವರಿದ ತುಂಗಭದ್ರಾ ಎಡದಂಡೆ ಕಾಲುವೆಯ ಗೇಟ್ ದುರಸ್ಥಿ| ಬೆಳಗಾವಿ ಮೂಲದ ಕಂಪನಿಯೊಂದರ ಸಿಬ್ಬಂದಿಯಿಂದ ದುರಸ್ಥಿ ಕಾರ್ಯ| ಕಿರ್ಲೋಸ್ಕರ ಮತ್ತು ಜಿಂದಾಲ್ ಕಂಪನಿ ತಜ್ಞರ ತಂಡ ಸಾಥ್| ಮಂಗಳವಾರ  ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಯ ಗೇಟ್ ಕಿತ್ತು ಹೋಗಿತ್ತು.

Tungabhadra River Left Canal Gate under repair

ಕೊಪ್ಪಳ, (ಆ.14): ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಯ ಗೇಟ್ ಕಿತ್ತು ಹೋಗಿದ್ದು, ದುರಸ್ಥಿ ಕಾರ್ಯ ಮುಂದುವರಿದಿದೆ.  

ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ಕಾಲುವೆಯ ಗೇಟ್‌ನ್ನು ಬೆಳಗಾವಿಯ ಅಂಡರ್ ವಾಟರ್ ಸರ್ವಿಸ್ ಕಂಪನಿಯ ಮುಳುಗು ತಜ್ಞ ಅಕ್ಷತ ಎನ್ನುವರು ಪರಿಶೀಲನೆ ನಡೆಸಿದ್ದಾರೆ.

ಅಕ್ಷತ ಅವರು ತಮ್ಮ ಪ್ರಾಣದ ಹಂಗುತೊರೆದು ಸುಮಾರು 50-60 ಅಡಿ ಇರುವ ನೀರಿನ ಆಳಕ್ಕೆ ಇಳಿದು ದುರಸ್ಥಿ ಕಾರ್ಯ ಮಾಡುತ್ತಿದ್ದಾರೆ. ಇವರ ಜತೆ ಕಿರ್ಲೋಸ್ಕರ ಮತ್ತು ಜಿಂದಾಲ್ ಕಂಪನಿ ತಜ್ಞರ ತಂಡ ಕಾರ್ಯ ನಿರ್ವಹಿಸುತ್ತಿವೆ.

ತುಂಗಭದ್ರ ಜಲಾಶಯ ಒಡೆದಿದೆ ಎಂಬ ವದಂತಿ: ದಿಕ್ಕಾಪಾಲಾಗಿ ಓಡಿದ ಗ್ರಾಮಸ್ಥರು!

ಮಲೆನಾಡಿನಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದರಿಂದ  ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಜಾಸ್ತಿಯಾಗಿತ್ತು.  ಇದರಿಂದ ಮಂಗಳವಾರ ತುಂಗಭದ್ರಾ ಅಣೆಕಟ್ಟೆಯ ಎಡದಂಡೆ ಮೇಲ್ಮಟ್ಟದ ಕಾಲುವೆಯ ಗೇಟ್ ಕುಸಿದಿತ್ತು. 

ತುಂಗಭದ್ರಾ ಡ್ಯಾಂ ಒಡೆದಿದೆ ಎನ್ನುವ ಸುದ್ದಿ: ಇಲ್ಲಿದೆ ಸತ್ಯಾಸತ್ಯತೆ...

ಗೇಟ್ ಕುಸಿದ ಹಿನ್ನೆಲೆಯಲ್ಲಿ ನೀರು ಪಕ್ಕದ ಪಂಪಾವನದ ಮೂಲಕ ಕೆಳಗೆ ನೀರು ನುಗ್ಗಿತ್ತು. 30 ಕ್ಯೂಸೆಕ್ಸ್ ಸಾಮರ್ಥ್ಯದ ಕಾಲುವೆಗೆ 40-50 ಕ್ಯೂಸೆಕ್ಸ್ ನೀರು ಬಂದಿದ್ದರಿಂದ ಗೇಟ್ ಕುಸಿಯುಲು ಕಾರಣ ಎನ್ನಲಾಗಿದೆ.

ಇದನ್ನು ಕೆಲವರು ಡ್ಯಾಂ ಒಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದರು. ಈ ಹಿನ್ನೆಯಲ್ಲಿ ಪಕ್ಕದ ಗ್ರಾಮಸ್ಥರು ದಿಕ್ಕಾಪಾಗಿ ಓಡಾಡಿದ್ದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಳಿಕ ಇದೊಂದು ಸುಳ್ಳು ಸುದ್ದಿಯಾಗಿದ್ದು, ಡ್ಯಾಂ ಒಡೆದಿಲ್ಲ. ಬದಲಾಗಿ ಮುಖ್ಯ ಕಾಲುವೆಯ ಗೇಟ್ ಕಿತ್ತಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದರು.

Latest Videos
Follow Us:
Download App:
  • android
  • ios