ಕೊಪ್ಪಳ: ತುಂಗಭದ್ರಾ ಡ್ಯಾಂಗೆ 74507 ಕ್ಯುಸೆಕ್‌ ಒಳ ಹರಿವು

*   ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಗೆ ನೀರು ಒದಗಿಸುವ ತುಂಗಭದ್ರಾ ಜಲಾಶಯ 
*   ಕಳೆದ ಎರಡು ದಿನಗಳಲ್ಲಿ ಜಲಾಶಯಕ್ಕೆ ಹರಿದು ಬಂದ 135448 ಕ್ಯೂಸೆಕ್‌ ನೀರು
*   ಜಲಾಶಯ ಬೇಗನೆ ತುಂಬುವ ಆಶಾಭಾವ ಕೂಡ ರೈತರಲ್ಲಿ ಒಡಮೂಡಿದೆ 
 

Tungabhadra Dam Has An Inflow of 74507 cusecs grg

ಹೊಸಪೇಟೆ/ಮುನಿರಾಬಾದ್‌(ಜು.08):  ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ ಒಳ ಹರಿವಿನಲ್ಲಿ ಭಾರಿ ಏರಿಕೆ ಕಂಡಿದ್ದು, ಜಲಾಶಯಕ್ಕೆ 74507 ಕ್ಯುಸೆಕ್‌ ನೀರು ಹರಿದು ಬರುತ್ತಿದೆ.

ಜಲಾಶಯದ ಮೇಲ್ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಹಾಗೂ ತುಂಗಾ ಜಲಾಶಯದಿಂದ ನೀರು ಹೊರಬಿಟ್ಟಿರುವುದರಿಂದ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಶಿವಮೊಗ್ಗ, ತೀರ್ಥಹಳ್ಳಿ, ಕೊಪ್ಪ, ದಾವಣಗೆರೆ, ಹರಿಹರ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ.

ರೈತರಿಗೆ ಗುಡ್‌ನ್ಯೂಸ್, ಅವಧಿಗೂ ಮುನ್ನವೇ ಭರ್ತಿಯಾಗಲಿದೆ ತುಂಗಭದ್ರೆಯ ಒಡಲು

ತುಂಗಭದ್ರಾ ಜಲಾಶಯದ ಒಳ ಹರಿವು 74507 ಕ್ಯುಸೆಕ್‌ ಇರುವ ಹಿನ್ನೆಲೆಯಲ್ಲಿ 105.788 ಕ್ಯುಸೆಕ್‌ ಸಾಮರ್ಥ್ಯದ ಜಲಾಶಯದಲ್ಲಿ 60 ಟಿಎಂಸಿ ನೀರು ಈಗಾಗಲೇ ಸಂಗ್ರಹಗೊಂಡಿದೆ. ಜಲಾಶಯ ಭರ್ತಿಗೆ ಇನ್ನು ಕೇವಲ 45 ಟಿಎಂಸಿ ನೀರು ಬರಬೇಕಿದೆ. ಜಲಾಶಯದ ಒಳ ಹರಿವು ಉತ್ತಮವಾಗಿರುವ ಹಿನ್ನೆಲೆಯಲ್ಲಿ ಜಲಾಶಯ ಬೇಗನೆ ತುಂಬುವ ಆಶಾಭಾವ ಕೂಡ ರೈತರಲ್ಲಿ ಒಡಮೂಡಿದೆ.

ಕಳೆದ ಎರಡು ದಿನಗಳಲ್ಲಿ ಜಲಾಶಯಕ್ಕೆ 135448 ಕ್ಯೂಸೆಕ್‌ ನೀರು ಹರಿದು ಬಂದಿದ್ದು, ಜಲಾಶಯಕ್ಕೆ ಬಂದ ನೀರು ಬರೋಬ್ಬರಿ 12 ಟಿಎಂಸಿ ಆಗಿದೆ. ತುಂಗಭದ್ರಾ ಜಲಾಶಯ ರಾಜ್ಯದ ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಗೆ ನೀರು ಒದಗಿಸುತ್ತದೆ. ಆಂಧ್ರಪ್ರದೇಶ ಹಾಗು ತೆಲಂಗಾಣ ರಾಜ್ಯಗಳಿಗೂ ಈ ಜಲಾಶಯ ನೀರು ಒದಗಿಸಲಿದೆ.
 

Latest Videos
Follow Us:
Download App:
  • android
  • ios