Asianet Suvarna News Asianet Suvarna News

ತುಮಕೂರಲ್ಲಿ ಅಡಕೆ, ತೆಂಗಿನ ಮರಗಳ ಮಾರಣಹೋಮ : ತಹಸೀಲ್ದಾರ್ ಮಮತಾಗೆ ಗೇಟ್ ಪಾಸ್

ತುಮಕೂರಿನಲ್ಲಿ ನೂರಾರು ಮರಗಳ ಮಾರಣಹೋಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗುಬ್ಬಿ ತಹಸೀಲ್ದಾರ್ ಮಮತಾಗೆ ಗೇಟ್ ಪಾಸ್ ನೀಡಲಾಗಿದೆ. 

Tumkur Tree Chopping Case Govt Gate Pass To Gubbi tahsildar Mamatha
Author
Bengaluru, First Published Mar 11, 2020, 2:28 PM IST

ತುಮಕೂರು [ಮಾ.11]: ದೇವಸ್ಥಾನದ ಜಾಗ ಒತ್ತುವರಿ ತೆರವು ನೆಪದಲ್ಲಿ ಸಿದ್ದಮ್ಮ ಸಣ್ಣಕೆಂಪಯ್ಯ ಎಂಬುವವರಿಗೆ ಸೇರಿದ ನೂರಾರು ಅಡಕೆ ತೆಂಗಿನ ಮರಗಳನ್ನು ನೆಲಸಮಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಬ್ಬಿ ತಹಸೀಲ್ದಾರ್ ಮಮತಾ ಅವರಿಗೆ ಸೇವೆಯಿಂದ ಗೇಟ್ ಪಾಸ್ ನೀಡಲಾಗಿದೆ.

ಮಮತಾ ಅವರ ತಹಸೀಲ್ದಾರ್ ಸೇವೆಯಿಂದ ಹಿಂಪಡೆದಿದ್ದು, ಸದ್ಯ ಯಾವುದೇ ಹುದ್ದೆ ಇರುವುದಿಲ್ಲ ಎಂದು ಸೂಚಿಸಿದೆ. 

ಅಲ್ಲದೇ ಮಮತಾ ಅವರಿಗೆ ಕಂದಾಯ ಇಲಾಖೆಗೆ ವರದಿ ಮಾಡಿಕೊಳ್ಳಬೇಕು ಎಂದು ಆದೇಶ ನೀಡಲಾಗಿದೆ. 

ಮಕ್ಕಳಂತೆ ಸಾಕಿದ್ದ ಮರಗಳ ಮಾರಣ ಹೋಮ..! ಮುಗಿಲು ಮುಟ್ಟಿತು ರೈತ ಮಹಿಳೆಯ ಆಕ್ರಂದನ

ಈಗಾಗಲೇ ಮರಗಳ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಗ್ರಾಮ ಲೆಕ್ಕಿಗ ನನ್ನು ಸೇವೆಯಿಂದ ಮಂಗಳವಾರ ಅಮಾನತು ಮಾಡಲಾಗಿತ್ತು. ಅಲ್ಲದೇ ಈ ಬಗ್ಗೆ ಇನ್ನೂ ಹೆಚ್ಚಿನ ವರದಿಯನ್ನು ಸರ್ಕಾರ ಪರಿಶೀಲನೆ ನಡೆಸಲಿದೆ. 

ತುಮಕೂರಿನಲ್ಲೇ ಮತ್ತೊಂದು ಕೇಸ್ : ಅಧಿಕಾರಿಗಳ ಎದುರೇ ನೂರಾರು ಮರಗಳ ಮಾರಣಹೋಮ...

ಮರಗಳ ತೆರವು ಮಾಡುವ ವಿಚಾರದಲ್ಲಿ ಒಂದಷ್ಟು ಗೊಂದಲಗಳಿದ್ದು, ತುರ್ತಾಗಿ ತೆರವು ಮಾಡುವ ಅವಶ್ಯಕತೆ ಏನಿತ್ತು..? ಸಂಬಂಧಪಟ್ಟವರಿಗೆ ಯಾಕೆ ಈ ಬಗ್ಗೆ ಮುಂಚಿತವಾಗಿ ನೋಟಿಸ್ ಜಾರಿ ಮಾಡಿಲ್ಲ ಎಂಬ ಬಗ್ಗೆಯೂ ಸಾಕಷ್ಟು ಪ್ರಶ್ನೆ ಉದ್ಭವಿಸಿವೆ. 

"

Follow Us:
Download App:
  • android
  • ios