Asianet Suvarna News Asianet Suvarna News

ತುಮಕೂರು : ಖಾಲಿ ಸೈಟುಗಳಲಿ ಬೆಳೆದಿರುವ ಗಿಡಗಂಟೆ: ಜನರಲ್ಲಿ ಭಯಭೀತಿ

ತಿಪಟೂರು ಶೈಕ್ಷಣಿಕ ನಗರಿ, ಕೊಬ್ಬರಿ ನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೂ ಸ್ವಚ್ಛತೆ, ನೈರ್ಮಲ್ಯತೆಯ ಕೊರತೆಯಿಂದ ತಿಪಟೂರು ಅಭಿವೃದ್ಧಿಗೆ ಕಪ್ಪು ಚುಕ್ಕೆ ಇಟ್ಟಂತಾಗಿ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತಿದೆ.

Tumkur Tree bells grown on empty sites: panic among people snr
Author
First Published Feb 26, 2024, 10:27 AM IST

 ತಿಪಟೂರು : ತಿಪಟೂರು ಶೈಕ್ಷಣಿಕ ನಗರಿ, ಕೊಬ್ಬರಿ ನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೂ ಸ್ವಚ್ಛತೆ, ನೈರ್ಮಲ್ಯತೆಯ ಕೊರತೆಯಿಂದ ತಿಪಟೂರು ಅಭಿವೃದ್ಧಿಗೆ ಕಪ್ಪು ಚುಕ್ಕೆ ಇಟ್ಟಂತಾಗಿ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತಿದೆ.

ತಿಪಟೂರು ಜಿಲ್ಲೆಯಾಗುವ ಎಲ್ಲಾ ಅರ್ಹತೆಗಳನ್ನು ಒಳಗೊಂಡಿದ್ದರೂ ಕೆಲ ನ್ಯೂನತೆಗಳಿಂದ ನಗರ ಬಳಲುತ್ತಿದೆ. ನಗರದಾದ್ಯಂತ ಖಾಲಿ ನಿವೇಶನ ಸೇರಿದಂತೆ ರಸ್ತೆಯ ಬದಿಗಳು, ಬಡಾವಣೆ, ಬಸ್‌ನಿಲ್ದಾಣಗಳು, ಜನವಸತಿ ಪ್ರದೇಶಗಳಲ್ಲಿ ಅನಪೇಕ್ಷಿತ ಗಿಡ ಗಂಟಿಗಳು ಬೆಳೆದು ವಿಷ ಜಂತುಗಳ ಆವಾಸಸ್ಥಾನವಾಗಿವೆ. ನಗರದ ಯಾವ ಬಡಾವಣೆಗಳನ್ನೂ ನೋಡದಿರೂ ಇದೇ ಸ್ಥಿತಿ ನಿರ್ಮಾಣವಾಗಿದ್ದು ನಿವಾಸಿಗಳು ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ.

ಖಾಲಿ ನಿವೇಶನಗಳ ಪಕ್ಕದಲ್ಲಿಯೇ ವಾಸದ ಮನೆಗಳು ಇರುವುದರಿಂದ ರಾತ್ರಿ ಸಮಯದಲ್ಲಿ ಮಕ್ಕಳು, ವಯಸ್ಸಾದವರು ಮನೆಯಿಂದ ಹೊರಗಡೆ ಬರಲು ಹೆದರುವಂತಾಗಿದೆ. ಇತ್ತೀಚಿಗಂತೂ ಚಿರತೆ, ಕರಡಿ ಕಾಟ ಹೆಚ್ಚಾಗಿದ್ದು ಎಲ್ಲಿ ಪೊದೆ, ಗಿಡ ಗಂಟಿಗಳು ಬೆಳೆದಿದೆಯೋ ಆ ದಾರಿಯಲ್ಲಿ ಹೋಗಲು ಭಯದ ವಾತಾವರಣ ನಿರ್ಮಾಣವಾಗಿದೆ. ನಗರಸಭೆ ಇತ್ತೀಚಿಗೆ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವಂತೆ ಮಾಲೀಕರಿಗೆ ಸೂಚನೆ ನೀಡಿತ್ತು. ಸ್ವಚ್ಛಗೊಳಿಸದಿದ್ದರೆ ಮುಟ್ಟುಗೋಲು ಹಾಕಿ ಸ್ವತಃ ನಗರಸಭೆಯೇ ಸ್ವಚ್ಛತೆ ಮಾಡಿ ಮಾಲೀಕರಿಗೆ ಹಣ ವಸೂಲಿ ಮಾಡುವುದಾಗಿ ಹೇಳಿತ್ತು. ಆದರೆ ಈ ಕಾರ್ಯವನ್ನು ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳು ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಿದ್ದು, ಕಾರ್ಯರೂಪಕ್ಕೆ ಈವರೆಗೂ ಬಂದಿಲ್ಲ. ಹಾಗಾಗಿ ನಗರಸಭೆ ನಿರ್ಲಕ್ಷ್ಯಕ್ಕೆ ನಗರದ ಸೌಂದರ್ಯ ಹಾಳಾಗುತ್ತಿರುವುದರಲ್ಲಿ ಜನಸಾಮಾನ್ಯರು ಓಡಾಡದಂತಹ ಸ್ಥಿತಿಯನ್ನು ನಿರ್ಮಿಸಿದ್ದಾರೆ.

ನಮ್ಮ ಬಡಾವಣೆಯ ಖಾಲಿ ನಿವೇಶನಗಳಲ್ಲಿ ಅನಪೇಕ್ಷಿತ ಗಿಡಗಂಟಿಗಳು ಬೆಳೆದು ನಿಂತಿದ್ದು, ನಮ್ಮ ಮನೆಯ ಪಕ್ಕದಲ್ಲೇ ಮನಗಳೇ ಮುಚ್ಚಿಕೊಳ್ಳುವಂತಹ ಎತ್ತರಕ್ಕೆ ಗಿಡಗೆಂಟೆಗಳು ಬೆಳೆದು ನಿಂತಿದ್ದು ಹಗಲು ವೇಳೆಯಲ್ಲೇ ಅವುಗಳ ಪಕ್ಕದಲ್ಲಿ ಓಡಾಡಲು ಭಯವಾಗುತ್ತಿದೆ. ನಗರಸಭೆಯವರಿಹೆ ಹಲವು ಬಾರಿ ಲಿಖಿತ ದೂರು ನೀಡಿದರೂ ಪ್ರಯೋಜನವಾಗಿಲ್ಲ.

- ಪರಮೇಶ್ವರಪ್ಪ, ಗೋವಿನಪುರ

Follow Us:
Download App:
  • android
  • ios