Tumakur : ನೋಂದಾಯಿತವಲ್ಲದ ಕೀಟನಾಶಕ ಜಪ್ತಿ

ನೋಂದಾಯಿತವಲ್ಲದ ಕೀಟನಾಶಕ ಮಾರಾಟ ಮಾಡುತ್ತಿದ್ದ ಅಂಗಡಿ ಮಳಿಗೆ ಮೇಲೆ ಕೃಷಿ ಇಲಾಖೆ ಜಾರಿ ದಳದ ಅಧಿಕಾರಿಗಳು ದಾಳಿ ನಡೆಸಿ ಕೀಟನಾಶಕವನ್ನು ವಶಪಡಿಸಿಕೊಂಡಿದ್ದಾರೆ.

 Tumkur   Seize of unregistered pesticide  snr

 ತುಮಕೂರು;  ನೋಂದಾಯಿತವಲ್ಲದ ಕೀಟನಾಶಕ ಮಾರಾಟ ಮಾಡುತ್ತಿದ್ದ ಅಂಗಡಿ ಮಳಿಗೆ ಮೇಲೆ ಕೃಷಿ ಇಲಾಖೆ ಜಾರಿ ದಳದ ಅಧಿಕಾರಿಗಳು ದಾಳಿ ನಡೆಸಿ ಕೀಟನಾಶಕವನ್ನು ವಶಪಡಿಸಿಕೊಂಡಿದ್ದಾರೆ.

ಜಿಲ್ಲೆಯ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಗ್ರಾಮದ ಶ್ರೀಗಾಯತ್ರಿ ಏಜೆನ್ಸೀಸ್ ಕೀಟನಾಶಕ ಮಾರಾಟ ಮಳಿಗೆಯಲ್ಲಿ ನೋಂದಾಯಿತವಲ್ಲದ ಕೀಟನಾಶಕ ಮಾರಾಟ ಮಾಡುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೃಷಿ ಇಲಾಖೆಯ ಜಾರಿ ದಳದ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ ಅವರು ಮಳಿಗೆಯಲ್ಲಿ ದಾಸ್ತಾನಿಟ್ಟಿದ್ದ ನೋಂದಾಯಿತವಲ್ಲದ ಕೀಟನಾಶಕ ಹಾಗೂ ಪರವಾನಗಿಯಲ್ಲಿ ಅನುಮತಿ ಪಡೆಯದ ಪೊಸಪೊನಿಕಾಸಿಡ್-98% ಗೆ ಪೋಟ್ಯಾಷ್ ಅಂಶ ಸೇರಿಸಿ ರಸಗೊಬ್ಬರವೆಂದು ಲೇಬಲ್ ಮಾಡಿ ವಿತರಣೆ ಮಾಡುತ್ತಿದ್ದ 10 ಕೆ.ಜಿ. ಗೊಬ್ಬರವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.10.600 ರು. ಎಂದು ಅಂದಾಜಿಸಲಾಗಿದೆ.

ವಶಪಡಿಸಿಕೊಂಡಿರುವ ಗೊಬ್ಬರದ ಮಾದರಿಯನ್ನು ವಿಶ್ಲೇಣೆಗೆ ಕಳುಹಿಸಲಾಗಿದೆ. ಮಾರಾಟಗಾರರು ಮತ್ತು ಸರಬರಾಜುದಾರರ ವಿರುದ್ಧ ಕೀಟನಾಶಕ ಕಾಯ್ದೆ 1968 ಮತ್ತು ನಿಯಮಗಳು 1971ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಜಾರಿ ದಳದ ಅಧಿಕಾರಿ ಪುಟ್ಟರಂಗಪ್ಪ ತಿಳಿಸಿದ್ದಾರೆ.

ದಾಳಿಯಲ್ಲಿ ಆತ್ಮಯೋಜನೆಯ ಚೆನ್ನಕೇಶವ, ವೈ.ಎನ್. ಹೊಸಕೋಟೆ ರೈತ ಸಂಪರ್ಕ ಕೇಂದ್ರದ ಅಶೋಕ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

.

Latest Videos
Follow Us:
Download App:
  • android
  • ios