Asianet Suvarna News Asianet Suvarna News

Tumakur : ವಿವಿಧ ಇಲಾಖೆಗಳ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಭರವಸೆ : ಶಾಸಕ ರಂಗನಾಥ್

ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಇರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡುವ ಭರವಸೆಯನ್ನು ಜನಸ್ಪಂದನ ಸಭೆ ಮುಖಾಂತರ ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್ ನೀಡಿದರು.

Tumkur  Promise of quick solution to the problems of various departments: MLA Ranganath snr
Author
First Published Oct 11, 2023, 8:32 AM IST

 ಕುಣಿಗಲ್ :  ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಇರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡುವ ಭರವಸೆಯನ್ನು ಜನಸ್ಪಂದನ ಸಭೆ ಮುಖಾಂತರ ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್ ನೀಡಿದರು. ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಇರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡುವ ಭರವಸೆಯನ್ನು ಜನಸ್ಪಂದನ ಸಭೆ ಮುಖಾಂತರ ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್ ನೀಡಿದರು.

ಪಟ್ಟಣದ ದಿವ್ಯ ಹಾಲ್‌ ನಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪಟ್ಟಣದ ದಿವ್ಯ ಹಾಲ್‌ ನಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಬೆಸ್ಕಾಂ ನೀರಾವರಿ ಕೊಳವೆಬಾವಿ ಕಾರ್ಮಿಕ ಇಲಾಖೆ ಪುರಸಭಾ ಕಂದಾಯ ಹೇಮಾವತಿ ಗ್ರಾಮ ಪಂಚಾಯಿತಿ ವಸತಿ ಹಾಗೂ ಸ್ಮಶಾನ ಮತ್ತು ರಸ್ತೆ ಒತುವರಿ ಸೇರಿದಂತೆ ವಿವಿಧ ವಿಚಾರವಾಗಿ ಸಾವಿರಾರು ಅರ್ಜಿಗಳನ್ನು ಸಾರ್ವಜನಿಕರಿಂದ ಪಡೆಯಲಾಯಿತು. ಬೆಸ್ಕಾಂ ನೀರಾವರಿ ಕೊಳವೆಬಾವಿ ಕಾರ್ಮಿಕ ಇಲಾಖೆ ಪುರಸಭಾ ಕಂದಾಯ ಹೇಮಾವತಿ ಗ್ರಾಮ ಪಂಚಾಯಿತಿ ವಸತಿ ಹಾಗೂ ಸ್ಮಶಾನ ಮತ್ತು ರಸ್ತೆನವತುಪರಿ ಸೇರಿದಂತೆ ವಿವಿಧ ವಿಚಾರವಾಗಿ ಸಾವಿರಾರು ಅರ್ಜಿಗಳನ್ನು ಸಾರ್ವಜನಿಕರಿಂದ ಪಡೆಯಲಾಯಿತು.

ಅರ್ಜಿಗಳನ್ನ ಸ್ವೀಕಾರ ಮಾಡಿದ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹಲವಾರು ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ ಒಂದು ತಿಂಗಳ ಒಳಗಾಗಿ ಆದಷ್ಟು ಬೇಗ ಸಂಬಂಧಿತ ಅರ್ಜಿಗಳನ್ನು ಪೂರ್ಣಗೊಳಿಸುತ್ತೇವೆ ಎಂದರು.

ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗಾ ಮತ್ತು ಅಮೃತೂರು ಭಾಗದಲ್ಲಿ ಗಣಿಗಾರಿಕೆಗೆ ಆರಂಭಿಸಲು ಸರ್ವೆ ಕಾರ್ಯ ನಡೆಸಲಾಗಿದೆ ಎಂಬ ಮಾಹಿತಿ ಇದೇ ಮುಂದಿನ ದಿನಗಳಲ್ಲಿ ಅವುಗಳು ಪ್ರಾರಂಭವಾದರೆ ರೈತರ ಬದುಕು ಅತಂತ್ರವಾಗುತ್ತದೆ , ದಯವಿಟ್ಟು ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಇದಕ್ಕೆ ಅವಕಾಶ ನೀಡಬಾರದೆಂದು ಕೆಲವು ರೈತರು ಮನವಿ ಮಾಡಿದರು.

ನಿವೇಶನ ರಹಿತ ಹಲವಾರು ಪುರಸಭಾ ವ್ಯಾಪ್ತಿಯ ವಾಸಿಗಳು ನಿವೇಶನಕ್ಕಾಗಿ ಜಿಲ್ಲಾಧಿಕಾರಿಗಳು ಮತ್ತು ಶಾಸಕರಿಗೆ ಮನವಿ ಸಲ್ಲಿಸಿದರು , ಈ ಸಂಬಂಧ ಮುಂದಿನ ದಿನಗಳಲ್ಲಿ ಕ್ರಮ ವಹಿಸುವುದಾಗಿ ಸೂಚಿಸಿದರು.

ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ಡಿ ವೈ ಎಸ್ ಪಿ ಲಕ್ಷ್ಮಣ್ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೀ ಪ್ರಭು ಹಾಗೂ ಕುಣಿಗಲ್ ಸಿಪಿಐ ನವೀನ್ ಗೌಡ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಾಲೂಕಿನ ಹಲವಾರು ವಿವಿಧ ಇಲಾಖೆಗಳ ಮೂಲಕ ಕೌಂಟರ್ ಗಳನ್ನು ತೆರೆಯಲಾಗಿದ್ದು ಸಾವಿರಾರು ರೈತರು ಕಾರ್ಮಿಕರು ಹಾಗೂ ಸಾರ್ವಜನಿಕರಿಗಳು ನೀಡಿದ ಅರ್ಜಿಯನ್ನು ಪಡೆದು ಸಿಕೃತ್ತಿ ನೀಡಲಾಯಿತು.

Follow Us:
Download App:
  • android
  • ios