ಚಾಲಕರಿಗೆ ಕಾನೂನು ಪಾಠ ಮಾಡಿದ ಪಿಎಸ್‌ಐ

ಕುಣಿಗಲ್‌ ಸಬ್‌ ಇನ್ಸ್‌ಪೆಕ್ಟರ್‌ ವಿಶಾಲ್‌ ಗೌಡ ಆಟೋ ಚಾಲಕರಿಗೆ ಕಾನೂನು ಪಾಠ ಮಾಡಿದರು. ಪೊಲೀಸರಂತೆ ಖಾಕಿ ಬಟ್ಟೆಧರಿಸಿರುವ ಆಟೋ ಚಾಲಕರಿಗೂ ಕೂಡ ಸಮಾಜದ ಜವಾಬ್ದಾರಿಗಳಿವೆ ಎಂದು ಅವರು ಹೇಳಿದರು.

Tumkur Police Educate  Auto Drivers about Legalities

ತುಮಕೂರು(ಜು.19): ಪೊಲೀಸರಂತೆ ಖಾಕಿ ಬಟ್ಟೆಧರಿಸಿರುವ ಆಟೋ ಚಾಲಕರಿಗೂ ಕೂಡ ಸಮಾಜದ ಜವಾಬ್ದಾರಿಗಳಿವೆ ಎಂದು ಕುಣಿಗಲ್‌ ಸಬ್‌ ಇನ್ಸ್‌ಪೆಕ್ಟರ್‌ ವಿಶಾಲ್‌ ಗೌಡ ಆಟೋ ಚಾಲಕರಿಗೆ ಕಾನೂನು ಪಾಠ ಮಾಡಿದರು.

ಪಟ್ಟಣದ ಪೊಲೀಸ್‌ ಠಾಣೆ ಮುಂದೆ ಕರೆಯಲಾಗಿದ್ದ ಆಟೋ ಚಾಲಕರನ್ನು ಉದ್ದೇಶಿಸಿ ಮಾತನಾಡಿ, ಸಮಾಜದಲ್ಲಿ ಕೇವಲ ಪೊಲೀಸರಿಗೆ ಮಾತ್ರ ಜವಾಬ್ದಾರಿಗಳಿಲ್ಲ, ನಮ್ಮಂತೆ ಖಾಕಿ ಬಟ್ಟೆಹಾಕಿರುವ ನಿಮಗೂ ಕೂಡ ಹಲವಾರು ಜವಾಬ್ದಾರಿಗಳಿವೆ. ನಾವು ನೀವು ಇಬ್ಬರೂ ಕೂಡ ಕಾನೂನಿನ ಪರಿಪಾಲಕರು. ಯಾವುದೇ ರೀತಿ ಅಪರಾಧಗಳು ನಡೆಯುವ ವಿಷಯ ನಿಮಗೆ ತಿಳಿಯುತ್ತಿದ್ದಂತೆಯೇ ಪೊಲೀಸರಿಗೆ ಮಾಹಿತಿ ನೀಡಿ ಮುಂದೆ ಆಗುವ ಸಮಸ್ಯೆಗಳನ್ನು ತಡೆಯಬೇಕು ಎಂದು ಹೇಳಿದರು.

ಆಟೋದಲ್ಲಿ ಮನಬಂದಂತೆ ಮಕ್ಕಳನ್ನು ತುಂಬೋದು ಅಪರಾಧ:

ಅಪರಿಚಿತ ವ್ಯಕ್ತಿಗಳು ಅಥವಾ ಅನುಮಾನಾಸ್ಪದ ವಸ್ತುಗಳು ಕಂಡಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ. ಮನ ಬಂದಂತೆ ಶಾಲಾ ಮಕ್ಕಳನ್ನು ಆಟೋದಲ್ಲಿ ಸಾಗಿಸುವುದು ಕಾನೂನಿನ ರೀತಿ ಅಪರಾಧ. ಅಂತಹ ವ್ಯಕ್ತಿಗಳು ಕಂಡು ಬಂದಲ್ಲಿ ತಕ್ಷಣ ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ. ಆದ್ದರಿಂದ ಶಾಲಾ ಮಕ್ಕಳ ಸಾಗಣೆ ಆಟೋದಲ್ಲಿ ಬೇಡ ಎಂದು ತಿಳಿ ಹೇಳಿದರು.

ಗ್ರಾಹಕರಿಗೆ ಕಿರಿಕಿರಿ ಮಾಡದೆ ಸೌಜನ್ಯದಿಂದ ಉತ್ತಮ ರೀತಿಯಲ್ಲಿ ಅವರೊಡನೆ ವ್ಯವಹರಿಸಿ ಮತ್ತು ವೇಷಭೂಷಣಗಳು ಸಭ್ಯವಾಗಿರಲಿ. ನಿಮ್ಮ ನಡತೆಯಿಂದ ಆಟೋ ಚಾಲಕರ ಮೇಲೆ ಕೀಳರಿಮೆ ಬರುತ್ತದೆ ಎಂದು ಹೇಳಿದರು.

ಆಟೋ ಚಾಲಕರು ಮತ್ತು ಮಾಲಿಕರ ಸಂಘದ ಅಧ್ಯಕ್ಷ ಜಯರಾಮ್‌, ಸಾದಿಕ್‌, ಮಂಜುನಾಥ್‌, ಸೇರಿದಂತೆ ಹಲವಾರು ಆಟೋ ಚಾಲಕರು ಇದ್ದರು .

ಗಾಡಿ ಮಾಡಿಫೈ ಮಾಡಿದ್ರೆ ಹುಷಾರ್..!

Latest Videos
Follow Us:
Download App:
  • android
  • ios