ತುಮಕೂರು : ಹಲವು ಹಳ್ಳಿಗಳಲ್ಲಿ ಹೆಚ್ಚಿದ ನೀರಿನ ಬರ : ಭದ್ರಾ ನೀರು ಹರಿಸಲು ಒತ್ತಾಯ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಸಿರಿ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ನಿರ್ಲಕ್ಷಿಸಿರುವ ಹುಲಿಕುಂಟೆ ಮತ್ತು ಗೌಡಗೆರೆ ಹೋಬಳಿಗಳ ಎಲ್ಲಾ ಕೆರೆಗಳಿಗೆ ನೀರು ಹರಿಸಿಸುತ್ತೇನೆ ಎಂದು ಶಾಸಕ ಟಿ.ಬಿ.ಜಯಚಂದ್ರ ಅವರು ಆಶ್ವಾಸನೆ ನೀಡಿದ್ದು, ಕೊಟ್ಟ ಮಾತಿನಂತೆ ಭದ್ರಾ ಯೋಜನೆಯಡಿ ಗೌಡಗೆರೆ ಹೋಬಳಿಯ ಕೆರೆಗಳನ್ನು ಸೇರ್ಪಡೆ ಮಾಡಿ ಇಲ್ಲವೆ ರಾಜೀನಾಮೆ ನೀಡಿ ಎಂದು ನಿವೃತ್ತ ಇಂಜಿನಿಯರ್ ಆರ್.ಜಯರಾಮಯ್ಯ ಒತ್ತಾಯಿಸಿದರು.

Tumkur  Increased water drought in many villages: Forced to drain Bhadra water  snr

ಶಿರಾ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಸಿರಿ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ನಿರ್ಲಕ್ಷಿಸಿರುವ ಹುಲಿಕುಂಟೆ ಮತ್ತು ಗೌಡಗೆರೆ ಹೋಬಳಿಗಳ ಎಲ್ಲಾ ಕೆರೆಗಳಿಗೆ ನೀರು ಹರಿಸಿಸುತ್ತೇನೆ ಎಂದು ಶಾಸಕ ಟಿ.ಬಿ.ಜಯಚಂದ್ರ ಅವರು ಆಶ್ವಾಸನೆ ನೀಡಿದ್ದು, ಕೊಟ್ಟ ಮಾತಿನಂತೆ ಭದ್ರಾ ಯೋಜನೆಯಡಿ ಗೌಡಗೆರೆ ಹೋಬಳಿಯ ಕೆರೆಗಳನ್ನು ಸೇರ್ಪಡೆ ಮಾಡಿ ಇಲ್ಲವೆ ರಾಜೀನಾಮೆ ನೀಡಿ ಎಂದು ನಿವೃತ್ತ ಇಂಜಿನಿಯರ್ ಆರ್.ಜಯರಾಮಯ್ಯ ಒತ್ತಾಯಿಸಿದರು.

ಅವರು ನಗರದ ಪಾಂಡುರಂಗ ರುಕ್ಮಿಣಿ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಗೌಡಗೆರೆ ಹೋಬಳಿಗೆ ಭದ್ರ ಯೋಜನೆಯ ನೀರು ಹರಿಸುತ್ತೇನೆಂದು ಘೋಷಿಸಿದ ಟಿ.ಬಿ.ಜಯಚಂದ್ರ ಅವರು ಈಗ ಅಲಕ್ಷ್ಯ ಮಾಡುತ್ತಿ ದ್ದಾರೆ. ಮೂಲಭೂತ ಸೌಕರ್ಯಗಳ ಕೊರತೆಯಿರುವ ಬರಪೀಡಿತ ಗಡಿ ಪ್ರದೇಶಗಳಲ್ಲಿರುವ ಹುಲಿಕುಂಟೆ ಹಾಗೂ ಗೌಡಗೆರೆ ಹೋಬಳಿಯಲ್ಲಿ ಸುಮಾರು ೩೮ ಕ್ಕೂ ಹೆಚ್ಚು ಕೆರೆಗಳಿದ್ದು, ಈ ಕೆರೆಗಳಿಗೆ ಯಾವುದೇ ಜಲಮೂಲಗಳಿಂದ ನೀರು ಪೂರೈಕೆ ಮಾಡಲು ಸಾಧ್ಯವಾಗಿಲ್ಲ.

ಕಳ್ಳಂಬೆಳ್ಳ, ಮದಲೂರು ಸೇರಿದಂತೆ ಇನ್ನೂ ಹಲವು ಕೆರೆಗಳಿಗೆ ಈಗಾಗಲೇ ಹೇಮಾವತಿ ಜಲಾಶಯದಿಂದ ನೀರು ಹರಿಸ ಲಾಗುತ್ತಿದೆ. ಆದರೂ ಮತ್ತೆ ಭದ್ರಾ ಮೇಲ್ದಂಡೆ ಯೋಜನೆಯಡಿಯಲ್ಲೂ ಈ ಕೆರೆಗಳಿಗೆ ನೀರು ಹರಿಸಲು ಸೇರ್ಪಡೆ ಮಾಡಲಾ ಗಿದೆ. ಇದರಿಂದ ಮುಂದೊಂದು ದಿನ ಹೇಮಾವತಿ ನೀರು ನಿಲ್ಲಿಸುವ ಸಾಧ್ಯತೆ ಇದ್ದು, ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲು ನಿರ್ಲಕ್ಷಕ್ಕೊಳಗಾಗಿರುವ ಗೌಡಗೆರೆ ಹಾಗೂ ಹುಲಿಕುಂಟೆ ಹೋಬಳಿಯ ಸುಮಾರು ೩೮ಕ್ಕೂ ಹೆಚ್ಚು ಕೆರೆಗಳನ್ನು ಭದ್ರ ಮೇಲ್ದಂಡೆ ಯೋಜನೆಗೆ ಸೇರ್ಪಡೆ ಮಾಡಿ ಎಂದು ಒತ್ತಾಯಿಸಿದರು.

Latest Videos
Follow Us:
Download App:
  • android
  • ios