ತುಮಕೂರು : 19ರಂದು ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ
ನಗರದ ಬಿ.ಜಿ.ಎಸ್.ವೃತ್ತದಲ್ಲಿರುವ ನಾಗರಕಟ್ಟೆಗಣಪತಿ ದೇವಸ್ಥಾನದಲ್ಲಿ ಇದೇ 19 ರಂದು ಮಂಗಳವಾರ ವಿನಾಯಕ ಚತುರ್ಥಿಯಂದು 6ನೇ ವರ್ಷದ ಹಿಂದೂ ಮಹಾ ಗಣಪತಿಯ ಪ್ರತಿಷ್ಠಾಪನೆಯನ್ನು ನಿಶ್ಚಯಿಸಲಾಗಿದೆ ಎಂದು ಹಿಂದೂ ಮಹಾ ಗಣಪತಿ ಸ್ವಾಗತ ಸಮಿತಿಯ ಅಧ್ಯಕ್ಷ ಟಿ.ಬಿ.ಶೇಖರ್ ತಿಳಿಸಿದ್ದಾರೆ.
ತುಮಕೂರು : ನಗರದ ಬಿ.ಜಿ.ಎಸ್.ವೃತ್ತದಲ್ಲಿರುವ ನಾಗರಕಟ್ಟೆಗಣಪತಿ ದೇವಸ್ಥಾನದಲ್ಲಿ ಇದೇ 19 ರಂದು ಮಂಗಳವಾರ ವಿನಾಯಕ ಚತುರ್ಥಿಯಂದು 6ನೇ ವರ್ಷದ ಹಿಂದೂ ಮಹಾ ಗಣಪತಿಯ ಪ್ರತಿಷ್ಠಾಪನೆಯನ್ನು ನಿಶ್ಚಯಿಸಲಾಗಿದೆ ಎಂದು ಹಿಂದೂ ಮಹಾ ಗಣಪತಿ ಸ್ವಾಗತ ಸಮಿತಿಯ ಅಧ್ಯಕ್ಷ ಟಿ.ಬಿ.ಶೇಖರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಹಿಂದುಗಳಲ್ಲಿ ಅಡಗಿದ್ದ ಧಾರ್ಮಿಕ ಭಾವನೆಗೆ ಹೊಸರೂಪ ನೀಡಲು ಮನೆಮನೆಯಲ್ಲಿ ನಡೆಯುತ್ತಿದ್ದ ಗಣೇಶನ ಪೂಜೆಯನ್ನು 1893ರಲ್ಲಿ ಲೋಕಮಾನ್ಯ ಬಾಲಗಂಗಾಧರ್ ತಿಲಕ್‌ರವರು ನಾಡಹಬ್ಬವನ್ನಾಗಿ ಪರಿವರ್ತಿಸಿದರು. ಇದರಿಂದಾಗಿ ಹಿಂದೂಗಳಲ್ಲಿ ಧಾರ್ಮಿಕ ಭಾವನೆಯೊಂದಿಗೆ ಸ್ವಾತಂತ್ರ್ಯ ಹೋರಾಟಕ್ಕೂ ಪ್ರೇರಣೆ ನೀಡಿದರು. ಹಿಂದುಗಳಲ್ಲಿ ಸಾಮರಸ್ಯ, ಸಂಸ್ಕಾರ, ಸಂಸ್ಕೃತಿ, ಸುಸಂಸ್ಕೃತ ನಡತೆ ಹಾಗೂ ರಾಷ್ಟ್ರೀಯ ಭಾವನೆ ಮೂಡಲು ಆರಂಭಿಸಿತು. ಕಳೆದ ಆರು ವರ್ಷಗಳಿಂದ ತುಮಕೂರಿನಲ್ಲಿ ಹಿಂದೂ ಮಹಾ ಗಣಪತಿ ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿದ್ದು, ಈ ವರ್ಷವೂ ಸೆಪ್ಟೆಂಬರ್ 19 ರಂದು ಅದ್ಧೂರಿಯಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ ಎಂದರು.
ಸೆ.30ರ ಶನಿವಾರ ಬೆಳಗ್ಗೆ 11 ಗಂಟೆಯಿಂದ ಹಿಂದೂ ಮಹಾ ಗಣಪತಿಯ ಅದ್ಧೂರಿ ವಿಸರ್ಜನಾ ಮಹೋತ್ಸವವು ತುಮಕೂರಿನ ಸಮಸ್ತ ಹಿಂದೂ ಸಮಾಜದ ಬಾಂಧವರ ಸಹಕಾರ ಮತ್ತು ಸಹಯೋಗದೊಂದಿಗೆ, ಹರ-ಗುರು ಚರಮೂರ್ತಿಗಳ ದಿವ ಸಾನಿಧ್ಯದೊಂದಿಗೆ, ತುಮಕೂರಿನ ರಾಜ ಬೀದಿಗಳಲ್ಲಿ ಹಲವಾರು ಕಲಾತಂಡಗಳೊಂದಿಗೆ ಮೆರವಣಿಯ ಮುಖಾಂತರ ಸಾಗಿ ನಂತರ ಹಿಂದೂ ಮಹಾ ಗಣಪತಿಯ ವಿಸರ್ಜನೆ ನಡೆಯಲಿದೆ. ಸಮಸ್ತ ಹಿಂದೂ ಸಮಾಜದ ಬಂಧುಗಳು ಆಗಮಿಸಿ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಂತೆ ಟಿ.ಬಿ.ಶೇಖರ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬಜರಂಗದಳದ ಮುಖಂಡ ಜಿ.ಕೆ. ಶ್ರೀನಿವಾಸ್, ನಿರ್ದೇಶಕರಾದ ಕೋರಿ ಮಂಜಣ್ಣ, ವಿವಿಧ ಮುಖಂಡರು ಪಾಲ್ಗೊಂಡಿದ್ದರು.