Asianet Suvarna News Asianet Suvarna News

Tumakur : ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಖದೀಮರು

ಬ್ಯಾಂಕ್ ಹೆಸರಿನಲ್ಲಿ ಗ್ರಾಹಕರೊಬ್ಬರ ಬ್ಯಾಂಕ್ ಖಾತೆಗೆ ಖದೀಮರು ಕನ್ನ ಹಾಕಿರುವ ಘಟನೆ ತಿಪಟೂರಿನಲ್ಲಿ ನಡೆದಿದೆ. ಪುಣ್ಯ ಎಂಬ ಹೆಸರಿನ ಹೊಟೇಲ್ ನಡೆಸುತ್ತಿರುವ ರೇವಣಸಿದ್ದಪ್ಪ ಅವರ ಬ್ಯಾಂಕ್ ಖಾತೆಗೆ ಖದೀಮರು ಕನ್ನ ಹಾಕಿದ್ದಾರೆ.

Tumkur   Hotel Owner Bank Account hacked   snr
Author
First Published Oct 11, 2023, 6:41 AM IST

 ತುಮಕೂರು : ಬ್ಯಾಂಕ್ ಹೆಸರಿನಲ್ಲಿ ಗ್ರಾಹಕರೊಬ್ಬರ ಬ್ಯಾಂಕ್ ಖಾತೆಗೆ ಖದೀಮರು ಕನ್ನ ಹಾಕಿರುವ ಘಟನೆ ತಿಪಟೂರಿನಲ್ಲಿ ನಡೆದಿದೆ. ಪುಣ್ಯ ಎಂಬ ಹೆಸರಿನ ಹೊಟೇಲ್ ನಡೆಸುತ್ತಿರುವ ರೇವಣಸಿದ್ದಪ್ಪ ಅವರ ಬ್ಯಾಂಕ್ ಖಾತೆಗೆ ಖದೀಮರು ಕನ್ನ ಹಾಕಿದ್ದಾರೆ.

ಬ್ಯಾಂಕ್ ನಿಂದ ಮೇಸೆಜ್ ಬಂದಿದೆ ಎಂದು ನಂಬಿಸಿ 90 ಸಾವಿರ ರುಪಾಯಿ ತಿಪಟೂರಿನ ರೇವಣಸಿದ್ದಪ್ಪ ಕಳೆದುಕೊಂಡಿದ್ದಾರೆ.

ಕೆವೈಸಿ ಅಪ್ಡೇಟ್ ಮಾಡಿ ಇಲ್ಲದಿದ್ದರೇ ನಿಮ್ಮ ಅಕೌಂಟ್ ಬ್ಲಾಕ್ ಆಗುತ್ತೆ ಎಂದು ಮೆಸೇಜ್ ಬಂದಿದೆ. ಈ ಮೆಸೇಜ್ ನೋಡಿದ ರೇವಣ್ಣಸಿದ್ದಪ್ಪ ಕೂಡಲೇ ಆ ನಂಬರ್ ಗೆ ಕರೆ ಮಾಡಿದ್ದಾರೆ. ಈ ವೇಳೆ ನೀವು ಕೆವೈಸಿ ಅಪ್ಡೇಟ್ ಮಾಡಬೇಕು ಎಂದು ವಂಚಕರು ಹೇಳಿದ್ದಾರೆ. ಅಲ್ಲದೇ ರೇವಣ್ಣ ಸಿದ್ದಪ್ಪನ ಬಳಿ ಪಾನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ನಂಬರ್ ಪಡೆದಿದ್ದಾರೆ. ಕೂಡಲೇ ಒಂದು ಒಟಿಪಿ ಬಂದಿದೆ ಎಂದು ಆ ನಂಬರ್ ಅನ್ನು ಸೈಬರ್ ವಂಚಕರು ಪಡೆದು 90 ಸಾವಿರ ರುಪಾಯಿಗೆ ಕನ್ನ ಹಾಕಿದ್ದಾರೆ. ತುಮಕೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ವಿಜರ್‌ಲೆಂಡಿನ ಬ್ಯಾಂಕುಗಳಲ್ಲಿ ಹಣ ಇರಿಸಿರುವ ಭಾರತದ ಶ್ರೀಮಂತರ ಮಾಹಿತಿ  ಹಸ್ತಾಂತರ

ನವದೆಹಲಿ (ಅ.10): ತೆರಿಗೆಗಳ್ಳರ ಸ್ವರ್ಗ ಎಂದು ಹೇಳಲಾಗುವ ಸ್ವಿಜರ್‌ಲೆಂಡಿನ ಬ್ಯಾಂಕುಗಳಲ್ಲಿ ಹಣ ಇರಿಸಿರುವ ಭಾರತದ ಶ್ರೀಮಂತರ ಮಾಹಿತಿಯನ್ನು ಸ್ವಿಜರ್‌ಲೆಂಡ್‌ ಸರ್ಕಾರ ಭಾರತ ಸರ್ಕಾರಕ್ಕೆ ಹಸ್ತಾಂತರಿಸಿದೆ. ಇದು ಸ್ವಿಸ್‌ ಸರ್ಕಾರ ಭಾರತಕ್ಕೆ ನೀಡಿರುವ 5ನೇ ಕಂತಿನ ಮಾಹಿತಿಯಾಗಿದೆ.

ಸ್ವಿಜರ್‌ಲೆಂಡ್‌ ಹಾಗೂ ಭಾರತದ ನಡುವೆ ಇರುವ ಸ್ವಯಂಚಾಲಿತ ಮಾಹಿತಿ ಹಸ್ತಾಂತರ ಒಪ್ಪಂದದಡಿ ಈ ಭಾರತಕ್ಕೆ ಈ ಮಾಹಿತಿ ನೀಡಲಾಗಿದೆ. ಸ್ವಿಸ್‌ ಬ್ಯಾಂಕುಗಳಲ್ಲಿ ಹಣ ಇರಿಸಿರುವ ಎಷ್ಟು ಭಾರತೀಯರ ಮಾಹಿತಿಯನ್ನು ನೀಡಲಾಗಿದೆ, ಎಷ್ಟು ಮೊತ್ತದ ಹಣದ ಬಗ್ಗೆ ಮಾಹಿತಿ ನೀಡಲಾಗಿದೆ, ಅದರಲ್ಲಿ ಕಪ್ಪು ಹಣವೆಷ್ಟು ಎಂಬುದನ್ನು ಸ್ವಿಜರ್‌ಲೆಂಡ್‌ ಸರ್ಕಾರ ಬಹಿರಂಗಪಡಿಸಿಲ್ಲ. ಆದರೆ ‘ನೂರಾರು ಖಾತೆಗಳ ಮಾಹಿತಿ ನೀಡಿದ್ದೇವೆ. ಅವುಗಳಲ್ಲಿ ಹಲವು ಖಾತೆ ಹೊಂದಿರುವ ಕೆಲವು ವ್ಯಕ್ತಿಗಳು, ಕಾರ್ಪೊರೇಟ್‌ ಕಂಪನಿಗಳು ಹಾಗೂ ಟ್ರಸ್ಟ್‌ಗಳ ಮಾಹಿತಿಯೂ ಸೇರಿದೆ’ ಎಂದಷ್ಟೇ ತಿಳಿಸಿದೆ.

ಅಂಬಾನಿ, ಟಾಟಾ, ಪೆಪ್ಸಿಕೋ, ಕೋಕಾಕೋಲಾಗೆ ಎದುರಾಳಿ 7000 ಕೋಟಿ ರೂ. ಕಂಪನಿಗೆ ವಾರಸುದಾರೆ ಈಕೆ

‘ಒಟ್ಟು 104 ದೇಶಗಳ ಜೊತೆಗೆ 36 ಲಕ್ಷ ಖಾತೆಗಳ ಕುರಿತಾದ ಮಾಹಿತಿ ಹಂಚಿಕೊಳ್ಳಲಾಗಿದೆ. ಅದರಲ್ಲಿ ಖಾತೆಯ ಸಂಖ್ಯೆ, ಅದರಲ್ಲಿರುವ ಹಣದ ಮೊತ್ತ, ಖಾತೆದಾರರ ಹೆಸರು, ವಿಳಾಸ, ದೇಶ, ತೆರಿಗೆ ಗುರುತಿನ ಸಂಖ್ಯೆ ಇತ್ಯಾದಿಗಳು ಸೇರಿವೆ. ಈ ಮಾಹಿತಿ ಆಧರಿಸಿ ಆಯಾ ದೇಶಗಳು ಸದರಿ ಖಾತೆದಾರರು ತಮ್ಮ ದೇಶದಲ್ಲಿ ಸರಿಯಾಗಿ ತೆರಿಗೆ ಪಾವತಿಸಿದ್ದಾರಾ ಅಥವಾ ವಂಚನೆ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಬಹುದು’ ಎಂದು ಸ್ವಿಜರ್‌ಲೆಂಡ್‌ ತಿಳಿಸಿದೆ.

ವಿಶ್ವದ ನಂ.1 ಕಂಪೆನಿ ಹೊಂದಿರುವ ಭಾರತೀಯ ಉದ್ಯಮಿ ಬಳಿ ಅತ್ಯಂತ ದುಬಾರಿ ಮನೆ, ಇದು ಅಂಬಾನಿ ಮನೆ ಸಮೀಪದಲ್ಲಿದೆ

2019ರಿಂದ ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ಸ್ವಿಸ್‌ ಸರ್ಕಾರ ಭಾರತಕ್ಕೆ ಸ್ವಿಸ್‌ ಬ್ಯಾಂಕ್‌ಗಳಲ್ಲಿನ ಭಾರತೀಯ ಖಾತೆದಾರರ ಮಾಹಿತಿಯನ್ನು ನೀಡುತ್ತಾ ಬಂದಿದೆ. ತೆರಿಗೆ ವಂಚಿಸಿ ಸ್ವಿಸ್‌ ಬ್ಯಾಂಕುಗಳಲ್ಲಿ ಕಪ್ಪು ಹಣ ಇರಿಸುವ ಶ್ರೀಮಂತರನ್ನು ಮಟ್ಟಹಾಕಲು ಭಾರತ ಸರ್ಕಾರ ಈ ಮಾಹಿತಿಯನ್ನು ಬಳಸಿಕೊಳ್ಳುತ್ತದೆ. ಸ್ವಿಜರ್‌ಲೆಂಡಿನಲ್ಲಿ ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿರುವ ಭಾರತೀಯರ ಮಾಹಿತಿಯನ್ನೂ ಅಲ್ಲಿನ ಸರ್ಕಾರ ಭಾರತಕ್ಕೆ ನೀಡುತ್ತದೆ.

Follow Us:
Download App:
  • android
  • ios